Asianet Suvarna News Asianet Suvarna News

ಜಿಮ್ ಟ್ರೈನಿಂಗ್ ಪಿಕ್ ಹಂಚಿಕೊಂಡ ಯುವತಿ ಟ್ರೋಲ್, ಬೆರಗಾಗಿಸುವ ಫೋಟೋ ಮೂಲಕ ತಿರುಗೇಟು!

ಜಿಮ್ ಟ್ರೈನಿಂಗ್ ಬಳಿಕ ಮಸ್ಕುಲರ್ ಫೋಟೋ ಹಂಚಿಕೊಂಡ ಯುವತಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿದೆ. ಟ್ರೋಲ್ ಬೆನ್ನಲ್ಲೇ ಬೆರಗಾಗಿಸುವ ಫೋಟೋ ಹಂಚಿಕೊಂಡ ಎಲ್ಲರ ಬಾಯಿ ಮುಚ್ಚಿಸಿದ್ದಾಳೆ. ದೆಹಲಿ ಯುವತಿಯ ಫೋಟೋ ಇದೀಗ ವೈರಲ್ ಆಗಿದೆ.
 

Delhi Woman trolled after Gym Muscular photo shared new bold and beautiful pic ckm
Author
First Published May 17, 2024, 4:58 PM IST

ದೆಹಲಿ(ಮೇ.17) ಕಚೇರಿ ಕೆಲಸ, ಹೆಚ್ಚಿನ ವ್ಯಾಯಾವಿಲ್ಲದ ಹಲವರು ಜಿಮ್ ತರಬೇತಿ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕಟ್ಟುಮಸ್ತಾದ ದೇಹಕ್ಕಾಗಿ ಬೆವರು ಸುರಿಸುತ್ತಾರೆ.ಯುವತಿಯರು, ಮಹಿಳೆಯರು ಕೂಡ ಫಿಟ್ ಆಗಿರಲು ಅಗತ್ಯಕ್ಕೆ ತಕ್ಕಂತೆ ಜಿಮ್ ಅಭ್ಯಾಸ ಮಾಡುತ್ತಾರೆ. ಹೀಗೆ ದೆಹಲಿ ಯುವತಿ ಜಿಮ್ ತರಬೇತಿ ಪಡೆಯುತ್ತಿರುವ ವೇಳೆ ತೆಗೆದ ಫೋಟೋವನ್ನು ಹಂಚಿಕೊಂಡಿದ್ದಾಳೆ. ಜಿಮ್ ಸೇರುವ ಸಂದರ್ಭ ಹಾಗೂ ಸೇರಿದ ಬಳಿಕ ಎರಡೂ ಫೋಟೋ ಹಂಚಿಕೊಂಡಿದ್ದರು. ಆದರೆ ಯುವತಿಯ ಈ ಫೋಟೋಗೆ ನೆಗಟೀವ್ ಕಮೆಂಟ್ ವ್ಯಕ್ತವಾಗಿತ್ತು. ಭಾರಿ ಟ್ರೋಲ್ ಮಾಡಲಾಗಿತ್ತು. ಆದರೆ ಅಷ್ಟೇ ವೇಗದಲ್ಲಿ ಬೆರಗುಗೊಳಿಸುವ ಫೋಟೋ ಹಂಚಿಕೊಂಡು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾಳೆ.

ದೆಹಲಿಯ ಅಂಚಲ್ ಅನ್ನೋ ಯುವತಿ ಜಿಮ್ ಅಭ್ಯಾಸ ಆರಂಭಿಸಿದ್ದಾಳೆ.ಫಿಟ್ ಆಗಿರಲು ಪ್ರಮುಖವಾಗಿ ಚೆಸ್ಟ್ ಸೇರಿದಂತೆ ಮೂರು ಜಿಮ್ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಕಠಿಣ ಅಭ್ಯಾಸ, ಶಿಸ್ತಿನ ಆಹಾರ ಕ್ರಮ, ನಿದ್ದೆ ಎಲ್ಲದರಿಂದ ಯುವತಿ ದೇಹ ಕಟ್ಟುಮಸ್ತಾಗಿ ಬೆಳೆದಿದೆ. ಕಳೆದ ಚಳಿಗಾಲದ ವೇಳೆಗೆ ಯುವತಿ ಗುರುತೇ ಸಿಗದಷ್ಟು ಬದಲಾಗಿದ್ದಾಳೆ. ತೂಕ ಕೂಡ ಹೆಚ್ಚಾಗಿದೆ.

ಜಿಮ್‌ಗೆ ಹೋಗದೆ, ಎಕ್ಸರ್‌ಸೈಸ್ ಮಾಡ್ದೆ ಹೆಲ್ದೀಯಾಗಿರುವುದು ಹೇಗೆ?

ಇತ್ತೀಚೆಗೆ ಯುವತಿ ಐದಾರು ತಿಂಗಳ ಹಿಂದೆ ತೆಗೆದ ಕಟ್ಟು ಮಸ್ತಾದ ದೇಹದ ಫೋಟೋ ಹಾಗೂ ಜಿಮ್ ಸೇರುವ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಪೋಸ್ಟ್ ಮಾಡಿದ್ದಳು. ನಾನು ಚೆಸ್ಟ್ ಟ್ರೈನಿಂಗ್‌ಗಾಗಿ ಬಂದಾಗ ಹಾಗೂ ಮೂರು ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದಾಗ ಎಂದು ಎರಡುಫೋಟೋಗಳನ್ನು ಒಂದೂಗೂಡಿಸಿ ಪೋಸ್ಟ್ ಮಾಡಿದ್ದಾಳೆ. 

 

 

ಈ ಫೋಟೋ ಹಂಚಿಕೊಂಡ ಬೆನ್ನಲ್ಲೇ ಹಲವರು ಟ್ರೋಲ್ ಮಾಡಿದ್ದಾರೆ. ಮಸ್ಕುಲರ್ ಫೋಟೋ ಕಾರಣದಿಂದ ಅಂಚಲ್ ಭಾರಿ ಟೀಕೆಗೆ ಗುರಿಯಾಗಿದ್ದಳು. ಯುವಕರಂತೆ ಕಟ್ಟು ಮಸ್ತಾದ ದೇಹ, ಯುವತಿಗೆ ಇದು ಹೇಗೆ ಸಾಧ್ಯ? ಎಂದೆಲ್ಲ ಪ್ರಶ್ನಿಸಿದ್ದರು. ಈ ಟ್ರೋಲ್‌ಗಳಿಂದ ಆಕ್ರೋಶಗೊಂಡ ಅಂಚಲ್ ಇದೀಗ ಸದ್ಯದ ಫೋಟೋವನ್ನು ಹಂಚಿಕೊಂಡು ಎಲ್ಲರ ಬಾಯಿ ಮುಚ್ಚಿಸಿದ್ದಾಳೆ.

ಜಿಮ್ ಟ್ರೈನಿಂಗ್ ವೇಳೆ ತೆಗೆದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫಿಟ್ ಅಂಡ್ ಫೈನ್ ಆಗಿರುವ ಈ ಫೋಟೋ ಎಲ್ಲರ ಕಣ್ಣುಕುಕ್ಕುತ್ತಿದೆ. ಎರಡು ಫೋಟೋವನ್ನು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಇದರ ಜೊತೆಗೆ ಒಂದು ಸಂದೇಶವನ್ನು ಸಾರಿದ್ದಾಳೆ. ಇತ್ತೀಚೆಗೆ ನಾನು ಹಂಚಿಕೊಂಡ ಫೋಟೋಗೆ ಬಹುತೇಕರು ಟ್ರೋಲ್ ಮಾಡಿದ್ದಾರೆ, ಕೆಟ್ಟ ಕಮೆಂಟ್ ಮಾಡಿದ್ದಾರೆ. ಆದರೆ ಬಹುತೇಕರು ಟ್ಟೀಟ್ ಓದಿಲ್ಲ, ಅದರಲ್ಲಿರುವ ಮಾಹಿತಿಯನ್ನು ಅರ್ಥ ಮಾಡಿಕೊಂಡಿಲ್ಲ. ಇನ್ನು ಫೋಟೋ ಕುರಿತು ಹೇಳುವುದಾದರೆ, ಚಳಿಗಾಲದ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿದೆ. ಈ ವೇಳೆ ಫೋಟೋದಲ್ಲಿ ಕಾಣುವುದಕ್ಕಿಂತ ನಾನು 6ರಿಂದ 7 ಕೆಜೆ ಹೆಚ್ಚು ತೂಕವಾಗಿದ್ದೆ. ನನ್ನ ದೇಹ ಬೃಹತ್ ಆಗಿತ್ತು. ನಾನು ಬೃಹತ್ ದೇಹ ಹೊಂದಲು ಇಷ್ಟಪಡುತ್ತೇನೆ. ಆದರೆ ಈ ದೇಹ ನೋಡಿ ಹಲವು ಪುರುಷರಿಗೆ ಉರಿಯಾಗಿದ್ದೇಕೆ ಎಂದು ಅಂಚಲ್ ಪ್ರಶ್ನಿಸಿದ್ದಾಳೆ.

ಶಸ್ತ್ರಚಿಕಿತ್ಸೆಯ 5 ತಿಂಗಳ ಬಳಿಕ ಜಿಮ್ ಗೆ ಮರಳಿದ ಜುಕರ್ ಬರ್ಗ್, ಮಸ್ಕ್ ಗೆ ಟಾಂಗ್ ನೀಡಲು ಮಾತ್ರ ಮರೆಯಲಿಲ್ಲ!


 

Latest Videos
Follow Us:
Download App:
  • android
  • ios