Asianet Suvarna News Asianet Suvarna News

ಪೊಲೀಸರಿಂದ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ವಿಚಾರಣೆ!

* ಪೊಲೀಸರಿಂದ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ವಿಚಾರಣೆ

* ಅಕ್ರಮವಾಗಿ ಕೋವಿಡ್‌ ಔಷದಿ ವಿತರಣೆ ಆರೋಪ ಹಿನ್ನೆಲೆ

* ಪರಿಹಾರ ನಿಲ್ಲಿಸಲ್ಲ, ಇದಕ್ಕೆಲ್ಲಾ ನಾನು ಹೆದರಲ್ಲ: ಶ್ರೀನಿವಾಸ್‌

Delhi Police questions Youth Congress chief BV Srinivas over Covid aid pod
Author
Bangalore, First Published May 15, 2021, 9:48 AM IST

ನವದೆಹಲಿ(ಮೇ.15): ಕೊರೋನಾ ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಾಂಗ್ರೆಸ್‌ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್‌ ಅವರನ್ನು ದೆಹಲಿ ಪೊಲೀಸರ ಅಪರಾಧ ವಿಭಾಗದ ತಂಡ ಶುಕ್ರವಾರ ವಿಚಾರಣೆ ನಡೆಸಿದೆ.

ಕೋವಿಡ್‌ ಔಷಧಗಳ ಅಕ್ರಮ ಹಂಚಿಕೆಯಲ್ಲಿ ಶ್ರೀನಿವಾಸ್‌ ಸೇರಿ ಹಲವು ರಾಜಕೀಯ ನಾಯಕರು ತೊಡಗಿಸಿಕೊಂಡಿದ್ದಾರೆ ಎಂದು ದೀಪಕ್‌ ಸಿಂಗ್‌ ಎಂಬುವರು ದಿಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸುವಂತೆ ಹೈಕೋರ್ಟ್‌ ನೀಡಿದ ಸೂಚನೆ ಮೇರೆಗೆ ಬಿ.ವಿ ಶ್ರೀನಿವಾಸ್‌ ಕಚೇರಿಗಳ ಮೇಲೆ ದಾಳಿ ನಡೆಸಿ, ವಿಚಾರಣೆ ನಡೆಸಲಾಗಿದೆ ಎಂದು ದೆಹಲಿ ಪೊಲೀಸ್‌ ವಕ್ತಾರ ಚಿನ್ಮಯ್‌ ಬಿಸ್ವಾಲ್‌ ತಿಳಿಸಿದ್ದಾರೆ. ಆದರೆ ಪೊಲೀಸರ ಈ ಕ್ರಮಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ.

ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಶ್ರೀನಿವಾಸ್‌, ‘ನಮ್ಮ ಪರಿಹಾರ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಜೊತೆಗೆ ಇದಕ್ಕೆಲ್ಲಾ ನಾವು ಬೆದರುವುದಿಲ್ಲ’ ಎಂದು ಗುಡುಗಿದ್ದಾರೆ. ಮತ್ತೊಂದೆಡೆ ‘ಕೊಲೆ ಮಾಡುವವನಿಗಿಂತ ರಕ್ಷಣೆ ಮಾಡುವವನೇ ಶ್ರೇಷ್ಠ ವ್ಯಕಿ’್ತ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವ ವೈದ್ಯಕೀಯ ಆಮ್ಲಜನಕದ ಸಿಲಿಂಡರ್‌, ರೆಮ್‌ಡೆಸಿವಿರ್‌ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳನ್ನು ಶ್ರೀನಿವಾಸ್‌ ಕಲ್ಪಿಸುತ್ತಿದ್ದಾರೆ. ಇದಕ್ಕಾಗಿ ದೇಶದ ಹಲವು ನಗರಗಳಲ್ಲಿ ಯುವ ಕಾಂಗ್ರೆಸ್‌ಕಾರ್ಯಕರ್ತರ ಪಡೆಯೊಂದನ್ನೇ ಕಟ್ಟಿದ್ದಾರೆ.

Follow Us:
Download App:
  • android
  • ios