Asianet Suvarna News Asianet Suvarna News

ಆಕ್ಸಿಜನ್ ವಿವಾದ: 'ಫೈನಲ್ ರಿಪೋರ್ಟ್‌ ಬರುವವರೆಗೆ ಏನೂ ಹೇಳಲು ಸಾಧ್ಯವಿಲ್ಲ!'

* ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚುವರಿ ಆಮ್ಲಜನಕಕ್ಕೆ ಬೇಡಿಕೆ ಇಟ್ಟಿದ್ದ ಆರೋಪ

* ಆಡಿಟ್ ಸಮಿತಿಯ ವರದಿ ಬೆನ್ನಲ್ಲೇ ಭುಗಿಲೆದ್ದಿರುವ ವಿವಾದ

* ಆಕ್ಸಿಜನ್ ವಿವಾದ: 'ಫೈನಲ್ ರಿಪೋರ್ಟ್‌ ಬರುವವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಡಾ. ಗುಲೇರಿಯಾ

Delhi Oxygen Audit Not Right To Say Govt Exaggerated Requirement By 4 Times AIIMS Chief Clarifies pod
Author
Bangalore, First Published Jun 26, 2021, 2:06 PM IST
  • Facebook
  • Twitter
  • Whatsapp

ನವದೆಹಲಿ(ಜೂ.26): ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ ಆಕ್ಸಿಜನ್ ಆಡಿಟ್ ಕಮಿಟಿ ರಿಪೋರ್ಟ್ ಬೆನ್ನಲ್ಲೇ ಎದ್ದಿರುವ ವಿವಾದವನ್ನು ತಣ್ಣಗಾಗಿಸುವ ಯತ್ನ ನಡೆಸಿದ್ದಾರೆ. ಮಾದ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಂತಿಮ ವರದಿ ಬರುವವರೆಗೆ ದೆಹಲಿ ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಕ್ಸಿಜನ್‌ಗೆ ಬೇಡಿಕೆ ಇಟ್ಟಿದೆ ಎನ್ನುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಎರಡನೇ ಅಲೆ ಗರಿಷ್ಠ ಮಟ್ಟಕ್ಕೆ ತಲುಪಿದ ಸಂದರ್ಭದಲ್ಲಿ ಇಡೀ ದೇಶಾದ್ಯಂತ ಮೆಡಿಕಲ್ ಆಕ್ಸಿಜನ್‌ ಕೊರತೆ ಭಾರೀ ಪ್ರಮಾಣದಲ್ಲಿ ಕಂಡು ಬಂದಿತ್ತು. ಹೀಗಿರುವಾಗ ದೇಶದ ಎಲ್ಲಾ ರಾಜ್ಯಗಳಿಗೆ ಅವುಗಳ ಅಗತ್ಯಕ್ಕೆ ಅನುಗುಣವಾಗಿ ಆಮ್ಲಜನಕ ಪೂರೈಸಲು ಸುಪ್ರೀಂ ಕೋರ್ಟ್ ಹನ್ನೆರಡು ಸದಸ್ಯರು ಸ್ಪೆಷಲ್ ಆಡಿಟ್ ಸಮಿತಿ ರಚಿಸಿತ್ತು. ಇದರ ವರದಿ ಸದ್ಯ ದೆಹಲಿ ಸರ್ಕಾರಕ್ಕೆ ಬಹುದೊಡ್ಡ ತಲೆನೋವು ಕೊಟ್ಟಿದೆ. ಆದರೆ ಈ ವರದಿ ಇನ್ನೂ ಅಧಿಕೃಕೃತವಾಗಿ ಬಿಡುಗಡೆಯಾಗಿಲ್ಲ.

ಹೀಗಿರುವಾಗ ಈ ವಿಚಾರವಾಗಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಾ. ಗುಲೇರಿಯಾ ಈ ಪ್ರಕರಣ ಸದ್ಯ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ ತೀರ್ಪಿಗೆ ಕಾಯಬೇಕಿದೆ. ಈವರೆಗೂ ಅಂತಿಮ ವರದಿ ಕೂಡಾ ಬಂದಿಲ್ಲ. ಹೀಗಾಗಿ ಈ ವಿಚಾರವಾಗಿ ಏನೇ ಹೇಳುವುದೂ ಸರಿಯಲ್ಲ ಎಂದಿದ್ದಾರೆ.

Follow Us:
Download App:
  • android
  • ios