ಅಮರಾವತಿ(ಡಿ.25): ಆಂಧ್ರಪ್ರದೇಶ ಸರ್ಕಾರದ ಯೋಜನೆಯೊಂದರಡಿ ಕೇಳಲಾದ ಸಾಲ ನಿರಾಕರಿಸಿದ ಕಾರಣಕ್ಕೆ ‘ಭಾರತೀಯ ಯೂನಿಯನ್‌ ಬ್ಯಾಂಕ್‌’ ಕಚೇರಿ ಬಾಗಿಲ ಮುಂದೆ ಕಸ ಸುರಿದ ಘಟನೆ ಗುರುವಾರ ನಡೆದಿದೆ.

ರಾಜ್ಯ ಸರ್ಕಾರದ ‘ಜಗನಣ್ಣ ತೋಡು’ ಎಂಬ ಯೋಜನೆಯಡಿ ಬ್ಯಾಂಕ್‌ ಸಾಲ ನೀಡಲು ಇಲ್ಲಿನ ಯೂನಿಯನ್‌ ಬ್ಯಾಂಕ್‌ ನಿರಾಕರಿಸಿತ್ತು. ಇದರಿಂದ ಕ್ರೋಧರಾದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಪಿ ಮುಖಂಡರು ವುಯ್ಯುರು ಸೇರಿದಂತೆ ಇನ್ನಿತರೆಡೆ ಇರುವ ಭಾರತೀಯ ಯೂನಿಯನ್‌ ಬ್ಯಾಂಕ್‌ಗಳ ಮುಂದೆ ಉದ್ದೇಶಪೂರ್ವಕವಾಗಿ ಕಸ ತಂದು ಸುರಿದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಹೆಚ್ಚು ಭಕ್ತರಿಗೆ ಪ್ರವೇಶ: ಹೈಕೋರ್ಟ್‌ ಆದೇಶ ಪ್ರಶ್ನಿಸಿ ಕೇರಳ ಸುಪ್ರಿಂಗೆ

ಈ ಬಗ್ಗೆ ಫೋಟೋ ಸಮೇತ ಟ್ವೀಟ್‌ ಮಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಅವರು, ‘ರಾಜ್ಯ ಸರ್ಕಾರದ ಪ್ರಾಯೋಜಿತ ಜಗನಣ್ಣ ತೋಡು ಎಂಬ ಯೋಜನೆಯಡಿ ಪುಕ್ಕಟ್ಟೆಸಾಲ ನಿರಾಕರಿಸಿದ ಯೂನಿಯನ್‌ ಬ್ಯಾಂಕ್‌ ವಿರುದ್ಧ ವೈಎಸ್‌ಆರ್‌ಪಿ ಮುಖಂಡರ ಪ್ರತೀಕಾರವಿದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.