Asianet Suvarna News Asianet Suvarna News

ಇಡಿ ಅಧಿಕಾರಿಗಳಿಂದ ಮನೀಶ್ ಸಿಸೋಡಿಯಾ ಬಂಧನ, ಆಪ್ ನಾಯಕನಿಗೆ ಮತ್ತೊಂದು ಸಂಕಷ್ಟ!

ನ್ಯಾಯಾಂಗ ಬಂಧನದಲ್ಲಿರುವ ಆಪ್ ನಾಯಕ ಮನೀಶ್ ಸಿಸೋಡಿಯಾಗೆ ಸಂಕಷ್ಟ ಹೆಚ್ಚಾಗಿದೆ. ಇದೀಗ ಇಡಿ ಅಧಿಕಾರಿಗಳು ಸಿಸೋಡಿಯರನ್ನು ಬಂಧಿಸಿದ್ದಾರೆ.

Delhi liquor scam APP leader Manish sisodia arrested by ED officers in connection with Money laundering case ckm
Author
First Published Mar 9, 2023, 7:25 PM IST

ನವದೆಹಲಿ(ಮಾ.09): ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಬಿಐ ಅಧಿಕಾರಿಗಳು ಫೆಬ್ರವರಿ 26 ರಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧಿಸಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮನೀಶ್ ಸಿಸೋಡಿಯರನ್ನು ಇಡಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಇಂದು 45 ನಿಮಿಷಗಳ ಕಾಲ ಸಿಸೋಡಿಯಾ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಅನ್ನೋ ಕಾರಣಕ್ಕೆ ಬಂಧಿಸಿದ್ದಾರೆ.

ಸಿಬಿಐ ಬಂಧನ, ಜಾಮೀನು ನಿರಾಕರಣೆಯಿಂದ ತಿಹಾರ ಜೈಲು ಸೇರಿದ ಮನೀಶ್ ಸಿಸೋಡಿಯಾರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾರ್ಚ್ 7 ರಂದು ಸತತ 5 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಇದಾದ ಬಳಿಕ ಇಂದು ಮತ್ತೆ ಮನೀಶ್ ಸಿಸೋಡಿಯರನ್ನು 45 ನಿಮಿಷಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಈ ವಿಚಾರಣೆ ಬಳಿಕ ಮನೀಶ್ ಸಿಸೋಡಿಯಾರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. 

ಸಿಬಿಐ ಬಂಧನದ ಬಳಿಕ ಇದೀಗ ಇಡಿ ಸರದಿ, ಸಿಸೋಡಿಯಾ ಮತ್ತೆ ಅರೆಸ್ಟ್ ಆಗಲಿದ್ದಾರೆ, ಆಪ್ ಭವಿಷ್ಯ!

ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದರು. ಮಾರ್ಚ್ 6 ರಂದು ದೆಹಲಿ ಕೋರ್ಟ್, ಸಿಸೋಡಿಯಾರನ್ನು ಮಾರ್ಚ್ 20 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಜಾಮೀನು ಅರ್ಜಿ ಮಾರ್ಚ್ 10 ರಂದು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಬರಲಿದೆ. ಇದೀಗ ಸಿಸೋಡಿಯಾಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದರೂ, ಮತ್ತೆ ಜೈಲಿನಲ್ಲೆ ಕಳೆಯಬೇಕಿದೆ.ಕಾರಣ ಇಡಿ ಅಧಿಕಾರಿಗಳ ಬಂಧನ ಶಿಕ್ಷೆ ಚಾಲ್ತಿಯಲ್ಲಿರಲಿದೆ.

ಸಿಬಿಐ ಅಧಿಕಾರಿಗಳು ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮ ಕಾರಣಕ್ಕೆ ಮನೀಶ್ ಸಿಸೋಡಿಯಾರನ್ನು  ಬಂಧಿಸಿತ್ತು. ಇದೀಗ ಇಡಿ ಅಧಿಕಾರಿಗಳು ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಅನ್ನೋ ಕಾರಣಕ್ಕೆ ಬಂಧಿಸಲಾಗಿದೆ.  

ಸಿಬಿಐ ಅಧಿಕಾರಿಗಲು ಸೆಕ್ಷನ್ 120 B ( ಕ್ರಿಮಿನಲ್ ಪಿತೂರಿ), 477 A( ಉದ್ದೇಶಿತ ವಂಚನೆ) ಹಾಗೂ ಭ್ರಷ್ಟಾಚಾರ ವಿರೋಧಿ ಕಾಯ್ದಿ ಸೆಕ್ಷನ್ 7 ಅಡಿಯಲ್ಲಿ ಮನೀಶ್ ಸಿಸೋಡಿಯಾರನ್ನು ಬಂಧಿಸಲಾಗಿತ್ತು. ಫೆಬ್ರವರಿ 27ರಂದು ಕೋರ್ಟ್‌ಗೆ ಹಾಜರು ಪಡಿಸಿ ಕಸ್ಟಡಿಗೆ ಪಡೆದಿತ್ತು. ಮಾರ್ಚ್ 6 ರಂದು ದೆಹಲಿ ರೋಸ್ ಅವೆನ್ಯೂ ಕೋರ್ಟ್ ಮಾರ್ಚ್ 20ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆಮ್ ಆದ್ಮಿಗೆ ಮತ್ತೆ ಮುಖಭಂಗ, ತಿಹಾರ್ ಜೈಲಿನ ಸ್ಪಷ್ಟನೆಯಿಂದ ಆಪ್ ಸುಳ್ಳು ಬಟಾ ಬಯಲು!

ಬಿಜೆಪಿ ವಿರುದ್ದ ಕಿಡಿ ಕಾರಿದ ಅರವಿಂದ್ ಕೇಜ್ರಿವಾಲ್ 
ಮನೀಶ್ ಸಿಸೋಡಿಯಾ ಹಾಗೂ ಆಪ್ ವಿರುದ್ಧ ಬಿಜೆಪಿ ಪ್ರತೀಕಾರದ ರಾಜಕಾರಣ ಮಾಡುತ್ತಿದೆ. ಮೊದಲು ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾರನ್ನು ಬಂಧಿಸಿತು. ಅವರಿಗೂ ಏನೂ ಸಿಗಲಿಲ್ಲ. ಯಾವುದೇ ಹಣ ಸಿಗಲಿಲ್ಲ. ನಾಳೆ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಇದೆ. ಕೋರ್ಟ್ ಜಾಮೀನು ನೀಡುವ ಸಾಧ್ಯತೆ ಇದೆ ಅನ್ನೋದನ್ನು ಅರಿತ ಬಿಜೆಪಿ, ಇದೀಗ ಇಡಿ ಅಧಿಕಾರಿಗಳನ್ನು ಬಿಟ್ಟು ಬಂಧಿಸಿದೆ. ಮನೀಶ್ ಸಿಸೋಡಿಯಾರನ್ನು ಜೈಲಿನಲ್ಲಿಡುವುಡು ಬಿಜೆಪಿ ಉದ್ದೇಶ. ಇದಕ್ಕಾಗಿ ಹಲವು ದಾರಿಗಳನ್ನು ಹುಡುಕುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Follow Us:
Download App:
  • android
  • ios