Asianet Suvarna News Asianet Suvarna News

ಶಬರಿಮಲೆಗೆ ಬರದಂತೆ ಸೂಚನೆ : ಶಾಲೆ, ಕಾಲೇಜು ಬಂದ್

 8 ಹೊಸ ಕೊರೋನಾ ಸೋಂಕು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ, ಸೋಂಕು ಹರಡುವುದನ್ನು ತಡೆಯಲು ಹಲವು ಕ್ರಮಗಳನ್ನು ಘೋಷಿಸಿದೆ.
 

Devotees urged to avoid Sabarimala temple over coronavirus .
Author
Bengaluru, First Published Mar 11, 2020, 7:35 AM IST

ತಿರುವನಂತಪುರ [ಮಾ.11]: ರಾಜ್ಯದಲ್ಲಿ ಒಂದೇ ದಿನ 8 ಹೊಸ ಕೊರೋನಾ ಸೋಂಕು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ, ಸೋಂಕು ಹರಡುವುದನ್ನು ತಡೆಯಲು ಹಲವು ಕ್ರಮಗಳನ್ನು ಘೋಷಿಸಿದೆ.

ಈ ಕುರಿತು ಮಂಗಳವಾರ ಹೇಳಿಕೆ ನೀಡಿರುವ ರಾಜ್ಯದ ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ, ‘ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಮಾ.31ರವರೆಗೆ ಎಲ್ಲಾ ಶಾಲೆ, ಕಾಲೇಜು, ಟ್ಯುಟೋರಿಯಲ್ಸ್‌, ಮದ್ರಸಾ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಜೊತೆಗೆ 8,9,10 ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರವೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. 

ರಾಜ್ಯದಲ್ಲಿನ ಎಲ್ಲಾ ಸಿನೆಮಾ ಮಂದಿರಗಳನ್ನು ಮುಂದಿನ ಆದೇಶವರೆಗೆ ಮುಚ್ಚಲಾಗುವುದು. ಎಲ್ಲಾ ರೀತಿಯ ಸಾರ್ವಜನಿಕ ಕಾರ್ಯಕ್ರಮ ರದ್ದುಗೊಳಿಸಲಾಗಿದ್ದು, ಸಚಿವರು ಭಾಗಿಯಾಗಬೇಕಿದ್ದ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ’ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು, ಸಿಎಂ ತುರ್ತು ಸಭೆ!...

ಜೊತೆಗೆ ‘ಮಾಚ್‌ರ್‍ ತಿಂಗಳಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಕೇವಲ ಸಂಪ್ರದಾಯ ಆಚರಣೆಗೆ ಸೀಮಿತಗೊಳಿಸುವಂತೆಯೂ ಎಲ್ಲಾ ಧರ್ಮಗಳ ಧರ್ಮಗುರುಗಳಿಗೆ ಮನವಿ ಮಾಡಲಾಗಿದೆ. ವೈವಾಹಿಕ ಕಾರ್ಯಕ್ರಮಗಳ ವೇಳೆ ನಡೆಸುವ ವಿಧಿ ವಿಧಾನಗಳಿಗೆ ಸರ್ಕಾರ ಅನುಮತಿ ನೀಡಿದೆಯಾದರೂ, ಇಂಥ ಕಾರ್ಯಕ್ರಮಗಳಿಂದ ಜನರು ದೂರ ಇರುವುದು ಒಳಿತು ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಅಲ್ಲದೆ ಶಬರಿಮಲೆ ದೇಗುಲಕ್ಕೂ ಭಕ್ತರು ಬರದೇ ಇರುವುದು ಉಳಿತು ಎಂದು ಸಲಹೆ ನೀಡಿದೆ. ಜೊತೆಗೆ ರಾಜ್ಯದಲ್ಲಿ 1116 ಜನರ ಮೇಲೆ ಕಣ್ಗಾವಲು ಇಡಲಾಗಿದೆ, 149 ಶಂಕಿತರನ್ನು ಪ್ರತ್ಯೇಕ ವಾರ್ಡ್‌ಗಳಲ್ಲಿ ಇಟ್ಟು ನಿಗಾ ವಹಿಸಲಾಗಿದೆ, 967 ಜನರಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ’ ಎಂದು ಸಚಿವೆ ಶೈಲಜಾ ತಿಳಿಸಿದ್ದಾರೆ.

Follow Us:
Download App:
  • android
  • ios