ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿಯ ಮೊಹಲ್ಲಾ ಕ್ಲಿನಿಕ್‌ಗೆ ಕರ್ನಾಟಕದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭೇಟಿ ನೀಡಿರುವುದು ದೆಹಲಿಯ ಕಾಂಗ್ರೆದ್‌ ನಾಯಕರನ್ನು ಕೆರಳಿಸಿದೆ. ಇದರ ನಡುವೆ ಐಎನ್‌ಡಿಐಎ ಮೈತ್ರಿಯಲ್ಲಿ ಆಪ್‌ ನರಿ ಇದ್ದಂತೆ ಎಂದು ಟೀಕೆ ಮಾಡಿದ್ದಾರೆ.

ನವದೆಹಲಿ (ಆ.5): ಕರ್ನಾಟಕದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಸ್ಥಾಪನೆ ಮಾಡಿರುವ ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿರುವುದು ದೆಹಲಿಯ ಕಾಂಗ್ರೆಸ್‌ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ದೆಹಲಿಯಲ್ಲಿನ ಕಾಂಗ್ರೆಸ್‌ ನಾಯಕರನ್ನು ಸಂಪರ್ಕ ಮಾಡದೇ ದಿನೇಶ್‌ ಗುಂಡೂರಾವ್‌ ಆಪ್‌ನ ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿರುವುದು ಸರಿಯಲ್ಲ. ಇಂಥ ಭೇಟಿಗಳನ್ನು ಮಾಡುವ ಮುನ್ನ ದಿನೇಶ್‌ ಗುಂಡೂ ರಾವ್‌ ದೆಹಲಿಯ ನಾಯಕರನ್ನು ಭೇಟಿ ಮಾಡಿ ಇಲ್ಲಿನ ರಾಜಕಾರಣವನ್ನು ತಿಳಿದುಕೊಳ್ಳಬೇಕಿತ್ತು. ಈಗಾಗಲೇ ದೆಹಲಿಯಲ್ಲಿ ಸಾಕಷ್ಟು ಮೊಹಲ್ಲಾ ಕ್ಲಿನಿಕ್‌ಗಳಿಗೆ ಬೀಗ ಬಿದ್ದಿದೆ ಎಂದು ದೆಹಲಿ ಕಾಂಗ್ರೆಸ್‌ ನಾಯಕ ಸಂದೀಪ್‌ ದೀಕ್ಷಿತ್‌ ಕಿಡಿಕಾರಿದ್ದಾರೆ. ಆಮ್ ಆದ್ಮಿ ಪಕ್ಷವನ್ನು (ಎಎಪಿ) ತರಾಟೆಗೆ ತೆಗೆದುಕೊಂಡ ದೀಕ್ಷಿತ್, ಇತರ ರಾಜ್ಯಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕಿಂತ ಕಾಂಗ್ರೆಸ್ ಮೇಲೆ ದಾಳಿ ಮಾಡುವತ್ತ ಹೆಚ್ಚು ಗಮನಹರಿಸುತ್ತಿರುವ ಆಮ್‌ ಆದ್ಮಿ ಪಕ್ಷಕ್ಕೆ ಹಿರಿಯ ನಾಯಕರು ಏಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ. "ಐಎನ್‌ಡಿಐಎ ಮೈತ್ರಿಕೂಟದಲ್ಲಿ ಎಎಪಿ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಡಿನಲ್ಲಿ ಸಿಂಹಗಳು ಮತ್ತು ಆನೆಗಳು ಇರುತ್ತವೆ. ಹಾಗೂ ಕೆಲವು ನರಿಗಳು ಸಹ ಇವೆ" ಎಂದು ಟೀಕೆ ಮಾಡಿದ್ದಾರೆ.

ಇನ್ನು ಸಂದೀಪ್‌ ದೀಕ್ಷಿತ್‌ ಅವರ ಹೇಳಿಕೆಯನ್ನು ಹಿಡಿದುಕೊಂಡು ಆಮ್‌ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್‌ ಎರಡನ್ನೂ ಬಿಜೆಪಿ ವಕ್ತಾರ್‌ ಶೆಹಜಾದ್‌ ಪೂನಾವಾಲಾ ಟೀಕಿಸಿದ್ದಾರೆ. ಇಂಥ ಸ್ನೇಹಿತರು ಇದ್ದಾಗ ಯಾವುದೇ ವೈರಿಯ ಅಗತ್ಯವಿ ಇರೋದಿಲ್ಲ ಎಂದು ಹೇಳಿದ್ದಾರೆ. ಕೇವಲ ರಾಜಕೀಯ ಅನುಕೂಲಕ್ಕಾಗಿ ಮಾಡಿಕೊಂಡಿರುವ ಮೈತ್ರಿ ಇದಾಗಿದ್ದು, ಜನರನ್ನು ಉದ್ದಾರ ಮಾಡುವ ಯಾವುದೇ ಇಂಗಿತ ಹೊಂದಿಲ್ಲ. ಇನ್ನು ದೆಹಲಿ ಸೇವಾ ಮಸೂದೆ ಬಿಲ್‌ ಸಂಸತ್ತಿನಲ್ಲಿ ಪಾದ್‌ ಆಗಿರುವ ಕಾರಣ, ಆಪ್‌ ಈಗ ಐಎನ್‌ಡಿಐಎ ಮೈತ್ರಿಕೂಟವನ್ನು ತೊರೆಯುವ ಸಾಧ್ಯತೆಯೇ ದಟ್ಟವಾಗಿದೆ.

Scroll to load tweet…

'I.N.D.I.A' ಹೆಸರಿಟ್ಟುಕೊಂಡ ವಿಪಕ್ಷಗಳ ಒಕ್ಕೂಟಕ್ಕೆ ಶಾಕ್​: ಒಕ್ಕೂಟದ 26 ಪಕ್ಷಗಳಿಗೂ ಹೈಕೋರ್ಟ್‌ ನೋಟಿಸ್‌

ಈ ನಡುವೆ ಗೃಹ ಸಚಿವ ಅಮಿತ್‌ ಶಾ, ಆಮ್‌ ಅದ್ಮಿ ಪಾರ್ಟಿಯ ಜೊತೆಗೆ ಹೊಂದಿರುವ ಆಪ್ತ ಸಂಬಂಧದ ಬಗ್ಗೆಯೂ ಸಂದೀಪ್‌ ದೀಕ್ಷಿತ್‌ ಮಾತನಾಡಿದ್ದಾರೆ. ಅಮಿತ್‌ ಶಾ ಹಾಗೂ ಆಮ್‌ ಆದ್ಮಿ ಪಾರ್ಟಿ ನಡುವೆ ಉತ್ತಮ ಬಾಂಧವ್ಯವಿದೆ. ಆಗಾಗ್ಗೆ ಇವರು ಮಾತುಕತೆಗಳಲ್ಲಿ ತೊಡಗಿಕೊಳ್ಳುತ್ತಾರೆ ಹಾಗೂ ಪರಸ್ಪರ ಒಪ್ಪಿಗೆಯ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆಮ್‌ ಆದ್ಮಿ ಪಾರ್ಟಿ ಮಧ್ಯಪ್ರದೇಶ ಹಾಗೂ ಹರಿಯಾಣದಲ್ಲಿ ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಾರ್ಟಿಯನ್ನು ದೂಷಣೆ ಮಾಡೋದಿಲ್ಲ. ಆದರೆ, ಕಾಂಗ್ರೆಸ್‌ ಪಕ್ಷವನ್ನು ನಿರಂತರವಾಗಿ ಟೀಕೆ ಮಾಡಿದೆ ಎಂದು ಹೇಳಿದ್ದಾರೆ.

‘I.N.D.I.A.’ ಮೈತ್ರಿಕೂಟದ ಮರು ನಾಮಕರಣ ಮಾಡಿದ ಪ್ರಧಾನಿ: ಮೋದಿ ಇಟ್ಟ ಹೊಸ ಹೆಸರು ಹೀಗಿದೆ ನೋಡಿ..