ಹೆಚ್ಚಿದ ಕೊರೋನಾ ಆರ್ಭಟ | ಆರೋಗ್ಯ ಸಚಿವರ ತಂದೆಯೇ ಸೋಂಕಿಗೆ ಬಲಿ

ದೆಹಲಿ(ಮೇ.02): ಕೊರೋನವೈರಸ್ ಕಾರಣ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ತಂದೆ ನಿಧನ ಹೊಂದಿದ್ದಾರೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಸತ್ಯೇಂದರ್ ಸ್ವತಃ ದೆಹಲಿ ಜನರಿಗಾಗಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ದೇವರು ಅವರ ಆತ್ಮವನ್ನು ಆಶೀರ್ವದಿಸಲಿ. ಅವರ ಕುಟುಂಬದ ಜೊತೆ ನನ್ನ ಸಂತಾಪವಿದೆ ಎಂದಿದ್ದಾರೆ.

8 ದಿನದ ಮಗುವಿಗೆ ಕೊರೋನಾ ಪಾಸಿಟಿವ್: 15 ದಿನದಲ್ಲೇ ಗುಣಮುಖ

"

ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದರು ಮತ್ತು ಈ ಕಠಿಣ ಸಮಯದಲ್ಲಿ ಇದು ನಮ್ಮೆಲ್ಲರಿಗೂ ಬಹಳ ದುಃಖದ ಸುದ್ದಿ ಎಂದಿದ್ದಾರೆ.

Scroll to load tweet…

ದೆಹಲಿಯಲ್ಲಿ ನನ್ನ ಆಪ್ತ ಸ್ನೇಹಿತ ಮತ್ತು ಸಹೋದ್ಯೋಗಿ ಸತ್ಯೇಂದರ್ ಜೈನ್ ತನ್ನ ತಂದೆಯನ್ನು ಕಳೆದುಕೊಂಡಿದ್ದಾರೆ. ಈ ಕಠಿಣ ಸಮಯದಲ್ಲಿ ನಮ್ಮೆಲ್ಲರಿಗೂ ಇದು ತುಂಬಾ ದುಃಖದ ಸುದ್ದಿ. ಅವರ ಆತ್ಮಕೆ ಶಾಂತಿ ಸಿಗಲಿ. ಓಂ ಶಾಂತಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

Scroll to load tweet…

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona