ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿದೆ. ಮಧ್ಯಮ ವರ್ಗದ ಬೆಂಬಲದಿಂದ ಗೆಲುವು ಸಾಧಿಸಿದ ಬಿಜೆಪಿ, ಆಮ್ ಆದ್ಮಿ ಪಕ್ಷವನ್ನು ಹಿಂದಿಕ್ಕಿದೆ. ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆಯನ್ನು 12 ಲಕ್ಷದವರೆಗೆ ಏರಿಸಿದ್ದು ಬಿಜೆಪಿಗೆ ಲಾಭ ತಂದುಕೊಟ್ಟಿದೆ.
ನವದೆಹಲಿ (ಫೆ.8): ದೆಹಲಿ ಚುನಾವಣಾ ಕದನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ನಡುವಿನ ಫೈಟ್ ಜೋರಾಗಿತ್ತು. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರದಲ್ಲಿದ್ದ ವೇಳೆ ಹಂತ ಹಂತದಲ್ಲೂ ಅರವಿಂದ್ ಕೇಜ್ರಿವಾಲ್ ಬಿಜೆಪಿಯನ್ನು ಟೀಕೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಇನ್ನೊಂದು ಜನ್ಮ ಎತ್ತಿ ಬರಬೇಕು ಎಂದು ಸಾರ್ವಜನಿಕ ಭಾಷಣದಲ್ಲಿ ಕೊನೆಗೆ ವಿಧಾನಸಭೆಯ ಒಳಗೂ ಅರವಿಂದ್ ಕೇಜ್ರಿವಾಲ್ ಇದನ್ನೇ ಹೇಳಿದ್ದರು. 2050ರವರೆಗೂ ದೆಹಲಿಯಲ್ಲಿ ನೀವು ಅಧಿಕಾರಕ್ಕೆ ಬರೋದನ್ನು ಮರೆತು ಬಿಡಿ ಎಂದು ಹೇಳಿದ್ದರು. ಈಗ ಅವೆಲ್ಲಕ್ಕೂ ಉತ್ತರ ಎನ್ನುವಂತೆ ಬಿಜೆಪಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
Delhi Election 2025 Results Live : ಬಿಜೆಪಿಗೆ 45 ಆಪ್‌ಗೆ 25 ಕ್ಷೇತ್ರಗಳಲ್ಲಿ ಮುನ್ನಡೆ
ಮಧ್ಯಮ ವರ್ಗದಿಂದಲೇ ಗೆದ್ದ ಬಿಜೆಪಿ: ಬಿಜೆಪಿ ಈ ಚುನಾವಣೆಯಲ್ಲಿ ಗೆದ್ದಿದ್ದು ಮಧ್ಯಮವರ್ಗದಿಂದ.1998ರ ಅಕ್ಟೋಬರ್‌ನಲ್ಲಿ ಸುಷ್ಮಾ ಸ್ವರಾಜ್ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಆರ್ಥಿಕ ಹಿಂಜರಿತ ಹಾಗೂ ಏರುತ್ತಿರುವ ಈರುಳ್ಳಿ ಬೆಲೆಗೆ ಸುಷ್ಮಾ ಸ್ವರಾಜ್ ಅಧಿಕಾರ ಕಳೆದುಕೊಂಡಿದ್ದರು. ಇದಾದ 27 ವರ್ಷಗಳ ಬಳಿಕ ಬಿಜೆಪಿ ಮತ್ತೊಮ್ಮೆ ಮಧ್ಯಮ ವರ್ಗದ ಹಿತ ಕಾಯುವ ಮೂಲಕವೇ ಅಧಿಕಾರಕ್ಕೆ ಏರುವಲ್ಲಿ ಯಶ ಕಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಪ್ರಚಾರಗಳು ಹಾಗೂ ಗ್ಯಾರಂಟಿ ಘೋಷಣೆಯ ನಡುವೆಯೂ, ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆಯನ್ನು 12 ಲಕ್ಷದವರೆಗೆ ಏರಿಸಿದ್ದು ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಲಾಭ ತಂದುಕೊಟ್ಟಿದೆ.
ಪ್ರಸ್ತುತ ಟ್ರೆಂಡ್ ಪ್ರಕಾರ ಬಿಜೆಪಿ 70 ವಿಧಾನಸಭೆಯ ದೆಹಲಿ ಚುನಾವಣೆಯಲ್ಲಿ 42 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದ್ದರೆ, ಆಮ್ ಆದ್ಮಿ ಪಾರ್ಟಿ 28 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಶೂನ್ಯ ಸುತ್ತಿದೆ. ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ 7 ಸುತ್ತುಗಳ ಮತ ಎಣಿಕೆ ಅಂತ್ಯಕ್ಮೆ 238 ಮತಗಳ ಹಿನ್ನಡೆಯಲ್ಲಿದ್ದಾರೆ. ಬಿಜೆಪಿಯ ಪರ್ವೇಶ್ ಸಿಂಗ್ ಇಲ್ಲಿ ಮುನ್ನಡೆಯಲ್ಲಿದ್ದಾರೆ.
