ನವದೆಹಲಿ[ಜ.28]: ದೇಶ 71ನೇ ಗಣರಾಜ್ಯ ಆಚರಿಸಿದ ಹೊತ್ತಲ್ಲೇ, ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಜನಪ್ರಿಯತೆ ಅಳೆಯುವ ನಿಟ್ಟಿನಲ್ಲಿ ನಡೆಸಲಾದ ಸಮೀಕ್ಷೆಯೊಂದು ಅಚ್ಚರಿಯ ಫಲಿತಾಂಶ ನೀಡಿದೆ. ಈ ಸಮೀಕ್ಷೆ ಅನ್ವಯ ಕೇಂದ್ರದಲ್ಲಿ ಅಧಿಕಾರರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ರಾಜ್ಯಗಳಲ್ಲಿ ಮಾತ್ರ ಬಿಜೆಪಿಯೇತರ ಪಕ್ಷಗಳು ಅಧಿಕಾರ ನಡೆಸುತ್ತಿರುವ ರಾಜ್ಯಗಳೇ ಹೆಚ್ಚಿನ ಜನಪ್ರಿಯತೆ ಹೊಂದಿರುವುದು ಬೆಳಕಿಗೆ ಬಂದಿದೆ.

ಐಎಎನ್‌ಎಸ್‌ ಸುದ್ದಿಸಂಸ್ಥೆಯು ಸಿ ವೋಟರ್‌ ಜೊತೆಗೂಡಿ ‘ಸ್ಟೇಟ್‌ ಆಫ್‌ ನೇಷನ್‌’ ಹೆಸರಿನಲ್ಲಿ ಸಮೀಕ್ಷೆಯನ್ನು ನಡೆಸಿ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಚ್ಚರಿಯ ಅಂಶಗಳಿವೆ.

ಮನ್‌ ಕೀ ಬಾತ್‌ನಲ್ಲಿ ತಿಮ್ಮಕ್ಕನ ಸ್ಮರಿಸಿದ ಮೋದಿ!

ಮೋದಿ ನಂ.1:

ಕೇಂದ್ರದಲ್ಲಿ ಸತತ 6ನೇ ವರ್ಷ ಪ್ರಧಾನಿ ಹುದ್ದೆಯಲ್ಲಿ ಮುಂದುವರೆದಿರುವ ನರೇಂದ್ರ ಮೋದಿ, ಈಗಲೂ ದೇಶದ ನೆಚ್ಚಿನ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ವಿವಾದಗಳ ಹೊರತಾಗಿಯೂ ಶೇ.66.4ರಷ್ಟುಜನ ಪ್ರಧಾನಿ ನರೇಂದ್ರ ಮೋದಿ ಆಢಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದ ಬಗ್ಗೆಯೂ ಶೇ.60.5ರಷ್ಟುಜನ ತೃಪ್ತಿ ವ್ಯಕ್ತಪಡಿಸಿದ್ದಾರೆ. ‘ಇಂಡಿಯಾ ಟುಡೇ- ಕಾರ್ವಿ’ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲೂ ಬಹುತೇಕ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿತ್ತು.

330 ಸ್ಥಾನ:

ತಕ್ಷಣಕ್ಕೆ ಲೋಕಸಭೆಗೆ ಚುನಾವಣೆ ನಡೆದರೆ ಎನ್‌ಡಿಎ 330 ಸ್ಥಾನ ಗೆಲ್ಲಿದೆ. ಈ ಪೈಕಿ ಬಿಜೆಪಿ 290 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

ವಿಪಕ್ಷ ಸಿಎಂ ಮುಂಚೂಣಿ:

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಜನತೆ ಜೈಕಾರ ಹಾಕಿದ್ದರೆ, ರಾಜ್ಯಗಳಲ್ಲಿ ಬಿಜೆಪಿಯೇತರ ಸಿಎಂಗಳ ಬಗ್ಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಡಳಿತದ ಬಗ್ಗೆ ಜನತೆ ಹೆಚ್ಚಿನ ತೃಪ್ತಿ ವ್ಯಕ್ತಪಡಿಸಿರುವ ಟಾಪ್‌ 10 ರಾಜ್ಯಗಳ ಪೈಕಿ ಬಿಜೆಪಿ ಕೇವಲ 2 ಸ್ಥಾನ ಪಡೆದಿದೆ. ಹಿಮಾಚಲ ಮತ್ತು ಅಸ್ಸಾಂ ಬಿಜೆಪಿ ಸರ್ಕಾರದ ಬಗ್ಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಜೆಪಿ ಮೈತ್ರಿ ಪಕ್ಷವಾಗಿರುವ ಬಿಹಾರ ಕೂಡಾ ಟಾಪ್‌ 10ರಲ್ಲಿ ಸ್ಥಾನ ಪಡೆದಿದೆ. ಬಿಜೆಡಿ ಅಧಿಕಾರದಲ್ಲಿರುವ ಒಡಿಶಾ ನಂ.1 ಸ್ಥಾನದಲ್ಲಿದೆ.

ಬದಲಾಗದ ಮೋದಿ ಸ್ಟೈಲ್: ಬಂದೇಜ್ ಪೇಟಾ, ಕುರ್ತಾ ಬ್ಯೂಟಿಫುಲ್!

ಕೇಜ್ರಿ ನಂ.1:

ಅತ್ಯಂತ ಜನಪ್ರಿಯ ಸಿಎಂಗಳ ಪೈಕಿ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್‌ಆದ್ಮಿ ಪಕ್ಷದ ಅರವಿಂದ್‌ ಕೇಜ್ರಿವಾಲ್‌ ನಂ.1 ಸ್ಥಾನ ಪಡೆದಿದ್ದಾರೆ. ಟಾಪ್‌ 10 ಜನಪ್ರಿಯ ಸಿಎಂಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಬಿಜೆಪಿ ಸಿಎಂ ಎಂದರೆ ಹಿಮಾಚಲಪ್ರದೇಶದ ಜೈರಾಮ್‌ ಠಾಕೂರ್‌.