Asianet Suvarna News Asianet Suvarna News

ಅಪ್ರಾಪ್ತೆ ಸೇರಿ ಐವರು ಮಹಿಳೆಯರಿಗೆ ಲೈಂಗಿಕ ಕಿರುಕುಳ: ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಅರೆಸ್ಟ್!

ಓರ್ವ ಅಪ್ರಾಪ್ತೆ ಸೇರಿ ಐವರು ಮಹಿಳೆಯರಿಗೆ ಕಿರುಕುಳ| ಪೊಲೀಸ್ ಇಲಾಖೆ ಸಬ್‌ ಇನ್ಸ್‌ಪೆಕ್ಟರ್‌ ಅರೆಸ್ಟ್| ರಸ್ತೆಯಲ್ಲೇ ಹಸ್ತಮೈಥುನ

Delhi Police Arrests Sub Inspector for Molesting Five Women Including Minor Pod
Author
Bangalore, First Published Oct 26, 2020, 2:55 PM IST

ದ್ವಾರಕಾ(ಅ.26): ಓರ್ವ ಅಪ್ರಾಪ್ತೆ ಸೇರಿ ಐವರು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದಡಿ ದೆಹಲಿ ಪೊಲೀಸ್ ಇಲಾಖೆ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರನ್ನು ಶನಿವಾರ ಅರೆಸ್ಟ್ ಮಾಡಿದ್ದಾರೆ. ಬಂಧಿತ ಪೊಲೀಸ್ ಅಧಿಕಾರಿಯನ್ನು ಪುನೀತ್ ಗರೆವಾಲ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಡಿಸಿಪಿ ಟ್ರಾಫಿಕ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದಸ್ದರೆನ್ನಲಾಗಿದೆ.

ಪುನೀತ್‌ರನ್ನು ಶನಿವಾರ ಬಂಧಿಸಲಾಗಿದ್ದು, ಸದ್ಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಇಂದು ಪೊಲೀಸರು TIPಗೆ ಅರ್ಜಿ ಸಲ್ಲಿಸಲಾಗಿದ್ದು, ಆರೋಪಿಯ ಹೇಳಿಕೆಯನ್ನೂ ಪಡೆದುಕೊಳ್ಳುವ ಸಾಧ್ಯತೆ ಇದೆ.

ಅಕ್ಟೋಬರ್ 17ರಂದು ತಾನು ದ್ವಾರಕಾದ ಸೈಕ್ಲಿಂಗ್ ಮಾಡುವ ವೇಳೆ ಬೂದು ಬಣ್ಣದ ಬೊಲೇರೋ ಗಾಡಿ ಚಲಾಯಿಸುತ್ತಿದ್ದ ವ್ಯಕ್ತಿ ತನಗೆ ಕಿರುಕುಳ ನೀಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಳು. ಈ ಘಟನೆಯ ಬಳಿಕ ಪೊಲೀಸಪ್ಪನ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ.

ನಡೆದಿದ್ದೇನು?

ನಡೆದ ಘಟನೆ ವಿವರಿಸಿದ ಮಹಿಳೆ ತಾನು ಸೈಕ್ಲಿಂಗ್ ನಡೆಸುವಾಗ ಬೂದು ಬಣ್ಣದ ವಾಹನವೊಂದು ನನ್ನ ಹಿಂಬದಿಯಲ್ಲಿ ಬರುತ್ತಿತ್ತು. ಆ ಗಾಡಿ ಡ್ರೈವರ್ ನಿರಂತರವಾಗಿ ಹಾರ್ನ್ ಹಾಕುತ್ತಿದ್ದ. ಹೀಗಿರುವಾಗ ಚಾಲಕನಿಗೆ ಮುಂದೆ ಹೋಗಬೇಕೇನೋ ಎಂದು ಭಾವಿಸಿ ನಾನು ಸೈಡ್ ಬಿಟ್ಟುಕೊಟ್ಟೆ. ಆದರೂ ಆತ ಫಾಲೋ ಮಾಡುತ್ತಿದ್ದ. ಖಾತ್ರಿಪಡಿಸಿಕೊಳ್ಳಲು ನಾನು ಸೈಕಲ್ ನಿಲ್ಲಿಸಿದೆ. ಹೀಗಿರುವಾಗ ಆತ ನನ್ನ ಬಳಿ ಬಂದು ಅಡ್ರೆಸ್ ಒಂದನ್ನು ಕೇಳಿದ. ಆದರೆ ಆತನಿಗೆ ನಾನು ಉತ್ತರಿಸಬೇಕು ಎನ್ನುವಷ್ಟರಲ್ಲಿ ಆತನ ತನ್ನ ಪ್ಯಾಂಟ್ ಜಿಪ್ ತೆರೆದು ಹಸ್ತಮೈಥುನ ಮಾಡಿಕೊಳ್ಳಲಾರಂಭಿಸಿದ. ಅಲ್ಲ ಲೈಂಗಿಕವಾಗಿ ನಿಂದಿಸಲಾರಂಭಿಸಿದ. ಇದಾದ ಬಳಿಕ ಮನೆಗೆ ತೆರಳಿ ಹೆತ್ತವರಿಗೆ ನಡೆದ ವಿಚಾರ ತಿಳಿಸಿ ಸುಮಾರು  9.30 ಗಂಟೆಗೆ 1091 ನಂಬರ್‌ಗೆ ಕರೆ ಮಾಡಿ ದೂರು ನೀಡಿದೆ ಎಂದಿದ್ದಾರೆ. 

ಇನ್ನು ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸಪ್ಪ ಇನ್ನೂ ನಾಲ್ವರು ಮಹಿಳೆಯರಿಗೆ ಇದೇ ರೀತಿ ಅದೇ ತರಸ್ತೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ಈ ಎಲ್ಲಾ ಘಟನೆಗಳು ಅಕ್ಟೋಬರ್  17 ರಿಂದ 20ರವರೆಗೆ ನಡೆದಿವೆ.

ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಈ ಕಾರು ಕಾಣಿಸಿದೆಯಾದರೂ ನಂಬರ್ ಪ್ಲೇಟ್‌ ಬಟ್ಟೆಯಿಂದ ಕವರ್ ಆಗಿದ್ದು ಕಂಡು ಬಂದಿದೆ. ಹೀಗಾಗಿ ಆ ಕಾರು ಚಲಿಸಿದ ರಸ್ತೆಯ ಎಲ್ಲಾ ಸಿಸಿಟಿವಿಯನ್ನು ಪರಿಶೀಲಿಸಿದಾಗ ಕಾರು ಅಂತಿಮವಾಗಿ ಮನೆಯೊಂದರ ಎದುರು ನಿಲ್ಲುವುದನ್ನು ನೋಡಿದ್ದಾರೆ. ಈ ಕಾರು ಪೊಲೀಸಪ್ಪನ ಹೆಂಡತಿ ಹೆಸರಲ್ಲಿ ನೋಂದಾಯಿಸಲಾಗಿತ್ತು. ಇನ್ನು ಈ ಪೊಲೀಸ್ ಅಧಿಕಾರಿಗೆ ಓರ್ವ ಮಗಳೂ ಇದ್ದಾಳೆ. ಸದ್ಯ ಈ ಪೊಲೀಸಪ್ಪನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 

Follow Us:
Download App:
  • android
  • ios