ನವದೆಹಲಿ[ಫೆ.27]: ಆಮ್ ಆದ್ಮಿ ಪಕ್ಷದ ಕಾರ್ಪೋರೇಟರ್ ತಾಹಿರ್ ಹುಸೈನ್ ವಿರುದ್ಧ ದೆಹಲಿ ಹಿಂಸಾಚಾರಕ್ಕೆ ಪ್ರಚೋದನೆ ನಿಡಿರುವ ಆರೋಪ ಕೇಳಿ ಬಂದಿದೆ. ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಕುಟುಂಬಸ್ಥರು ತಾಹಿರ್ ವಿರುದ್ಧ ಹತ್ಯೆಗೈದಿರುವ ಆರೋಪವೆಸಗಿದ್ದಾರೆ. 

"

ಅಲ್ಲದೇ ಫೆಬ್ರವರಿ 25ರಂದು ಚಾಂದ್ ಬಾಗ್ ನಲ್ಲಿರುವ ತಾಹೀರ್ ಮನಯಿಂದಲೇ ಉದ್ರಿಕ್ತರು ಜನರ ಮೇಲೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಎಸೆದಿದ್ದಾರೆಂಬ ಆರೋಪವೂ ಕೇಳಿ ಬಂದಿದೆ. ತಾಹೀರ್ ಈ ಆರೋಪ ಅಲ್ಲಗಳೆದಿದ್ದು, ತಾನು ಕಿಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ಆದರೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಅವರ ಮನೆ ಛಾವಣಿಯಲ್ಲಿ ಅಪಾರ ಪ್ರಮಾಣದಲ್ಲಿ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಗಳಿರುವುದನ್ನು ಸಾಬೀತು ಮಾಡಿದೆ.

ತಾಹೀರ್ ಹುಸೈನ್ ಮನೆ ಚಾವಡಿಯಲ್ಲಿ ಅಪಾರ ಪ್ರಮಾಣದಲ್ಲಿ ದಾಸ್ತಾನಿಟ್ಟ ಪೆಟ್ರೋಲ್ ಬಾಂಬ್ ಪತ್ತೆಯಾಗಿದ್ದು, ಆಪ್ ನಾಯಕ ಮಾತ್ರ ಮನೆಯಿಂದ ನಾಪತ್ತೆಯಾಗಿದ್ದಾರೆ. ಇದಕ್ಕೂ ಮುನ್ನ ತಾಹೀರ್ ಮನೆ ಮಹಡಿಯಿಂದ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಎಸೆದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದ್ದವು. ಆದರೆ ತಾಹೀರ್ ಈ ಆರೋಪವನ್ನು ಅಲ್ಲಗಳೆಯುತ್ತಾ ತಾನು ಆ ಸಂದರ್ಭದಲ್ಲಿ ಮನೆಯಲ್ಲಿರಲಿಲ್ಲ. ಬಿಜೆಪಿ ನಾಯಕರು ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ನಡೆಸುತ್ತಿದ್ದಾರೆ ಎಂದಿದ್ದರು.

ತಾಹೀರ್ ಹೇಳಿದ್ದೇನು?

ಗುಪ್ತಚರ ಇಲಾಖೆ ಅಧಿಕಾರಿ ಕುಟುಂಬಸ್ಥರು ತನ್ನ ವಿರುದ್ಧ ಹತ್ಯೆ ಆರೋಪವೆಸಗಿರುವ ಹಾಗೂ ತನ್ನ ಮನೆಯಿಂದ ಪೆಟ್ರೋಲ್ ದಾಳಿ ನಡೆಸುತ್ತಿರುವ ವಿಡಿಯೀ ವೈರಲ್ ಆದ ಬೆನ್ನಲ್ಲೇ ತಾಹೀರ್ ಸ್ಪಷ್ಟನೆಯೊಂದನ್ನು ನೀಡಿದ್ದರು. ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದ ತಾಹೀರ್ ಸೋಶಿಯಲ್ ಮೀಡಿಯಾದಲ್ಲಿ ನನ್ನ ವಿರುದ್ಧ ಹರಿದಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು. ನನ್ನ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ ಎಂದಿದ್ದರು.

ಇನ್ನು ದೆಹಲಿಯಲ್ಲಿ ಸಿಎಎ ಪರ ಹಾಗೂ ವಿರೋಧಿಗಳ ನಡುವೆ ಭುಗಿಲೆದ್ದ ಹಿಂಸಾಚಾರಕ್ಕೆ 27 ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಒಂದು ತಿಂಗಳವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"