Asianet Suvarna News Asianet Suvarna News

Delhi Liquor Policy Case: ಮನೀಷ್‌ ಸಿಸೋಡಿಯಾ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ!

ದೆಹಲಿಯ ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಒಂದೆಡೆ ಅರವಿಂದ್‌ ಕೇಜ್ರಿವಾಲ್‌ ತನಗೆ ಕೋರ್ಟ್‌ ಕ್ಲಿನ್‌ ಚಿಟ್‌ ನೀಡಿದೆ ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ಮನೀಷ್‌ ಸಿಸೋಡಿಯಾಗೆ ನ್ಯಾಯಾಂಗ ಬಂಧನವನ್ನು ಕೋರ್ಟ್‌ ಮತ್ತೆ ವಿಸ್ತರಣೆ ಮಾಡಿದೆ.

Delhi Liquor Policy Case Manish Sisodias Judicial Custody Extended In ED Case Till May 23 san
Author
First Published May 8, 2023, 3:38 PM IST | Last Updated May 8, 2023, 3:38 PM IST

ನವದೆಹಲಿ (ಮೇ.8): ದೆಹಲಿಯ ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಸ್‌ ಸಿಸೋಡಿಯಾಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಮೇ 23 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಆರೋಪಿಯಾಗಿರುವ ಮನೀಶ್‌ ಸಿಸೋಡಿಯಾ ದೆಹಲಿಯಲ್ಲಿ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಈ ಹಗರಣ ನಡೆದಿತ್ತು ಎಂದು ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯಕ್ಕೆ ಶನಿವಾರ ಇಡಿ ಸಲ್ಲಿಸಿದ ಅರ್ಜಿಯ ಬಳಿಕ ಕೋರ್ಟ್‌ ಈ ತೀರ್ಪು ನೀಡಿದೆ.  ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ 622 ಕೋಟಿ ರೂಪಾಯಿಗಳ ಅಕ್ರಮ ಆದಾಯವನ್ನು ಸೃಷ್ಟಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.  ಈ ನಡುವೆ, ಎಎಪಿ ನಾಯಕ ಮತ್ತು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಲ್ಲಿಸಲಾದ ಪೂರಕ ಆರೋಪಪಟ್ಟಿಯನ್ನು ನ್ಯಾಯಾಲಯ ಪಟ್ಟಿಯ ಮಾಡಿದ್ದು, ಮೇ 10ರ ಒಳಗಾಗಿ ಇದನ್ನು ಪರಿಗಣಿಸುವಂತೆ ಕೇಳಿಕೊಂಡಿದೆ. ಮೇ 8 ರೊಳಗೆ ಪೂರಕ ಆರೋಪಪಟ್ಟಿಯ ಸಾಫ್ಟ್ ಕಾಪಿಯನ್ನು ಸಿಡಿ / ಡಿವಿಡಿ / ಪೆನ್ ಡ್ರೈವ್‌ನಲ್ಲಿ ಸಲ್ಲಿಸುವಂತೆ ನ್ಯಾಯಾಲಯವು ಇಡಿಗೆ ತಿಳಿಸಿದೆ. .

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ವಿರುದ್ಧ ಮೊದಲ ಬಾರಿಗೆ ಇಡಿ ಗುರುವಾರ 2,000 ಪುಟಗಳ ಆರೋಪಪಟ್ಟಿ ಸಲ್ಲಿಕೆ ಮಾಡಿದೆ.ಈ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಮಾರ್ಚ್ 9 ರಂದು ತಿಹಾರ್ ಜೈಲಿನಿಂದ ಇಡಿ ಬಂಧಿಸಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕನನ್ನು ಮೊದಲು ಸಿಬಿಐ ಬಂಧಿಸಿದ್ದು, ಪ್ರಕರಣದ ತನಿಖೆಯನ್ನೂ ನಡೆಸುತ್ತಿದೆ. ಇದು ದೆಹಲಿಯ ವಿಶೇಷ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯದ ಮುಂದೆ ಇಡಿ ಸಲ್ಲಿಸಿದ ನಾಲ್ಕನೇ ಪೂರಕ ಮತ್ತು ಒಟ್ಟಾರೆ ಐದನೇ ಚಾರ್ಜ್‌ಶೀಟ್ ಅಥವಾ ಪ್ರಾಸಿಕ್ಯೂಷನ್ ದೂರು ಎಂದು ಪಿಟಿಐ ವರದಿ ಮಾಡಿದೆ.

ದೆಹಲಿ ಲಿಕ್ಕರ್‌ ಕೇಸ್‌ ಚಾರ್ಜ್‌ಶೀಟ್‌ನಲ್ಲಿ ಪರಿಣಿತಿ ಚೋಪ್ರಾ ಗೆಳೆಯನ ಹೆಸರು!

ಈ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ‘ಪ್ರಮುಖ ಸಂಚುಕೋರ’ ಎಂದು ಇಡಿ ಹೇಳಿದೆ. ಹಿಂದಿನ ಚಾರ್ಜ್‌ಶೀಟ್‌ಗಳಲ್ಲಿ, ಮದ್ಯ ನೀತಿ ಹಗರಣವು ಎಎಪಿಯ ಕೆಲವು ದೊಡ್ಡ ರಾಜಕೀಯ ನಾಯಕರು ಮತ್ತು ಬಿಆರ್‌ಎಸ್ ನಾಯಕಿ ಕೆ.ಕವಿತಾ, ವೈಎಸ್‌ಆರ್ ಕಾಂಗ್ರೆಸ್ ಸಂಸದ ಮಾಗುಂಟ ಅವರನ್ನೊಳಗೊಂಡ 'ಸೌತ್ ಗ್ರೂಪ್' ನಡೆಸಿದ "ಪಿತೂರಿ" ಎಂದು ಆರೋಪಿಸಿತ್ತು. ಶ್ರೀನಿವಾಸುಲು ರೆಡ್ಡಿ ಮತ್ತು ಇತರರು ತಮ್ಮ ಒಳಗೊಳ್ಳುವಿಕೆಯನ್ನು ಮರೆಮಾಚಲು ಪ್ರಾಕ್ಸಿಗಳು ಮತ್ತು ಡಮ್ಮಿಗಳನ್ನು ಬಳಸಿದ್ದರು ಎಂದು ಹೇಳಲಾಗಿದೆ. ಸಿಸೋಡಿಯಾ ತಮ್ಮ ಸೆಲ್‌ಫೋನ್‌ಗಳನ್ನು ಪುಡಿ ಮಾಡಿದ್ದಲ್ಲದೆ,, ಸಿಮ್‌ಗಳನ್ನು ಅನೇಕ ಬಾರಿ ಬದಲಾಯಿಸುವುದು ಸೇರಿದಂತೆ ಇನ್ನೂ ಹಲವು ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪವೂ ಇದೆ.

ದಿಲ್ಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕವಿತಾಗೆ ಇಡಿ ಶಾಕ್‌; ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ

Latest Videos
Follow Us:
Download App:
  • android
  • ios