ನವದೆಹಲಿ(ಏ.27): ದೇಶದಲ್ಲಿ ಕೊರೋನಾ ಎರಡನೇ ಅಲೆ ಭಾರೀ ಆತಂಕ ಸೃಷ್ಟಿಸಿದೆ. ಮೊದಲ ಅಲೆಗಿಂತಲೂ ಭಾರೀ ಪ್ರಮಾಣದಲ್ಲಿ ಸಾವು ನೋವು ಸೃಷ್ಟಿಸಿರುವ ಈ ಕೊರೋನಾ ನಿಯಂತ್ರಿಸಲು ಕೆಂದ್ರ, ರಾಜ್ಯ ಸರ್ಕಾರಗಳು ಎಲ್ಲಾ ರೀತಿಯ ಯತ್ನ ನಡೆಸುತ್ತಿವೆ. ಹೀಗಿರುವಾಗಲೇ ಅನೇಕ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಎಜದುರಾಗಿರುವಿದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರಲ್ಲೂ ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಸ್ಥಿತಿ ಕೈ ಮೀರಿದೆ. ಹೀಗಿರುವಾಗ ಅಲದಲಿನ ಸಿಎಂ ಕೇಜ್ರೀವಾಲ್‌ ಆಕ್ಸಿಜನ್ ಪೂರೈಕೆ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಹೌದು ಬ್ಯಾಂಕಾಂಕ್‌ನಿಂದ ಆಕ್ಸಿಜನ್ ಟ್ಯಾಂಕರ್ ಹಾಗೂ ಫ್ರಾನ್ಸ್ ನಿಂದ ಆಕ್ಸಿಜನ್ ಪ್ಲಾಂಟ್‌ಗೆ ಸಂಬಂಧಪಟ್ಟಂತೆ ಸಲಕರಣೆಗಳ ಆಮದು ಮಾಡಲು ಸರ್ಕಾರ ನಿರ್ಧರಿಸಿದೆ. ಈ ಬ್ಗಗೆ ಪ್ರತಿಕ್ರಿಯಿಸಿರುವ  ಸಿಎಂ ಕೇಜ್ರೀವಾಲ್ ನಾನು ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಧಾರ್ಮಿಕ ಸಂಸ್ಥೆಗಳು, ಉದ್ಯಮಿಗಳಿಗೆ ಪತ್ರ ಬರೆದಿದ್ದೆ. ಇದಕ್ಕೆ ಉತ್ತಮ ಪ್ರಕ್ರಿಯೆ ಸಿಕ್ಕಿದೆ. ಕೇಂದ್ರ ಸರ್ಕಾರದ ಎಂಟು ಸೇರಿದಂತೆ ಒಟ್ಟು 44 ಪ್ಲಾಂಟ್ ಗಳನ್ನು ದೆಹಲಿಯಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಒಂದು ತಿಂಗಳಲ್ಲಿ ಈ ಕೆಲಸ ಆಗಲಿದೆ ಎಂದಿದ್ದಾರೆ.

ಇಷ್ಟೇ ಅಲ್ಲದೇ ದೆಹಲಿಯಲ್ಲಿ ಭಾರೀ ಪ್ರಮಾಣದಲ್ಲಿ ಬೆಡ್‌ ಕೊರತೆ ಎದುರಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಜ್ರೀವಾಲ್ 1200 ಐಸಿಯು ಬೆಡ್ಸ್ ಇನ್ನು 10 ದಿನಗಳಲ್ಲಿ ಲಭ್ಯವಾಗಲಿವೆ ಎಂದಿದ್ದಾರೆ. ಇದರಿಂದ ಬೆಡ್‌ ಇಲ್ಲದೇ ಅಲೆದಾಡುವವರಿಗೆ ಕೊಂಚ ನೆಮ್ಮದಿ ಸಿಗಲಿದೆ.