ಬೀದಿಯಲ್ಲಿ ಬಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ನಿರ್ಗತಿಕ 65,000 ಹಳೆ ನೋಟು ಸಂಗ್ರಹಿಸಿಟ್ಟಿದ್ದ ನಿರ್ಗತಿಕ 5 ವರ್ಷದ ಬಳಿಕ ಹಳೆ ನೋಟು ಹೊರತೆಗೆದ ನಿರ್ಗತಿಕ ಬದಲಾಯಿಸಿ ಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ

ಕೃಷ್ಣಗಿರಿ(ಅ.19): ನವೆಂಬರ್ 8, 2016.. ಈ ದಿನಾಂಕ ಕೆಲವರಿಗೆ ಮರೆತು ಹೋಗಿರಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತುಗಳು ಯಾರು ಮರೆತಿಲ್ಲ. ಇಂದು ಮಧ್ಯ ರಾತ್ರಿಯಿಂದ 500 ಹಾಗೂ 1,000 ನೋಟುಗಳು ಚಾಲ್ತಿಯಲ್ಲಿರುವುದಿಲ್ಲ ಎಂದು ಘೋಷಿಸಿದ್ದರು. ಡಿಮಾನಿಟೈಸೇಶನ್ ಮಾಡಿ ಸರಿಸುಮಾರು 5 ವರ್ಷಗಳೇ ಉರುಳಿಸಿದೆ. ದುರ್ಬೀನು ಹಾಕಿ ಹುಡುಕಿದರೂ ಹಳೆ ನೋಟುಗಳು ಪತ್ತೆಯಾಗುವುದಿಲ್ಲ. ಆದರೆ ನಿರ್ಗತಿಕ ಬರೋಬ್ಬರಿ 65,000 ರೂಪಾಯಿ ಹಳೇ ನೋಟುಗಳನ್ನು ಹೊರತೆಗೆದು ಹೊಸ ನೋಟುಗಳಾಗಿ ಬದಲಾಯಿಸಿಕೊಡುವಂತೆ ಪರಿ ಪರಿಯಾಗಿ ಮನವಿ ಮಾಡಿದ ಘಟನೆ ನಡೆದಿದೆ.

13,860 ಕೋಟಿ ಆದಾಯ ಘೋಷಿಸಿಕೊಂಡ ಉದ್ಯಮಿಗೆ ತೆರಿಗೆ ಪಾವತಿಸಲಾಗುತ್ತಿಲ್ಲ!

ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. ಬೀದಿ ಬದಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ನಿರ್ಗತಿಕ ಚಿನ್ನಕನ್ನು 5 ವರ್ಷಗಳ ಹಿಂದೆ ಭಿಕ್ಷೆ ಬೇಡಿ ಹಣ ಸಂಗ್ರಹಿಸಿದ್ದರು. ಭದ್ರವಾಗಿ ತೆಗೆದಿಟ್ಟಿದ್ದ ಚಿನ್ನಕನ್ನು ಹಲವು ಬಾರಿ ಹುಡುಕಿದರೂ ಈ ಹಣ ಪತ್ತೆಯಾಗಿರಲಿಲ್ಲ. ಇತ್ತ ಜೀವನ ಹೇಗೋ ಮುಂದೆ ಸಾಗಿಸುತ್ತಿದ್ದ ಚಿನ್ನಕನ್ನುಗೆ ಹಣದ ಕೊರತೆ ಎದುರಾದ ಸಂಗ್ರಹಿಸಿಟ್ಟಿದ ಹಣ ಹುಡುಕಾಡಿದ್ದಾರೆ. ಈ ವೇಳೆ 65,000 ರೂಪಾಯಿ ಪತ್ತೆಯಾಗಿದೆ.

2016ರಲ್ಲಿ ಡಿಮಾನಿಸೈಟೇಶನ್ ಮಾಡಲಾಗಿದ್ದರೂ, ಚಿನ್ನಕನ್ನು ಕಿವಿಗೆ ಈ ವಿಚಾರ ಮುಟ್ಟಿದ್ದು, ಮೊನ್ನೆ ಮೊನ್ನೆ. ಅಂದರೆ ಅಕ್ಟೋಬರ್ ಅಕ್ಚೋಬರ್ 2021ರಂದು. ಭಾನುವಾರ ಹಳೆ ನೋಟುಗಳು ಈಗ ಚಲಾವಣೆಯಲ್ಲಿ ಇಲ್ಲ ಎಂದು ಗೊತ್ತಾಗಿದೆ. ಇದರಿಂದ ಚಿನ್ನಕನ್ನು ತೀವ್ರ ಆಘಾತಕ್ಕೊಳಗಾಗಿದ್ದಾನೆ. 

ದರ್ಗಾದ ಹುಂಡಿಗೆ ಬೆಂಕಿ: ನೋಟುಗಳೆಲ್ಲ ಬೆಂಕಿಗಾಹುತಿ

ಇತರರ ಸಹಾಯದೊಂದಿಗೆ ಚಿನ್ನಕನ್ನು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾನೆ. ತನ್ನಲ್ಲಿರುವ 65,000 ರೂಪಾಯಿ ಹಳೆ ನೋಟುಗಳನ್ನು ಬದಲಾಯಿಸಿಕೊಡುವಂತೆ ಮನವಿ ಮಾಡಿದ್ದಾನೆ. ಈ ಪತ್ರದಲ್ಲಿ ತನಗೆ ಡಿಮಾನಿಟೇಶನ್ ಆಗಿರುವ ಕುರಿತು ಮಾಹಿತಿ ಇಲ್ಲ, ಯಾರು ತನ್ನ ಬಳಿ ಹೇಳಿಲ್ಲ. ಹೀಗಾಗಿ ತನಲ್ಲಿರುವ ಹಳೇ ನೋಟುಗಳನ್ನು ಬದಲಾಯಿಸಿಕೊಡಬೇಕು. ತನ್ನಲ್ಲಿ ಈಗ ಕೇವಲ 300 ರೂಪಾಯಿ ಮಾತ್ರ ಬಾಕಿ ಇದೆ ಎಂದು ಚಿನ್ನಕನ್ನು ಮನವಿ ಮಾಡಿದ್ದಾನೆ.

ಜಿಲ್ಲಾಧಿಕಾರಿ ಈ ಪತ್ರವನ್ನು ಜಿಲ್ಲಾ ಕಂದಾಯ ಇಲಾಖೆ ಅಧಿಕಾರಿಗೆ ವರ್ಗಾಯಿಸಿದ್ದಾರೆ. ಕಂದಾಯ ಅಧಿಕಾರಿ ಈ ಪತ್ರವನ್ನು ಬ್ಯಾಂಕ್ ಮ್ಯಾನೇಜರ್ ಜೊತೆ ಮಾತುಕತೆ ನಡೆಸಿದ್ದಾರೆ. ರಿವಸರ್ವ್ ಬ್ಯಾಂಕ್ ಮಾರ್ಗಸೂಚಿ ಪ್ರಕಾರ, ಹಳೆ ನೋಟುಗಳನ್ನು ಬದಲಾಯಿಸುವ ಸಮಯ ಮಾರ್ಚ್ 31, 2017ರಲ್ಲಿ ಮುಗಿದು ಹೋಗಿದೆ. ಬಳಿಕ ಹಳೆ ನೋಟುಗಳಿಗೆ ಯಾವುದೇ ಮಾನ್ಯವಿರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ.

ಸರ್ಕಾರ ನೋಟು ಮುದ್ರಣ ಘಟಕದಿಂದ 5 ಲಕ್ಷ ರೂಪಾಯಿ ನಾಪತ್ತೆ; ಕೇಸ್ ದಾಖಲು!

ಬ್ಯಾಂಕ್ ಮ್ಯಾನೇಜರ್, ಜಿಲ್ಲಾ ಕಂದಾಯ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸೇರಿ ಭಾರತಯ ರಿಸರ್ವ್ ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇದೀಗ ರಿಸರ್ವ್ ಬ್ಯಾಂಕ್ ಪ್ರತಿಕ್ರಿಯೆ ಬಂದ ಬಳಿಕ ಮಾತ್ರ ಈ ಕುರಿತು ನಿರ್ಧಾರ ತೆಗೆದುಕೊಳ್ಳುಲು ಸಾಧ್ಯ ಎಂದಿದ್ದಾರೆ.