ತಮ್ಮ ಕುರ್ಚಿ ಉಳಿಸಿಕೊಳಗ್ಳುವುದು ಕಷ್ಟ ಎಂದು ಮನಗಂಡ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ನಿರೀಕ್ಷೆಯಂತೆ ಆದರೆ ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮುಂಬೈ(ಜು.17): ಮಹಾರಾಷ್ಟ್ರದಲ್ಲಿ ಈಗ ರಾಜಕೀಯ ಬಿಕ್ಕಟ್ಟು ಅಂತ್ಯವಾಗಿದೆ. ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಹಳೆಯ ರಾಜಕೀಯದಾಟದ ಕತೆಗಳು ಇನ್ನೂ ಮುನ್ನೆಲೆಗೆ ಬರುತ್ತಿವೆ. ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆ ಅವರು ತಮ್ಮ ಸ್ಥಾನ ಉಳಿಸಿಕೊಳ್ಳುವುದು ತಪ್ಪಿಸಿಕೊಳ್ಳುವುದು ಕಷ್ಟ ಎಂದು ತಿಳಿದಾಗ, ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದರು, ಆದರೆ ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎನ್ನಲಾಗಿದೆ.
ಮೂಲಗಳ ಪ್ರಕಾರ, ಜೂನ್ 21, 2022 ರಂದು, ಏಕನಾಥ್ ಶಿಂಧೆ ಅವರು ಸುಮಾರು 26 ಎಂಎಲ್‌ಗಳೊಂದಿಗೆ ಮುಂಬೈನಿಂದ ಸೂರತ್‌ಗೆ ತೆರಳಿದ್ದಾರೆ ಎಂಬುದು ಸ್ಪಷ್ಟವಾದಾಗ, ಶಿವಸೇನಾ ಮುಖ್ಯಸ್ಥ ಮತ್ತು ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಾರ್ಯಪ್ರವೃತ್ತರಾದರು. ಮೊದಲು ಅವರು ಉಳಿದ ಶಾಸಕರನ್ನು ತಮ್ಮ ಪರವಾಗಿ ಸೆಳೆಯಲು ಪ್ರಯತ್ನಿಸಿದರು, ಆದರೆ ಸೂರತ್‌ನ ಶಾಸಕರನ್ನು ಗುವಾಹಟಿಗೆ ಕಳುಹಿಸಿದಾಗ ಮತ್ತು ಉದ್ಧವ್ ಅವರ ಶಿಬಿರದ ಹೆಚ್ಚಿನ ಶಾಸಕರು ಗುವಾಹಟಿಗೆ ತೆರಳಲು ಪ್ರಾರಂಭಿಸಿದಾಗ, ಉದ್ಧವ್ ಗಾಬರಿಗೊಂಡಿದ್ದರು.
ಹೀಗಿರುವಾಗ ಉದ್ಧವ್ ತಮ್ಮ ಆಪ್ತರು ಮತ್ತು ಮಾಜಿ ಕ್ಯಾಬಿನೆಟ್ ಸಚಿವರ ಮೂಲಕ ದೇವೇಂದ್ರ ಫಡ್ನವೀಸ್ ಅವರನ್ನು ಸಂಪರ್ಕಿಸಿದರು. ಮೂಲಗಳನ್ನು ನಂಬುವುದಾದರೆ, ಅವರೇ ಫಡ್ನವೀಸ್ ಅವರೊಂದಿಗೂ ಮಾತನಾಡಿದ್ದಾರೆ. ಆದರೆ ಯಾವಾಗ ಶಾಸಕರನ್ನು ತಡೆಯಲು ಸಾಧ್ಯವಿಲ್ಲ ಮತ್ತು ದೊಡ್ಡ ಕಂದಕ ಸೃಷ್ಟಿಯಾಗುತ್ತದೆ ಎಂದು ಭಾಸವಾಗಿದೆಯೋ ಆಗ ದೇವೇಂದ್ರ ಫಡ್ನವಿಸ್‌ಗೆ ಕರೆ ಮಾಡಿದ್ದಾರೆ.
ಮೂಲಗಳ ಪ್ರಕಾರ, ಉದ್ಧವ್ ಫಡ್ನವೀಸ್ ಬಳಿ ಬಿಜೆಪಿ ನೇರವಾಗಿ ತನ್ನೊಂದಿಗೇ ವ್ಯವಹರಿಸಬೇಕು ಎಂದು ಪ್ರಸ್ತಾಪಿಸಿದ್ದಾರೆ, ಈ ಮೂಲಕ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುವ ಬದಲು ಇಡೀ ಪಕ್ಷವು ಉದ್ಧವ್ ಅವರೊಂದಿಗೆ ಬರಬಹುದೆನ್ನುವ ಲೆಕ್ಕಾಚಾರ ಅವರದ್ದಾಗಿತ್ತು. ಆದರೆ ಈ ಒಪ್ಪಂದಕ್ಕೆ ಫಡ್ನವಿಸ್ ನಿರಾಕರಿಸಿದರು, ವಿಷಯ ತುಂಬಾ ದೂರ ಹೋಗಿದೆ ಎಂದು ಹೇಳಿದರು. ಕಳೆದ ಒಂದು ವರ್ಷದಲ್ಲಿ ಫಡ್ನವಿಸ್ ಮತ್ತು ಉದ್ಧವ್ ನಡುವೆ ಇದು ಮೊದಲ ಮುಖಾಮುಖಿ ಸಂವಾದವಾಗಿತ್ತು.
ಅಮಿತ್ ಶಾ ಅಥವಾ ಪ್ರಧಾನಿ ಮೋದಿ ಜತೆ ಮಾತನಾಡುವಂತೆ ಬಿಜೆಪಿ ನಾಯಕತ್ವ ಉದ್ಧವ್ ಅವರಿಗೆ ಸಲಹೆ ನೀಡಿದೆ. ಇದಾದ ನಂತರ ಉದ್ಧವ್ ಅವರು ಅಮಿತ್ ಶಾ ಮತ್ತು ಪ್ರಧಾನಿ ಮೋದಿಗೆ ಕರೆ ಮಾಡಿದರು, ಆದರೆ ಇಬ್ಬರೂ ಉತ್ತರಿಸಲಿಲ್ಲ. ಅದೇ ರೀತಿ 2019ರಲ್ಲೂ ಉದ್ಧವ್ ಜೊತೆ ಮಾತನಾಡಲು ಬಿಜೆಪಿಯ ಉನ್ನತ ನಾಯಕತ್ವ ಸಾಕಷ್ಟು ಪ್ರಯತ್ನ ಮಾಡಿತ್ತು ಆದರೆ ಅವರು ಯಾವುದಕ್ಕೂ ಉತ್ತರಿಸಲಿಲ್ಲ. ಉದ್ಧವ್ ಠಾಕ್ರೆ ಇಲ್ಲದ ಶಿವಸೇನೆ ಬೇಕು ಎಂದು ಬಿಜೆಪಿ ನಿರ್ಧರಿಸಿತ್ತು/
ಇತ್ತೀಚೆಗೆ ಶಿವಸೇನೆಯ ಕೆಲವು ಸಂಸದರು ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಆ ಸಂಸದರು ಮಧ್ಯಸ್ಥಿಕೆಗೂ ಮುಂದಾಗಿದ್ದರು. ಸಂಸದರು ಉದ್ಧವ್ ಅವರನ್ನು ಭೇಟಿಯಾದಾಗ ಅವರು ಸಂಸದರಿಗೆ 3 ಆಯ್ಕೆಗಳನ್ನು ನೀಡಿದ್ದರು. ಆದರೆ ಸಂಸದರು ಬಿಜೆಪಿ ಜತೆ ಹೋಗಲು ನಿರ್ಧರಿಸಿದ್ದಾರೆ.
ಉದ್ಧವ್ ಅವರು ಬಿಜೆಪಿ ಜೊತೆ ಹೋಗುವುದರಿಂದ ಯಾವುದೇ ಫಲಿತಾಂಶ ಬರುವುದಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಸಂಸದರಿಗೂ ಬಿಜೆಪಿ ನಾಯಕತ್ವದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಉದ್ಧವ್ ಅವರ ಪತ್ನಿ ರಶ್ಮಿ ಠಾಕ್ರೆ ಅವರ ಸಂದೇಶದೊಂದಿಗೆ ಕೆಲವು ಶಿವಸೇನಾ ಕಾರ್ಯಕರ್ತರು ಏಕನಾಥ್ ಶಿಂಧೆ ಅವರನ್ನು ತಲುಪಿದ್ದರು. ಆದರೆ ಬಿಜೆಪಿ ನಾಯಕತ್ವದಿಂದ ಇದಕ್ಕೆ ಯಾವುದೇ ಒಪ್ಪಿಗೆ ಸಿಗದ ಕಾರಣ ಶಿಂಧೆ ಯಾವುದೇ ಅವಕಾಶವನ್ನು ತೆಗೆದುಕೊಳ್ಳುವ ಮೂಡ್‌ನಲ್ಲಿ ಇದ್ದಂತೆ ಕಾಣುತ್ತಿಲ್ಲ.
