ರಾಜಕೀಯ ಬಿಕ್ಕಟ್ಟಿನ ನಡುವೆ 'ಮಹಾ' ಸಿಎಂ ಆದ ಫಡ್ನವೀಸ್: ಮಾಡಿದ ಮೊದಲ ಕೆಲಸವೇ ಇದು!
ಮಹಾರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ರಾಜಕೀಯ ನಾಯಕರ ಕಸರತ್ತು| ದಿನ ಬೆಳಗಾಗುತ್ತಿದ್ದಂತೆಯೇ ಸಿಎಂ ಆದ ಫಡ್ನವೀಸ್| ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ| ಸುಪ್ರೀಂ ತೀರ್ಪು ಬರದಿದ್ದರೂ ಕೆಲಸ ಆರಂಭಿಸಿದ ಫಡ್ನವೀಸ್
ಮುಂಬೈ[ನ.25]: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆಯೇ ದೇವೇಂದ್ರ ಫಡ್ನವೀಸ್ ಎರಡನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾತ್ರೋ ರಾತ್ರಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದು, ದಿನ ಬೆಳಗಾಗುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಇದು ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಆಘಾತ ನೀಡಿದೆ. ಹೀಗಾಗಿ ಮೂರೂ ಪಕ್ಷಗಳು ಸುಪ್ರಿಂ ಮೆಟ್ಟಿಲೇರಿವೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆಯೇ ಅಧಿಕಾರ ಸ್ವೀಕರಿಸಿರುವ ದೇವೇಂದ್ರ ಫಡ್ನವೀಸ್, ಸಿಎಂ ಆದ ಬಳಿಕ ಮಾಡಿದ ಮೊದಲ ಕೆಲಸ ಭಾರೀ ಸೌಂಡ್ ಮಾಡುತ್ತಿದೆ.
ಮತ್ತೊಂದು ದಿನ ಫಡ್ನವೀಸ್ ಸರ್ಕಾರ ಸೇಫ್, ನಾಳೆ ಸುಪ್ರೀಂ ಅಂತಿಮ ತೀರ್ಪು!
ಹೌದು ಸಿಎಂ ಫಡ್ನವೀಸ್ ಹಾಗೂ ಡಿಸಿಎಂ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ 48 ಗಂಟೆಗಳ ಬಳಿಕ ಸೋಮವಾರದಂದು ಅಚಾನಕ್ಕಾಗಿ ತಮ್ಮ ಸಚಿವಾಲಯಕ್ಕೆ ತೆರಳಿದ್ದಾರೆ. ಈ ವೇಳೆ ಫಡ್ನವೀಸ್ ಎಲ್ಲಕ್ಕಿಂತಲೂ ಮೊದಲು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕುಸುಮ್ ವೆಂಗುರ್ಲೇಕರ್ ಹೆಸರಿನ ಮಹಿಳೆಗೆ ಚೆಕ್ ವಿತರಿಸುವ ಮೂಲಕ ಆರ್ಥಿಕ ಸಹಾಯ ಮಾಡಿದ್ದಾರೆ.
ರಾಜಭವನ ತಲುಪಿದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ
ಅತ್ತ ಸಿಎಂ, ಡಿಸಿಎಂ ಕೆಲಸದಲ್ಲಿ ಬ್ಯೂಸಿಯಾಗಿದ್ದರೆ, ಇತ್ತ ಮೂರೂ ಪಕ್ಷದ ನಾಯಕರು ರಾಜಭವನಕ್ಕೆ ತೆರಳಿದ್ದಾರೆ. ರಾಜ್ಯಪಾಲರನ್ನು ಭೇಟಿಯಾದ ನಾಯಕರು ಸಮರ್ಥನೆ ಪತ್ರ ಸಲ್ಲಿಸಿ ಸರ್ಕಾರ ರಚಿಸಲು ಅವಕಾಶ ಕೋರಿದ್ದಾರೆ. ಈ ಎಲ್ಲಾ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ಯಾವೊಬ್ಬ ನಾಯಕನೂ ಸುಪ್ರೀಂ ತೀರ್ಪಿಗಾಗಿ ಯಾಖೆ ಕಾಯುತ್ತಿಲ್ಲ? ಎಂಬ ಪ್ರಶ್ನೆ ಎದುರಾಗಿದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು
ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: