ಕೇದಾರನಾಥದಲ್ಲಿ ಭಾರಿ ಜನ ಸಂದಣಿ ನೂಕುನುಗ್ಗಲು: ಪ್ರವಾಸ ಮುಂದೂಡುವಂತೆ ಮನವಿ
ಚಾರ್‌ಧಾಮಗಳಲ್ಲಿ ಒಂದಾದ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ನೂಕುನುಗ್ಗಲಿನ ಸ್ಥಿತಿ ಉಂಟಾಗಿದ್ದು, ಭಕ್ತರು ದಾರಿ ಮಧ್ಯೆ ಸಿಲುಕಿ ಪರದಾಡಿದ ಘಟನೆ ಶನಿವಾರ ನಡೆದಿದೆ.
ಕೇದಾರನಾಥ: ಚಾರ್‌ಧಾಮಗಳಲ್ಲಿ ಒಂದಾದ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ನೂಕುನುಗ್ಗಲಿನ ಸ್ಥಿತಿ ಉಂಟಾಗಿದ್ದು, ಭಕ್ತರು ದಾರಿ ಮಧ್ಯೆ ಸಿಲುಕಿ ಪರದಾಡಿದ ಘಟನೆ ಶನಿವಾರ ನಡೆದಿದೆ.
ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಕೇದಾರನಾಥ ದೇಗುಲದಿಂದ 40 ಕಿ.ಮೀ. ದೂರದ ಸೀತಾಪುರದಲ್ಲಿ ಕಾಲ್ನಡಿಗೆಯಲ್ಲಿ ಬಂದ ಸಾವಿರಾರು ಭಕ್ತರು ಮಾರ್ಗಮಧ್ಯೆ ಸಿಲುಕಿದ್ದಾರೆ. ಈ ಜನದಟ್ಟಣೆಯಲ್ಲಿ ವಾಹನಗಳೂ ಸಿಲುಕಿಕೊಂಡಿವೆ. ಜನ ದಟ್ಟಣೆಯನ್ನು ನಿಯಂತ್ರಿಸಲು ಉತ್ತರಾಖಂಡ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಕಂಡುಕೊಂಡಿಲ್ಲ ಎಂದು ಭಕ್ತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಚಾರ್‌ಧಾಮ್ ಯಾತ್ರಾರ್ಥಿಗಳೇ ಗಮನಿಸಿ, ದೇವಸ್ಥಾನದ 200 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಬ್ಯಾನ್
ಈ ನಡುವೆ ಕೆಲವರು, ಈಗ ಕೇದಾರನಾಥಕ್ಕೆ ಹೋಗಲು ಪ್ರಶಸ್ತ ಸಮಯವಲ್ಲ ಎಂದು ಟ್ವೀಟರ್‌ನಲ್ಲಿ ಮನವಿ ಮಾಡಿದ್ದಾರೆ. ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಜೂ. 6ರ ವರೆಗೂ ಇದ್ದ ಚಾರ್ ಧಾಮ್ ಯಾತ್ರೆಯ ಆಫ್‌ಲೈನ್ ನೋಂದಣಿಯನ್ನು ಮೇ 31ಕ್ಕೆ ಇಳಿಸಲಾಗಿದೆ.
ಕೇದಾರನಾಥದಲ್ಲಿ ಶಿವ ಸ್ಥಾಪಿತನಾಗಿದ್ದು ಹೇಗೆ? ಪಂಚಕೇದಾರಕ್ಕೂ ಮಹಾಭಾರತಕ್ಕೂ ಇರುವ ಲಿಂಕ್ ಏನು?