ನವದೆಹಲಿ[ನ.16]: ಇತ್ತೀಚಿನ ದಿನಗಳಲ್ಲಿ ತೀವ್ರ ವಾಯುಮಾಲಿನ್ಯದಿಂದ ತತ್ತರಿಸುತ್ತಿರುವ ರಾಷ್ಟ್ರ ರಾಜಧಾನಿ ನವದೆಹಲಿ ಈಗ ಮತ್ತೊಂದು ಕುಖ್ಯಾತಿಗೆ ಪಾತ್ರವಾಗಿದೆ. ದಿಲ್ಲಿಯ ವಾಯು ಗುಣಮಟ್ಟಸೂಚ್ಯಂಕ ನ.15ರಂದು 527ಕ್ಕೆ ತಲುಪಿದೆ. ಇದರಿಂದ ‘ವಿಶ್ವದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯ ನಗರಿ’ ಎಂಬ ಅಪಖ್ಯಾತಿ ದಿಲ್ಲಿಗೆ ಅಂಟಿದೆ.

‘ಏರ್‌ ವಿಷುವಲ್‌’ ಎಂಬ ಹವಾಮಾನ ಕುರಿತಾದ ಸಂಸ್ಥೆಯು ನವೆಂಬರ್‌ 5ರಂದು ದೆಹಲಿಯಲ್ಲಿ ಮಾಲಿನ್ಯ ಅತ್ಯಂತ ಗಂಭೀರ ಪ್ರಮಾಣ ದಾಖಲಾಗಿತ್ತು. ಅದಾದ ನಂತರ ಸತತ 9 ದಿನಗಳ ಕಾಲ ಅದೇ ಮಟ್ಟದ ಮಾಲಿನ್ಯ ಮುಂದುವರೆದಿತ್ತು. ಇದು ಮಾಲಿನ್ಯ ಕುರಿತ ದಾಖಲೆಗಳನ್ನು ಸಂಗ್ರಹ ಮಾಡುವ ಸಂಪ್ರದಾಯ ಆರಂಭವಾದ ಬಳಿಕ ಅತಿ ಸುದೀರ್ಘ ಅವಧಿಗೆ ಗಂಭೀರ ಪ್ರಮಾಣದ ಮಾಲಿನ್ಯದ ದಾಖಲೆಯಾಗಿದೆ ಎಂದು ವರದಿ ತಿಳಿಸಿದೆ. ಸೂಚ್ಯಂಕ 401 ದಾಟಿದರೆ ‘ಗಂಭೀರ ಪ್ರಮಾಣದ ವಾಹಯುಮಾಲಿನ್ಯ’ ಎನ್ನಿಸಿಕೊಳ್ಳುತ್ತದೆ.

ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಟಾಪ್‌-10 ವಾಯುಮಾಲಿನ್ಯ ಪೀಡಿತ ನಗರಗಳಲ್ಲಿ ಭಾರತ ಉಪಖಂಡದ 6 ನಗರಗಳು ಸ್ಥಾನ ಪಡೆದಿವೆ. ದಿಲ್ಲಿ, ಲಾಹೋರ್‌, ಕರಾಚಿ, ಕೋಲ್ಕತಾ, ಮುಂಬೈ ಹಾಗೂ ಕಾಠ್ಮಂಡುಗಳೇ ಭಾರತ ಉಪಖಂಡದ ಈ 6 ನಗರಗಳು.

ಕಳವಳದ ಸಂಗತಿಯೆಂದರೆ ಟಾಪ್‌ 10ರಲ್ಲಿ ಭಾರತದ 3 ನಗರಗಳು (ದಿಲ್ಲಿ, ಕೋಲ್ಕತಾ, ಮುಂಬೈ) ಇವೆ. ಹೀಗಾಗಿ ವಾಯುಮಾಲಿನ್ಯ ಎಂಬುದು ಕೇವಲ ದಿಲ್ಲಿಗೆ ಸೀಮಿತವಲ್ಲ ಎಂಬುದು ಇದರಿಂದ ಸಾಬೀತಾಗಿದೆ.

ವಾಯುಮಾಲಿನ್ಯದಿಂದ 5ಲಕ್ಷ ಜನ ಸಾವು!

ಟಾಪ್‌ 10:

ದಿಲ್ಲಿ ವಾಯುಗುಣಮಟ್ಟಸೂಚ್ಯಂಕ 527 ಇದ್ದರೆ ನಂತರದ ಸ್ಥಾನದಲ್ಲಿರುವ ಪಾಕಿಸ್ತಾನದ ಲಾಹೋರ್‌ ಸೂಚ್ಯಂಕ 234. 3ನೇ ಸ್ಥಾನದಲ್ಲಿ ಉಜ್ಬೇಕಿಸ್ತಾನದ ತಾಷ್ಕೆಂಟ್‌ ಇದ್ದು, ಅಲ್ಲಿನ ಸೂಚ್ಯಂಕ 185. 4ನೇ ಸ್ಥಾನದಲ್ಲಿನ ಕರಾಚಿ (ಸೂಚ್ಯಂಕ 180), 5ನೇ ಸ್ಥಾನದಲ್ಲಿ ಕೋಲ್ಕತಾ (161) ಇವೆ. 6ನೇ ಸ್ಥಾನದಲ್ಲಿ ಚೀನಾದ ಚೆಂಗ್ಡು (158), 7ರಲ್ಲಿ ವಿಯೆಟ್ನಾಂನ ಹನೋಯಿ (158), 8ರಲ್ಲಿ ಚೀನಾದ ಗುವಾಂಗ್‌ಝೌ (157), 9ನೇ ಸ್ಥಾನದಲ್ಲಿ ಮುಂಬೈ (153) ಹಾಗೂ 10ನೇ ಸ್ಥಾನದಲ್ಲಿ ನೇಪಾಳದ ಕಾಠ್ಮಂಡು (152) ಇವೆ.

ಬೆಳೆ ತ್ಯಾಜ್ಯ ಸುಡುವಿಕೆ ಏರಿಕೆ: ದಿಲ್ಲಿ ಮಾಲಿನ್ಯ ಮತ್ತೆ ಗಂಭೀರ