2023 ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದಲ್ಲಿ 52,191 ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ ಯಶಸ್ವಿಯಾಗಿದೆ. 2019ರಲ್ಲಿ ಸುಪ್ರೀಂ ಕೋರ್ಟ್‌ 41 ಸಾವಿರ ಪ್ರಕರಣವನ್ನು ವಿಲೇವಾರಿ ಮಾಡಿದ್ದು ದಾಖಲೆಯಾಗಿತ್ತು. ಈ ಒಂದು ವರ್ಷದ ಅವಧಿಯಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಉನ್ನತ ನ್ಯಾಯಾಲಯವು ವಿಲೇವಾರಿ ಮಾಡುರುವುದು ವಿಶೇಷವಾಗಿದೆ.

ನವದೆಹಲಿ (ಡಿ.22): ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರ ನೇತೃತ್ವದಲ್ಲ ಸುಪ್ರೀಂ ಕೋರ್ಟ್‌ ಈ ವರ್ಷ ಪ್ರಕರಣ ವಿಲೇವಾರಿಯಲ್ಲಿ ದೊಡ್ಡ ದಾಖಲೆ ನಿರ್ಮಾಣ ಮಾಡಿದೆ. 2019ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಸುಪ್ರೀಂ ಕೋರ್ಟ್‌ ಈ ವರ್ಷ ಇನ್ನಷ್ಟು ಪರಿಷ್ಕರಿಸಿದೆ. ಈ ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಎದುರು ಬಂದಿದ್ದ ಅಂದಾಜು 52 ಸಾವಿರ (52,191) ಪ್ರಕರಣವನ್ನು ಇತ್ಯರ್ಥ ಮಾಡಿದೆ. 2019ರಲ್ಲಿ ಸುಪ್ರೀಂ ಕೋರ್ಟ್‌ 41,100 ಕೇಸ್‌ಗಳನ್ನು ಇತ್ಯರ್ಥ ಮಾಡಿದ್ದು ಈವರೆಗಿನ ದಾಖಲೆ ಎನಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿಲೇವಾರಿಯಾಗಿರುವ ಕೇಸ್‌ಗಳ ಸಂಖ್ಯೆಯಲ್ಲಿ ಶೇ. 28ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 39,800 ಕೇಸ್‌ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗಿದ್ದರೆ, ಈ ಬಾರಿ 52,191 ಕೇಸ್‌ಗಳಿಗೆ ಏರಿಕೆಯಾಗಿದೆ. ಇನ್ನು ಇದೇ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ ಬಾಗಿಲಿಗಿ 49,191 ಕೇಸ್‌ಗಳು ಬಂದಿವೆ. ಇದರರ್ಥ, ಈ ಬಾರಿ ತನ್ನಲ್ಲಿ ದಾಖಲಾಗಿರುವ ಕೇಸ್‌ಗಳಿಂತ ಹೆಚ್ಚಿನ ಕೇಸ್‌ಗಳನ್ನು ಸುಪ್ರೀಂ ಕೋರ್ಟ್‌ ಇತ್ಯರ್ಥ ಮಾಡಿದ ಅಪರೂಪದ ದಾಖಲೆಯನ್ನು ನಿರ್ಮಿಸಿದೆ.

2023ರಲ್ಲಿ ಅಂದಾಜು 17ಕ್ಕಿಂತ ಹೆಚ್ಚು ಸಾಂವಿಧಾನಿಕ ಪೀಠದ ಕೇಸ್‌ಗಳನ್ನು ನಿರ್ಧಾರ ಮಾಡಲಾಗಿದೆ ಅಥವಾ ತೀರ್ಪನ್ನು ಕಾಯ್ದಿರಿಸಲಾಗಿದೆ. ಸಾಂವಿಧಾನಿಕ ಪೀಠವನ್ನು ಐದು ಅಥವಾ ಅದಕ್ಕಿಂತ ಹೆಚ್ಚು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರನ್ನು ಹೊಂದಿರುವ ಪೀಠ ಎಂದು ವ್ಯಾಖ್ಯಾನಿಸಲಾಗಿದೆ. ಇದರೊಂದಿಗೆ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು 36 ರಿಂದ 19ಕ್ಕೆ ಇಳಿಸಿದೆ.

ಮಥುರಾ ಕೃಷ್ಣ ಜನ್ಮಭೂಮಿ ಸರ್ವೇ: ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ; ಹಿಂದೂಗಳಿಗೆ ಮತ್ತೆ ಜಯ!

ಸಂವಿಧಾನ ಪೀಠಗಳು ನೀಡಿದ ಪ್ರಮುಖ ತೀರ್ಪುಗಳಲ್ಲಿ 370 ನೇ ವಿಧಿಯ ರದ್ದತಿ, ಸಲಿಂಗ ವಿವಾಹ ಹಕ್ಕುಗಳ ವಿಚಾರ, ದೆಹಲಿ ಸರ್ಕಾರ ಮತ್ತು ರಾಷ್ಟ್ರ ರಾಜಧಾನಿಯ ಮೇಲಿನ ಕೇಂದ್ರದ ನಡುವಿನ ವಿವಾದ ಮತ್ತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿಂಧೆ ಮತ್ತು ಉದ್ಧವ್‌ ಠಾಕ್ರೆ ನಡುವಿನ ಕದನ ಸೇರಿದೆ. ತ್ವರಿತ ನ್ಯಾಯ ವಿತರಣೆಗೆ ತಂತ್ರಜ್ಞಾನದ ಅಳವಡಿಕೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ ಎಂದು ಸುಪ್ರೀಂ ಕೋರ್ಟ್‌ ಆಗ್ಗಾಗೆ ತಿಳಿಸಿದೆ.

ಲೋಕಸಭೆಯಿಂದ ಅಮಾತುಗೊಂಡ ಮಹುವಾಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ!