ನವದೆಹಲಿ(ಜೂ.17): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಲಾರಂಭಿಸಿದೆ. ಈ ನಡುವೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಶಾಸಕಿ ಅತಿಶಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.

ಹೌದು ದೆಹಲಿಯ ಉಪ ಮುಖ್ಯಮಂತ್ರ ಹಾಗೂ ಪಟ್‌ಪಡ್ಜಂಗ್‌ ವಿಧಾನಸಭಾ ಕ್ಷೇತ್ರದ ಆಪ್‌ನ ಶಾಸಕ ಮನೀಶ್ ಸಿಸೋಡಿಯಾಗೆ ಕೊರೋನಾ ಇರುವುದು ದೃಢವಾಗಿದೆ. ಅವರಲ್ಲಿ ಕೊರೋನಾದ ಲಘು ಲಕಗ್ಷಣಗಳು ಕಂಡು ಬಂದಿವೆ.

ದಿಲ್ಲಿ ಆರೋಗ್ಯ ಸಚಿವಗೆ ಜ್ವರ: ಆಸ್ಪತ್ರೆಗೆ ದಾಖಲು, ಕೊರೋನಾ ವೈರಸ್‌ ಇಲ್ಲ!

ಇನ್ನು ಇತ್ತ ಕಾಲ್‌ಕಾಜಿ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಶಾಸಕಿ ಹಾಗೂ ಪಕ್ಷದ ರಾಷ್ಟ್ರೀಯ ವಕ್ತಾರೆ ಅತಿಶಿ ಮಾರ್ಲೆನಾಗೂ ಮಾರಕ ಕೊರೋನಾ ಇರುವುದು ದೃಢವಾಗಿದೆ. 

ಇನ್ನು ಕೊರೋನಾ ವರದಿಯಲ್ಲಿ ಸೋಂಕಿರುವುದು ದೃಢಪಟ್ಟ ಬೆನ್ನಲ್ಲೇ ಅತಿಶಿ ಎಲ್ಲರಿಂದಲೂ ಪ್ರತ್ಯೇಕವಾಗಿದ್ದಾರೆ. ಮಂಗಳವಾರ ಅವರಲ್ಲಿ ಜ್ವರ, ಕೆಮ್ಮಿನ ಜೊತೆ ಕೊರೋನಾದ ಕೆಲ ಲಕ್ಷಣಗಳು ಗೋಚರಿಸಿದ್ದವು. ಹೀಗಾಗಿ ಅವರು ಕೂಡಲೇ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಇಂದು, ಬುಧವಾರ ಈ ವರದಿ ಬಂದಿದ್ದು ಕೊರೋನಾ ಇರುವುದು ದೃಢವಾಗಿದೆ.