ದಿಲ್ಲಿಯಲ್ಲಿ ಕೊರೋನಾ 3ನೇ ಅಲೆ: ಸಿಎಂ ಕೇಜ್ರಿವಾಲ್!
ದೆಹಲಿಯಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇದಿನೇ ಏರಿಕೆ| ದಿಲ್ಲಿಯಲ್ಲಿ ಕೊರೋನಾ 3ನೇ ಅಲೆ: ಸಿಎಂ ಕೇಜ್ರಿವಾಲ್
ನವದೆಹಲಿ(ನ.05): ದೆಹಲಿಯಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದ್ದು, ಈಗಿನದು ಮೂರನೆಯ ಅಲೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಈ ಹಿಂದೆ ಇಂಥ ಸಾಧ್ಯತೆ ಬಗ್ಗೆ ಆರೋಗ್ಯ ಸಚಿವ ಜೈನ್ ಸುಳಿವು ನೀಡಿದ್ದರು. ಆದರೆ ಇದೀಗ ಸ್ವತಃ ಕೇಜ್ರಿವಾಲ್ ಅವರೇ ಈ ಮಾಹಿತಿ ನೀಡಿದ್ದಾರೆ. ಇದೇ ವೇಳೆ ವೈರಸ್ ಹರಡುವುದನ್ನು ನಿಯಂತ್ರಿಸಲು ಮತ್ತು ಸೋಂಕಿತರ ಚಿಕಿತ್ಸೆಗೆ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿರುವುದರಿಂದ ಯಾರೂ ಆತಂಕಪಡಬೇಕಿಲ್ಲ ಎಂದೂ ಅಭಯ ನೀಡಿದ್ದಾರೆ.
ದೆಹಲಿಯಲ್ಲಿ ನಿತ್ಯ ಈಗ 6000-6500 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಮೊದಲ ಎರಡು ಅಲೆಗಿಂತ ಹೆಚ್ಚಿನ ದೈನಂದಿನ ಸಂಖ್ಯೆಯಾಗಿದೆ. ಸೆ.17ರಂದು ದೆಹಲಿಯಲ್ಲಿ ಎರಡನೇ ಅಲೆಯ ಗರಿಷ್ಠ ಸಂಖ್ಯೆ 4500 ದಾಖಲಾಗಿ, ನಂತರ ಇಳಿಕೆ ಆರಂಭವಾಗಿತ್ತು. ಈಗ ಮತ್ತೆ ಒಂದು ವಾರದಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ದೆಹಲಿಯಲ್ಲಿ ಕೊರೋನಾ ರೋಗಿಗಳಿಗೆ ಸಾಕಷ್ಟುಹಾಸಿಗೆಗಳಿವೆ. ಆದರೆ, ವೆಂಟಿಲೇಟರ್ ಸೌಕರ್ಯವಿರುವ ಐಸಿಯು ಹಾಸಿಗೆಗಳ ಕೊರತೆಯಿದೆ. ಅದನ್ನೂ ಒಂದೆರಡು ದಿನಗಳಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದರು.