ದೆಹಲಿ(ಏ.06): ಮಹಾಮಾರಿ ಕೊರೋನಾ ಆರ್ಭಟಕ್ಕೆ ಬ್ರೇಕ್ ಹಾಕಲು  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದಿನಿಂದ ಏಪ್ರಿಲ್ 30ರವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡಿಲಾಗಿದೆ. ಸರ್ಕಾರದ ಆದೇಶದ ಪ್ರಕಾರ, ಇಂದಿನಿಂದ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದೆ. ಕೊರೋನಾ ನಿಯಂತ್ರಣಕ್ಕಾಗಿ  ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಕ್ರಮ ಕೈಗೊಂಡಿದ್ದಾರೆ.

ಕಳೆದ ಎರಡು ವಾರಗಳಲ್ಲಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು. ಸೋಮವಾರ ದೆಹಲಿಯಲ್ಲಿ 3,548 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 15 ಮಂದಿ ಕೊರೋನಾಗೆ ಬಲಿಯಾಗಿದ್ದರು. 

ಕರ್ನಾಟಕದ ಕೊರೋನಾ ಪರಿಸ್ಥಿತಿ ಎಲ್ಲಿಗೆ ಬಂದಿದೆ?

ಸರ್ಕಾರದ ಹೊಸ ನಿಯಮಗಳ ಪ್ರಕಾರ, ಖಾಸಗಿ ವೈದ್ಯರು, ನರ್ಸ್​​ಗಗಳಿಗೆ ರಾತ್ರಿ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ.  ಗುರುತಿನ ಚೀಟಿ ತೋರಿಸಬೇಕು ಎಂದು ತಿಳಿಸಲಾಗಿದೆ.

ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್​ ನಿಲ್ದಾಣಗಳಿಗೆ ಹೋಗುವ ಪ್ರಯಾಣಿಕರಿಗೂ ಈ ನೈಟ್​​ ಕರ್ಫ್ಯೂ ಅನ್ವಯವಾಗುವುದಿಲ್ಲ. ಆದರೆ ಸಂಬಂಧಿತ ಮಾನ್ಯತೆ ಹೊಂದಿರುವ ಟಿಕೆಟ್ ತೋರಿಸಬೇಕಾಗುತ್ತದೆ. ಗರ್ಭಿಣಿಯರು ಹಾಗೂ ರೋಗಿಗಳಿಗೂ ಸಹ ವಿನಾಯಿತಿ ನೀಡಲಾಗಿದೆ.ಸಾರಿಗೆ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಬಸ್​ಗಳು, ಮೆಟ್ರೋ, ಆಟೋ ಹಾಗೂ ಟ್ಯಾಕ್ಸಿಗಳನ್ನು ಓಡಾಡಿಸಬಹುದು ಎನ್ನಲಾಗಿದೆ.

ಈ ಎಲ್ಲ ನೀತಿಗಳನ್ನು ಕಂಡ ಸೋಶಿಯಲ್ ಮೀಡಿಯಾ ಮಾತ್ರ ದೆಹಲಿ ನೈಟ್ ನಿಷೇಧಾಜ್ಞೆಯನ್ನು ತನ್ನದೇ ದಾಟಿಯಲ್ಲಿ ಟೀಕಿಸಿದೆ. ಮೆಮೆಗಳು, ಟ್ರೋಲ್ ಗಳನ್ನು ಕೇಳುವುದೇ ಬೇಡ. ಬಾಲಿವುಡ್ ಸಿನಿಮಾ ದೃಶ್ಯಗಳನ್ನು ಬಳಸಿಕೊಂಡು ಮಾಡಿರುವ ಒಂದಿಷ್ಟು ಟ್ರೋಲ್ ಗಳನ್ನು, ರಿಯಾಕ್ಷನ್ ಗಳನ್ನು ನೋಡಿಕೊಂಡು ಬನ್ನಿ...