ಅನರ್ಹತೆ ರದ್ದಾಗಿ ಶೀಘ್ರ ಮತ್ತೆ ರಾಹುಲ್‌ಗೆ ಸಂಸತ್‌ ಸದಸ್ಯತ್ವ

ಆ.8ರಿಂದ 10ರವರೆಗೆ ಲೋಕಸಭೆಯಲ್ಲಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಚರ್ಚೆ ನಡೆಯಲಿದೆ. ಆ.11 ಸಂಸತ್‌ ಮುಂಗಾರು ಅಧಿವೇಶನಕ್ಕೆ ಕೊನೆಯ ದಿನ. ಹೀಗಾಗಿ ಅಷ್ಟೊತ್ತಿಗೆ ರಾಹುಲ್‌ ಅನರ್ಹತೆ ರದ್ದಾಗುತ್ತಾ ಎಂಬುದು ಕುತೂಹಲ ಕೆರಳಿಸಿದೆ.

Disqualification Cancel and soon Rahul Gandhi Become Member of Parliament grg

ನವದೆಹಲಿ(ಆ.05):  ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ ಮಾಜಿ ಸಂಸದ ರಾಹುಲ್‌ ಗಾಂಧಿ ಅವರಿಗೆ ನೀಡಲಾಗಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್‌ ತಡೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕನ ಸಂಸತ್‌ ಸದಸ್ಯತ್ವದ ಅನರ್ಹತೆ ತೆರವಿಗೆ ದಾರಿ ಸುಗಮವಾಗಿದೆ. ಶಿಕ್ಷೆಗೆ ತಡೆ ಲಭಿಸಿರುವುದರಿಂದ ಮುಂದಿನ ಚುನಾವಣೆಯಲ್ಲಿ ರಾಹುಲ್‌ ಸ್ಪರ್ಧಿಸುವ ಅವಕಾಶವನ್ನೂ ಮರಳಿ ಪಡೆದುಕೊಂಡಿದ್ದಾರೆ.

ಅನರ್ಹತೆ ರದ್ದತಿಗೆ ರಾಹುಲ್‌ ಗಾಂಧಿ ಅವರು ಲೋಕಸಭೆ ಸ್ಪೀಕರ್‌ಗೆ ಕೋರ್ಟ್‌ ಆದೇಶ ಪ್ರತಿಯೊಂದಿಗೆ ತಮ್ಮ ಪ್ರತಿನಿಧಿ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಅಥವಾ ಸ್ಪೀಕರ್‌ ಓಂ ಬಿರ್ಲಾ ಅವರೇ ಸ್ವಯಂಪ್ರೇರಿತರಾಗಿ ಅನರ್ಹತೆ ರದ್ದುಗೊಳಿಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಈ ಪ್ರಕ್ರಿಯೆಗೆ ಎಷ್ಟು ದಿನ ಹಿಡಿಯಲಿದೆ ಎಂಬ ಮಾಹಿತಿ ಇಲ್ಲ.

Party Rounds: ರಾಹುಲ್‌ ಗಾಂಧಿ ಸಂಸದ ಸ್ಥಾನ ಮತ್ತೆ ಸಿಗುತ್ತಾ? ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಚ್‌ಡಿಕೆ ಚಾಟಿ!

ಆ.8ರಿಂದ 10ರವರೆಗೆ ಲೋಕಸಭೆಯಲ್ಲಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಚರ್ಚೆ ನಡೆಯಲಿದೆ. ಆ.11 ಸಂಸತ್‌ ಮುಂಗಾರು ಅಧಿವೇಶನಕ್ಕೆ ಕೊನೆಯ ದಿನ. ಹೀಗಾಗಿ ಅಷ್ಟೊತ್ತಿಗೆ ರಾಹುಲ್‌ ಅನರ್ಹತೆ ರದ್ದಾಗುತ್ತಾ ಎಂಬುದು ಕುತೂಹಲ ಕೆರಳಿಸಿದೆ.

ಅಧ್ಯಯನ ಮಾಡಿ ನಿರ್ಧಾರ- ಲೋಕಸಭೆ:

ಸುಪ್ರಿಂಕೋರ್ಟ್‌ನ ಆದೇಶ ತಮಗೆ ಸಿಕ್ಕ ಮೇಲೆ ಅದನ್ನು ಅಧ್ಯಯನ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಲೋಕಸಭೆ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಮೇ ತಿಂಗಳಲ್ಲಿ ಲಕ್ಷದ್ವೀಪದ ಸಂಸದ ಮೊಹಮ್ಮದ್‌ ಫೈಜಲ್‌ ಅವರ ಸಂಸತ್‌ ಸದಸ್ಯತ್ವ ಮರುಸ್ಥಾಪನೆಗೆ ಕೇರಳ ಹೈಕೋರ್ಟ್‌ 10 ವರ್ಷಗಳ ಜೈಲುಶಿಕ್ಷೆಗೆ ತಡೆ ನೀಡಿದ ಬಳಿಕ ಲೋಕಸಭೆ ಸಚಿವಾಲಯ ಎರಡು ತಿಂಗಳು ಸಮಯ ತೆಗೆದುಕೊಂಡಿತ್ತು. ಹೀಗಾಗಿ ರಾಹುಲ್‌ ಗಾಂಧಿಯವರ ಸದಸ್ಯತ್ವ ಮರುಸ್ಥಾಪನೆ ತ್ವರಿತವಾಗಿ ಆಗುವುದೇ ಅಥವಾ ವಿಳಂಬವಾಗುವುದೇ ಎಂಬುದು ಸ್ಪಷ್ಟವಿಲ್ಲ.

ಸ್ಪೀಕರ್‌ಗೆ ಕಾಂಗ್ರೆಸ್‌ ಮನವಿ:

ರಾಹುಲ್‌ ಅವರ ಸಂಸತ್‌ ಸದಸ್ಯತ್ವ ಮರುಸ್ಥಾಪನೆ ಮಾಡುವಂತೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು, ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ‘ಬಿಜೆಪಿಯ ಷಡ್ಯಂತ್ರದಿಂದಾಗಿ ರಾಹುಲ್‌ ಗಾಂಧಿಯವರ ಸಂಸತ್‌ ಸದಸ್ಯತ್ವ ರದ್ದುಗೊಂಡಿತ್ತು. ಈಗ ಸುಪ್ರೀಂಕೋರ್ಟ್‌ ಆದೇಶದಿಂದ ಸತ್ಯಕ್ಕೆ ಜಯವಾಗಿದೆ. ನಾವು ಸ್ಪೀಕರ್‌ ಅವರನ್ನು ಭೇಟಿಯಾಗಿ ಸಂಸತ್‌ ಸದಸ್ಯತ್ವ ಮರುಸ್ಥಾಪನೆ ಮಾಡುವಂತೆ ಮನವಿ ಸಲ್ಲಿಸಿದ್ದೇವೆ’ ಎಂದರು.

Breaking: ಮೋದಿ ಸರ್‌ನೇಮ್‌ ಕೇಸ್‌: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌; ಜೈಲು ಶಿಕ್ಷೆ, ಅನರ್ಹತೆಗೆ ಸುಪ್ರೀಂಕೋರ್ಟ್‌ ತಡೆ

‘ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಪರ ರಾಹುಲ್‌ ಮಾತನಾಡಬೇಕು. ಆದರೆ ಸರ್ಕಾರ ಏನಾದರೂ ತಂತ್ರ ಹೂಡಿ ಅದಕ್ಕೆ ಅಡ್ಡಿಪಡಿಸಬಹುದು. ಹೀಗಾಗಿ ಸದಸ್ಯತ್ವ ಮರುಸ್ಥಾಪನೆಗೆ ತಡ ಮಾಡದಂತೆ ನಾವು ಸ್ಪೀಕರ್‌ಗೆ ಮನವಿ ಮಾಡಿದ್ದೇವೆ’ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ತಿಳಿಸಿದ್ದಾರೆ.

ರಾಹುಲ್‌ಗೆ ಮತ್ತೆ ಚುನಾವಣೆ ಸ್ಪರ್ಧೆಗೆ ಅವಕಾಶ

ಶಿಕ್ಷೆಗೆ ಸುಪ್ರೀಂಕೋರ್ಟ್‌ ತಡೆ ನೀಡಿರುವುದರಿಂದ ರಾಹುಲ್‌ ಗಾಂಧಿ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಲಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮೊದಲೇ ಅವರ ಶಿಕ್ಷೆಗೆ ತಡೆ ಲಭಿಸಿರುವುದರಿಂದ ಮುಂದಿನ ಚುನಾವಣೆಯಲ್ಲೇ ರಾಹುಲ್‌ ಅವರು ಪ್ರಕರಣದ ಅಂತಿಮ ಆದೇಶ ಹೊರಬೀಳುವವರೆಗೂ ಸ್ಪರ್ಧಿಸಬಹುದಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕನಿಷ್ಠ ಎರಡು ವರ್ಷಗಳ ಜೈಲುಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳು ಶಾಸನಸಭೆಯ ಸದಸ್ಯತ್ವ ಕಳೆದುಕೊಳ್ಳುವುದಷ್ಟೇ ಅಲ್ಲ, ಶಿಕ್ಷೆಯ ಅವಧಿ ಮುಗಿದ ಬಳಿ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಕಳೆದುಕೊಳ್ಳುತ್ತಾರೆ.

Latest Videos
Follow Us:
Download App:
  • android
  • ios