ಮುಂಬೈ[ನ.18]: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆಯೂ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಸಮಾಧಿಗೆ ನಮಿಸಲು ಬಂದಿದ್ದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ಶಿವಸೇನೆ ಕಾರ್ಯಕರ್ತರು ಮುಜುಗರಕ್ಕೀಡು ಮಾಡಿದ್ದಾರೆ.

ಮುಂಬೈನ ಶಿವಾಜಿ ಪಾರ್ಕ್ನಲ್ಲಿರುವ ಬಾಳಾ ಠಾಕ್ರೆ ಅವರ ಸಮಾಧಿಗೆ ನಮಿಸಿ ಹೊರಬರುತ್ತಿದ್ದ ಫಡ್ನವೀಸ್‌ ಅವರನ್ನು ಕಂಡು ಶಿವಸೇನೆ ಕಾರ್ಯಕರ್ತರು ‘ನಾವು ಮತ್ತೆ ಹಿಂದಿರುಗುತ್ತೇವೆ’(ಮುಖ್ಯಮಂತ್ರಿ ಸ್ಥಾನಕ್ಕೆ) ಎಂದು ಘೋಷಣೆ ಕೂಗಿದ್ದಾರೆ. ಆದರೆ, ದೇವೇಂದ್ರ ಫಡ್ನವೀಸ್‌ ಮತ್ತು ಜತೆಗಿದ್ದ ಹಿರಿಯ ಬಿಜೆಪಿ ನಾಯಕರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಅಲ್ಲಿಂದ ತೆರಳಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಶಿವಸೇನೆ, ತರುವಾಯ ಮುಖ್ಯಮಂತ್ರಿ ಸ್ಥಾನಕ್ಕಾಗಿ 50:50 ಅಧಿಕಾರವಧಿಗಾಗಿ ದೂರವಾಗಿವೆ. ಹೀಗಾಗಿ ಮಹಾರಾದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಸದ್ಯ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಈ ಮೂರೂ ಪಕ್ಷದ ಹಿರಿಯ ನಾಯಕರು ಸಭೆ ನಡೆಸಿ ಸರ್ಕಾರ ರಚಿಸಲು ನಡೆಸುತ್ತಿದ್ದಾರೆ. ಈಗಾಗಲೇ ಕಾರ್ಯಸೂಚಿ ತಯಾರಾಗಿದ್ದು, ಸರ್ಕಾರ ಯಾವಾಗ ರಚನೆಯಾಗುತ್ತೆ ಎಂಬುವುದನ್ನು ಕಾದು ನೋಡಬೇಕಿದೆ.

ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: