ನವದೆಹಲಿ[ಮಾ.06]: ದೇಶಾದ್ಯಂತ 30ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ, ಡಿಜಿಟ್‌ ಎಂಬ ಡಿಜಿಟಲ್‌ ವಿಮಾ ಕಂಪನಿಯೊಂದು ಈ ಸೋಂಕಿನ ಚಿಕಿತ್ಸೆಗಾಗಿ ಹೊಸ ವಿಮಾ ಪಾಲಿಸಿ ಬಿಡುಗಡೆ ಮಾಡಿದೆ.

60 ವರ್ಷದೊಳಗಿನವರು 25 ಸಾವಿರ ರು., 50 ಸಾವಿರ ರು., 75 ಸಾವಿರ ರು., 1 ಲಕ್ಷ ರು., 1.25 ಲಕ್ಷ ರು., 1.5 ಲಕ್ಷ ರು., 1.75 ಲಕ್ಷ ರು. ಹಾಗೂ 2 ಲಕ್ಷ ರು.ವರೆಗೂ ಪಾಲಿಸಿ ಖರೀದಿಸಬಹುದು. 25 ಸಾವಿರ ರು. ಮೌಲ್ಯದ ವಿಮಾ ಸೌಲಭ್ಯಕ್ಕೆ ಗ್ರಾಹಕರು 253 ರು. ಹಾಗೂ 50 ಸಾವಿರ ರು ಮೌಲ್ಯದ ವಿಮಾ ಪಾಲಿಸಿಗೆ 507 ರು. ಪಾವತಿಸಬೇಕು.

ಚೀನಾ​ಕ್ಕಿಂತ ಭಾರ​ತಕ್ಕೆ ಕೊರೋ​ನಾ ದೊಡ್ಡ ಕಂಟ​ಕ!

ಈ ವಿಮಾ ಹಣವನ್ನು ಗ್ರಾಹಕರು ಕ್ಲೇಮು ಮಾಡಿಕೊಳ್ಳಬೇಕಾದರೆ, ತಾವು ಕೊರೋನಾಕ್ಕೆ ತುತ್ತಾಗಿದ್ದೇವೆ ಎಂಬ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಈ ಪ್ರಮಾಣಪತ್ರವು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಯಿಂದ ಪಡೆದಿರುವಂಥದ್ದಾಗಿರಬೇಕು. ಅಲ್ಲದೆ, ಕೊರೋನಾ ಪೀಡಿತರಾಗಿ ಸರ್ಕಾರಿ ಅಥವಾ ಮಿಲಿಟರಿ ಆಸ್ಪತ್ರೆಯಲ್ಲಿ 14 ದಿನ ಚಿಕಿತ್ಸೆ ಪಡೆದ ದಾಖಲೆ ಸಲ್ಲಿಸಬೇಕು.