Asianet Suvarna News Asianet Suvarna News

Covid19 Outbreak ದೆಹಲಿಯಲ್ಲಿ 6 ತಿಂಗಳ ಬಳಿಕ ಗರಿಷ್ಠ ಕೋವಿಡ್ ಕೇಸ್, ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಎಚ್ಚರಿಕೆ!

  • ಓಮಿಕ್ರಾನ್ ನಡುವೆ ದೇಶದಲ್ಲಿ ಮತ್ತೆ ಕೋವಿಡ್ ಆತಂಕ
  • ಮಹಾರಾಷ್ಟ್ರ, ದೆಹಲಿ, ಕೇರಳ, ಕರ್ನಾಟಕದಲ್ಲಿ ಕೋವಿಡ್ ಹೆಚ್ಚಳ
  • 6 ತಿಂಗಳ ಬಳಿಕ ದೆಹಲಿಯಲ್ಲಿ ವಾರ್ನಿಂಗ್, ಓಮಿಕ್ರಾನ್ ಆತಂಕ
Delhi witnessed sharp rise in Covid cases after 6 months maharastra and karnataka reports surge of omicron ckm
Author
Bengaluru, First Published Dec 25, 2021, 9:38 PM IST | Last Updated Dec 25, 2021, 10:11 PM IST

ನವದೆಹಲಿ(ಡಿ.25): ದೇಶದಲ್ಲಿ ಓಮಿಕ್ರಾನ್(Omicron Cases) ಪ್ರಕರಣ ಹೆಚ್ಚಳ ಜೊತೆಗೆ ಕೋವಿಡ್(Covid 19) ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ(Delhi) ಕೊರೋನಾ ವೈರಸ್ ಶೇಕಡಾ 38 ರಷ್ಟು ಹೆಚ್ಚಳ ಕಂಡಿದೆ. ಇದು 6 ತಿಂಗಳ ಬಳಿಕ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ. ಇತ್ತ ಮಹಾರಾಷ್ಟ್ರದಲ್ಲಿ(Maharastra) ಓಮಿಕ್ರಾನ್ ಹಾಗೂ ಕೊರೋನಾ ಪ್ರಕರಣ ಹೆಚ್ಚಳವಾಗುತ್ತಿದೆ. ಹೀಗಾಗಿ ಮಾರ್ಗಸೂಚಿ ಪಾಲಿಸದಿದ್ದರೆ ಲಾಕ್‌ಡೌನ್ ಅನಿವಾರ್ಯ ಎಂದು ಸಚಿವರೇ ಎಚ್ಚರಿಸಿದ್ದಾರೆ.

ಕ್ರಿಸ್ಮಸ್ ಹಬ್ಬದ(Christmas) ದಿನ ದೆಹಲಿಯಲ್ಲಿ 249 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಇತ್ತ ಹೊಸ ಎರಡು ಓಮಿಕ್ರಾನ್ ಪ್ರಕರಣಗಳು ದೆಹಲಿಯಲ್ಲಿ ಪತ್ತೆಯಾಗಿದೆ. ಒಮಿಕ್ರಾನ್ ಪ್ರಕರಣ ಆತಂಕ ಹೆಚ್ಚಾಗುತ್ತಿರುವ ಕಾರಣ ದೆಹಲಿಯಲ್ಲಿ ಕ್ರಿಸ್ಮಸ್ ಆಚರಣೆ, ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿದೆ.

Modi Addresses Nation: 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್!

ಮಹಾರಾಷ್ಟ್ರದಲ್ಲೂ ಓಮಿಕ್ರಾನ್ ಜೊತೆಗೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕಠಿಣ ನಿಯಮಗಳು ಜಾರಿಗಾಯಾಗಿದೆ. ಈಗಾಲೇ ನೈಟ್ ಕರ್ಫ್ಯೂ ಜಾರಿಯಾಗಿದ್ದು ಇದೀಗ ಲಾಕ್‌ಡೌನ್ ಮಾತುಗಳು ಕೇಳಿಬರುತ್ತಿದೆ. ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೊಪೆ ಲಾಕ್‌ಡೌನ್ ವಾರ್ನಿಂಗ್ ನೀಡಿದ್ದಾರೆ. 

ಸಾರ್ವಜನಿಕ ಪ್ರದೇಶದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ವರೆಗೆ ಐದಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಮದುವೆ ಸಮಾರಂಭಗಳಿಗೂ ನಿಯಂತ್ರಮ ಹೇರಲಾಗಿದೆ ಒಳಾಂಗಣದ ಮದುವೆಗಳಿಗೆ 100ಕ್ಕಿಂತ ಹೆಚ್ಚು ಮಂದಿ ಸೇರಿಸುವಂತಿಲ್ಲ. ಇನ್ನು ಹೊರಾಂಗಣದಲ್ಲಿ ನಡೆಯಲಿರುವ ಮದುವೆ ಸಮಾರಂಭಕ್ಕೆ 250 ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಇದರ ನಡುವೆ ರಾಜೇಶ್ ತೊಪೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಬೇಡಿಕೆ ಪ್ರತಿ ದಿನ 800 ಟನ್ ಗಡಿ ದಾಟಿದರೆ ಲಾಕ್‌ಡೌನ್ ಖಚಿತ ಎಂದು ರಾಜೇಶ್ ತೊಪೆ ಹೇಳಿದ್ದಾರೆ.ಮಹಾರಾಷ್ಟ್ರದಲ್ಲಿ ಒಂದೊಂದೆ ಕಠಿಣ ನಿಮಯ ಜಾರಿಯಾಗುತ್ತಿದೆ. ಒಮಿಕ್ರಾನ್ ಆತಂಕವೂ ಹೆಚ್ಚಾಗುತ್ತಿದೆ.

ಕರ್ನಾಟಕದಲ್ಲೂ ಹೆಚ್ಚಿದ ಆತಂಕ
ಕರ್ನಾಟಕದಲ್ಲೂ ಆತಂಕ ಹೆಚ್ಚಾಗುತ್ತಿದೆ. ಇಂದು ಕೋಲಾರದಲ್ಲಿ 33 ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಅಂಟಿಕೊಂಡಿದೆ. ಇತ್ತ ಒಮಿಕ್ರಾನ್ ಕೇಸ್ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ನಾಳೆ(ಡಿ.26) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೋವಿಡ್ ಪರಿಶೀಲನಾ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ರಾಜ್ಯದಲ್ಲಿ ಕೋವಿಡ್ ಓಮಿಕ್ರಾನ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ನಿರ್ಣಯಗಳ ಕುರಿತು ಚರ್ಚೆ ನಡೆಯಲಿದೆ. ಇಷ್ಟೇ ಅಲ್ಲ ಕೆಲ ಹೊಸ ಕೋವಿಡ್ ಮಾರ್ಗಸೂಚಿ ಜಾರಿ ಮಾಡುವ ಸಾಧ್ಯತೆ ಇದೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 7,189 ಕೋವಿಡ್ ಪ್ರಕರಣ ದಾಖಲಾಗಿದೆ. ಇನ್ನು ಒಮಿಕ್ರಾನ್ ಪ್ರಕರಣ 415ಕ್ಕೆ ಏರಿಕೆಯಾಗಿದೆ. ಭಾರತದಲ್ಲಿರುವ ಸ್ರಕ್ರೀಯ ಕೋವಿಡ್ ಪ್ರಕರಣ ಸಂಖ್ಯೆ 77,032. ಕಳೆದ 24 ಗಂಟೆಗಳಲ್ಲಿ 387 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ 4,79,520ಕ್ಕೆ ಏರಿಕೆಯಾಗಿದೆ.  ಕಳೆದ 24 ಗಂಟೆಯಲ್ಲಿ 7,286 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಕೊರೋನಾದಿಂದ ಗುಣಮುಖರಾದವರ ಒಟ್ಟು ಸಂಖ್ಯೆ  3,42,23,263.

ಫೆಬ್ರವರಿ ತಿಂಗಳಲ್ಲಿ ಕೊರೋನಾ ವೈರಸ್ ಹಾಗೂ ಒಮಿಕ್ರಾನ್ ಆರ್ಭಟ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಭಾರತದಲ್ಲಿ 3ನೇ ಅಲೆಗೆ ಕಾರಣವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 2020, 2021ರಲ್ಲೂ ವರ್ಷದ ಆರಂಭದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಲೇ ಸಾಗಿದೆ. ಜನವರಿಯಿಂದ ಸರಾಸರಿ ಜೂನ್ ತಿಂಗಳ ವರೆಗೆ ಕೋವಿಡ್ ಎರಡು ಅಲೆಯನ್ನು ಸೃಷ್ಟಿಸಿದೆ. ಇದರಿಂದ ಆದ ಪರಿಣಾಮದಿಂದ ಇನ್ನು ಸರಿಯಾಗಿ ಚೇತರಿಕೆ ಕಂಡಿಲ್ಲ.

Latest Videos
Follow Us:
Download App:
  • android
  • ios