ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಕ್ತನೊಬ್ಬ ಕಾಣಿಕೆ ಹುಂಡಿಯಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ದಾನದ ಮೊತ್ತದ ಚೆಕ್‌ಅನ್ನು ಡ್ರಾಪ್‌ ಮಾಡಿ ಹೋಗಿದ್ದಾನೆ. ಈ ಹಣವನ್ನು ದೇವಸ್ಥಾನದ ಆಡಳಿತ ಮಂಡಳಿ ಡ್ರಾ ಮಾಡಿಕೊಂಡಿತಾ?

ಹೈದರಾಬಾದ್‌ (ಆ.25): ಕೆಲ ದಿನಗಳ ಹಿಂದೆಯಷ್ಟೇ ದೇವಸ್ಥಾನದ ಹುಂಡಿಗೆ ಸಹರಕೆ ತೀರಿಸುವ ಸಲುವಾಗಿ 2 ಸಾವಿರ ರೂಪಾಯಿ ನೋಟುಗಳನ್ನು ವ್ಯಕ್ತಿಯೊಬ್ಬ ಹಾಕಿದ್ದ. ಕೊನೆಗೆ ಗೊತ್ತಾಗಿದ್ದೇನೆಂದರೆ, ಆತ ಹಾಕಿದ್ದು 2 ಸಾವಿರ ರೂಪಾಯಿ ನೋಟುಗಳನ್ನಲ್ಲ. ಬದಲಿಗೆ 2 ಸಾವಿರ ರೂಪಾಯಿ ಕಲರ್‌ ಜೆರಾಕ್ಸ್‌ ನೋಟುಗಳನ್ನು ಆತ ಹುಂಡಿಗೆ ಹಾಕಿದ್ದ. ಇಂಥದ್ದೇ ಇನ್ನೊಂದು ಪ್ರಕರಣ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಸಿಂಹಾಚಲಂ ದೇವಸ್ಥಾನ ಎಂದೂ ಪ್ರಸಿದ್ಧವಾಗಿರುವ ವಿಶಾಖಪಟ್ಟಣಂನಲ್ಲಿರುವ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಗೆ ಭಕ್ತನೊಬ್ಬ 100 ಕೋಟಿ ರೂಪಾಯಿಯ ಚೆಕ್‌ಅನ್ನು ಡ್ರಾಪ್‌ ಮಾಡಿದ್ದಾನೆ. ಈ ಚೆಕ್‌ಗೆ ಯಾವುದೇ ದಿನಾಂಕ ಕೂಡ ಇದ್ದಿರಲಿಲ್ಲ. ಅಂದರೆ, ದೇವಸ್ಥಾನದ ಮಮಡಳಿ ಬೇಕಾದಾಗ ಅದಕ್ಕೆ ದಿನಾಂಕವನ್ನು ಬರದು ಬ್ಯಾಂಕ್‌ಗೆ ಚೆಕ್‌ ಪ್ರೆಸೆಂಟ್‌ ಮಾಡಬೇಕಿತ್ತು. ಹುಂಡಿ ಕಾಣಿಕೆಯ ಎಣಿಕೆಯ ವೇಳೆ ಆಗಸ್ಟ್‌ 23 ರಂದು ದೇವಸ್ಥಾನದ ಅಧಿಕಾರಿಗಳು ಈ ಚೆಕ್‌ಅನ್ನು ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಚೆಕ್‌ಅನ್ನು ಯಾರೂ ಹುಂಡಿಗೆ ಹಾಕೋದಿಲ್ಲ. ಹುಂಡಿಯಲ್ಲಿ ಚೆಕ್‌ಅನ್ನು ಕಂಡ ಕೂಡಲೇ ತಮಗೆ ಅನುಮಾನ ಬಂದಿತ್ತು ಎಂದು ದೇವಸ್ಥಾನದ ವ್ಯವಸ್ಥಾಪಕ ಅಧಿಕಾರಿ ತ್ರಿನಾದ್‌ ರಾವ್‌ ತಿಳಿಸಿದ್ದಾರೆ.

ಅನಿರೀಕ್ಷಿತವಾಗಿ ಇಷ್ಟು ದೊಡ್ಡ ಮೊತ್ತದ ಕೊಡುಗಳನ್ನು ಸ್ವೀಕರಿಸಿದ ನಂತರ, ದೇವಸ್ಥಾನದ ಆಡಳಿತ ಮಂಡಳಿ ಕೂಡ ಇದನ್ನು ಪರಿಶೀಲನೆ ಮಾಡಿಯೇ ಬ್ಯಾಂಕ್‌ಗೆ ಹಾಕುವ ತೀರ್ಮಾನ ಮಾಡಿತ್ತು. ಅದಕ್ಕಾಗಿ ದೇವಸ್ಥಾನದ ಅಧಿಕಾರಿಗಳು ಎಂವಿಪಿ ಕಾಲೋನಿಯಲ್ಲಿರುವ ಕೋಟಕ್‌ ಬ್ಯಾಂಕ್‌ನ ಶಾಖೆಯನ್ನು ತಕ್ಷಣವೇ ಸಂಪರ್ಕಿಸಿದರು. ಬೊಡ್ಡೆಪಲ್ಲಿ ರಾಧಾಕೃಷ್ಣ ಅವರ ಹೆಸರಿನಲ್ಲಿ ಖಾತೆ ಸಂಖ್ಯೆ 8313295434ರಿಂದ ಬಂದ ಚೆಕ್‌ನ ಅಕೌಂಟ್‌ನಲ್ಲಿ ಕೇವಲ 17 ರೂಪಾಯಿ ಇದೆ ಎಂದು ಬ್ಯಾಂಕ್‌ ನವರು ತಿಳಿಸಿದ್ದಾರೆ. ಚೆಕ್‌ನ ಫೋಟೋ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಚೆಕ್‌ಗೆ ಬೊಡ್ಡೆಪಲ್ಲಿ ರಾಧಾಕೃಷ್ಣ ಸಹಿ ಹಾಕಿದ್ದರು. ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಸೇರಿದ ಚೆಕ್‌ನಲ್ಲಿ ಭಕ್ತ ದಿನಾಂಕವನ್ನು ಬರೆದಿಲ್ಲ. ವಿಶಾಖಪಟ್ಟಣಂನಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಭಕ್ತ ಖಾತೆದಾರ ಎಂದು ಚೆಕ್ ತೋರಿಸಿದೆ.

ದಾನಿಗಳನ್ನು ಗುರುತಿಸಲು ದೇವಸ್ಥಾನದ ಅಧಿಕಾರಿಗಳು ಬ್ಯಾಂಕ್‌ಗೆ ಪತ್ರ ಬರೆಯಲು ಯೋಜಿಸುತ್ತಿದ್ದಾರೆ. ದಾನಿಯು ದೇವಾಲಯದ ಅಧಿಕಾರಿಗಳಿಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿದ್ದರೆ, ಆತನ ವಿರುದ್ಧ ಚೆಕ್ ಬೌನ್ಸ್ ಪ್ರಕರಣವನ್ನು ಪ್ರಾರಂಭಿಸಲು ಬ್ಯಾಂಕ್ ಅನ್ನು ವಿನಂತಿಸಬಹುದು ಎಂದು ಮೂಲಗಳು ತಿಳಿಸಿವೆ. ಈ ನಡುವೆ ದೇವಸ್ಥಾನದ ಹುಂಡಿ ಕಾಣಿಕೆಯ ಎಣಿಕೆಯಿಂದ 1.49 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಅದರೊಂದಿಗೆ 80 ಗ್ರಾಮ್‌ ಚಿನ್ನ ಹಾಗೂ 10 ಕೆಜಿ ಬೆಳ್ಳಿಯ ಕೊಡುಗೆಯೂ ಸೇರಿದೆ.

ಹೆಣ್ಮಕ್ಕಳು ಜೆರಾಕ್ಸ್‌ ತೋರ್ಸಿದ್ರೆ ಸುಮ್ನಿರ್ತಿಯಾ, ನಂಗ್ಯಾಕೆ ರೇಗಾಡ್ತೀಯಾ? ಬಸ್‌ ಪಾಸ್‌ ವಿಚಾರಕ್ಕೆ ಪೊಲೀಸ್ ಮೇಲೆ ಹಲ್ಲೆ

ಇನ್ನು ಭಕ್ತನ 100 ಕೋಟಿ ರೂಪಾಯಿಯ ಚೆಕ್‌ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಕಾಎಂಟ್‌ಗಳಿಗೆ ಕಾರಣವಾಗಿದೆ. ಬಹುಶಃ,ಈ ವ್ಯಕ್ತಿ ದೇವರಿಗೆ ಕೋಪ ಬರುತ್ತೋ ಇಲ್ಲವೋ ಅನ್ನೋದನ್ನು ಚೆಕ್‌ ಮಾಡುತ್ತಿದ್ದಾನೆ ಎಂದು ಬರೆದಿದ್ದರೆ, ಇನ್ನೂ ಕೆಲವರು ತನ್ನ ಆಸೆಯನ್ನು ಪೂರೈಸುವ ಸಲುವಾಗಿ ದೇವರಿಗೆ ಅಡ್ವಾನ್ಸ್‌ ಪೇಮೆಂಟ್‌ ಮಾಡಿರಬಹುದು ಎಂದು ಕಾಮೆಂಟ್‌ ಮಾಡಿದೆ.ದೇವರೆ ಸುಮ್ಮನೆ ಪ್ರಗ್ಯಾನ್‌ ರೋವರ್‌ನ ಚಂದ್ರನ ಮೇಲೆ ಕಳಿಸಿಕೊಟ್ಟಿದ್ದೇವೆ. ನಿನಗೆ ದೋಖಾ ಮಾಡಿದ ಇಂಥವನನ್ನು ಕಳಿಸಬೇಕಿತ್ತು ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ. ಬಂದರು ನಗರ ವಿಶಾಖಪಟ್ಟಣದ ಸಿಂಹಾಚಲಂ ಬೆಟ್ಟದ ಮೇಲಿರುವ ಶ್ರೀ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನವು ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.

ಉಚಿತ ಪ್ರಯಾಣಕ್ಕೆ ಒರಿಜಿನಲ್‌ ಆಧಾರ್‌ ತೋರಿಸದ ಮಹಿಳೆಯರನ್ನ ಬಸ್ಸಿಂದ ಇಳಿಸಿದ ಕಂಡಕ್ಟರ್‌