ಸರಕು ಸಾಗಣೆ ವಿಮಾನದಲ್ಲಿ ಪ್ರಶಾಂತ್ ಕಿಶೋರ್ ಪಯಣ?
ಸರಕು ಸಾಗಣೆ ವಿಮಾನದಲ್ಲಿ ಪ್ರಶಾಂತ್ ಕಿಶೋರ್ ಪಯಣ?| ದೀದಿ ಭೇಟಿಗೆ ತೆರಳಿದ್ದ ಎಲೆಕ್ಷನ್ ತಂತ್ರಗಾರ| ವಿಮಾನಯಾನ ಸಚಿವಾಲಯದಿಂದ ತನಿಖೆ
ನವದೆಹಲಿ(ಏ.25): ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ದೇಶದಲ್ಲಿ ಲಾಕ್‌ಡೌನ್ ಜಾರಿಗೆ ಬಂದ ನಂತರ ಸರಕು ಸಾಗಣೆ ವಿಮಾನದಲ್ಲಿ ದೆಹಲಿಯಿಂದ ಕೋಲ್ಕತಾಕ್ಕೆ ಪ್ರಯಾಣಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸಂಸ್ಥೆ ಸಾರ್ವಜನಿಕ ಸಂಪರ್ಕ (ಪಿಆರ್) ಸೇವೆ ಒದಗಿಸುತ್ತಿದೆ. ಈಗ ಲಾಕ್‌ಡೌನ್ ಸರಿಯಾಗಿ ಜಾರಿಗೊಳಿಸದೆ ಇರುವುದು ಹಾಗೂ ಕೊರೋನಾ ವೈರಸ್ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದಿರುವ ವಿಷಯದಲ್ಲಿ ಬಂಗಾಳ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆ ನಡೆಸುತ್ತಿದೆ.
ಈ ಸಮಸ್ಯೆಯನ್ನು ಬಗೆಹರಿಸಲು ಮಮತಾ ಬ್ಯಾನರ್ಜಿ ಅವರು ಪ್ರಶಾಂತ್ ಕಿಶೋರ್‌ಗೆ ಬುಲಾವ್ ನೀಡಿದ್ದು, ಅವರು ನಿಯಮ ಉಲ್ಲಂಘಿಸಿ ಸರಕು ಸಾಗಣೆ ವಿಮಾನದಲ್ಲಿ ಬಂಗಾಳಕ್ಕೆ ಪ್ರಯಾಣಿಸಿದ್ದಾರೆಂದು ಹೇಳಲಾಗುತ್ತಿದೆ.