ನವದೆಹಲಿ(ಡಿ.09): ದೇಶಾದ್ಯಂತ ಕೊರೋನಾ ಹಬ್ಬುವಿಕೆ ಉತ್ತಂಗ ಸ್ಥಿತಿಯಲ್ಲಿದ್ದ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ 3 ತಿಂಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ 101 ಜನ ಸಂಪರ್ಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

ಕಳೆದ ವರ್ಷ 78ಕ್ಕೆ ಹೋಲಿಸಿದರೆ ಈ ಬಾರಿ ಮೋದಿ ಶೇ.25ಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗಿಯಾದಂತಾಗಿದೆ. ಕೊರೋನಾದಂಥ ಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬುವ ಸಲುವಾಗಿ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಅಂದರೆ 3 ತಿಂಗಳ ಕಾಲ ಡಿಜಿಟಲ್‌ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶದಿಂದ ಹಿಡಿದು ಹೂಡಿಕೆದಾರರು, ಯುವಕರಿಂದ ಹಿಡಿದು ಬೃಹತ್‌ ಕಂಪನಿಗಳ ಸಿಇಒಗಳವರೆಗೂ ಸಮಾಜದ ಎಲ್ಲಾ ರೀತಿಯ ಜನರೊಂದಿಗೆ ಸಮಾಲೋಚನೆ ನಡೆಸಿದ ಹೆಗ್ಗಳಿಕೆ ಪ್ರಧಾನಿ ಮೋದಿ ಅವರದ್ದು.

ವಿಶೇಷವೆಂದರೆ ಮೋದಿ ಅವರು ಸಾಮಾನ್ಯ ವರ್ಷಕ್ಕಿಂತ ಈ ವರ್ಷ ಶೇ.25ಕ್ಕಿಂತ ಹೆಚ್ಚು ಸಾರ್ವಜನಿಕ ಸಭೆಯಲ್ಲಿ ಭಾಗಿಯಾದಂತಾಗಿದೆ.