Asianet Suvarna News Asianet Suvarna News

3 ವಾರದ ನರಕ, ಕೊರೋನಾಕ್ಕೆ ಬಲಿಯಾದ ಡಾಕ್ಟರ್, ಇದಕ್ಕೆಲ್ಲ ಯಾರು ಹೊಣೆ?

ಕೊರೋನಾ ವಿರುದ್ಧ ಹೋರಾಟಕ್ಕೆ ಶರಣಾದ ವೈದ್ಯ/ ಕೊರೋನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಡಾ. ಜಾವೇದ್ ಅಲಿ/ ಆಡಳಿತ ಮತ್ತು ಸರ್ಕಾರದಿಂದ ಯಾವ ಸಹಾಯ ಸಿಗಲಿಲ್ಲ ಎಂದು ಆರೋಪ ಮಾಡಿದ ಪತ್ನಿ

Delhi Doctor Who Was On COVID-19 Duty Since March Dies After 3 Week Battle With Coronavirus
Author
Bengaluru, First Published Jul 23, 2020, 4:49 PM IST

ನವದೆಹಲಿ(ಜು.  23)  ಕೊರೋನಾ ವಿರುದ್ಧದ ಹೋರಾಟದಲ್ಲಿ ಈ ವೈದ್ಯರು ಕೊನೆಗೂ ಶರಣಾಗಿದ್ದಾರೆ. ಸರ್ಕಾರ ಮತ್ತು ಆಡಳಿತದಿಂದ ಯಾವುದೇ ಸಹಾಯ ಸಿಗದೆ ಕೊರೋನಾ ರೋಗಿಗಳ ಆರೈಕೆ ಮಾಡಿದ್ದ ವೈದ್ಯ ದೂರವಾಗಿದ್ದಾರೆ.

ದೆಹಲಿ ಸರ್ಕಾರದ ನ್ಯಾಶನಲ್ ಹೆಲ್ತ್ ಮಿಶನ್ ನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲಿ ಅವರಿಗೆ ಮೂರು ವಾರದ ಹಿಂದೆ ಕೊರೋನಾ ದೃಢವಾಗಿತ್ತು.

ದಕ್ಷಿಣ ದೆಹಲಿಯ ಛತ್ತಾಪುರ್ ಕ್ವಾರಂಟೈನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು.  ರಾಷ್ಟ್ರ ರಾಜಧಾನಿ ಇದೀಗ ಒಬ್ಬ ಕೊರೋನಾ ವಾರಿಯರ್ ನನ್ನು ಕಳೆದುಕೊಂಡಿದೆ.

ಎರಡು ಕಾರನ್ನು ಕೊರೋನಾ  ವಾರಿಯರ್ಸ್ ಗೆ ಕೊಟ್ಟ ಮುಖಂಡ

ಜೂನ್ 24  ರಂದು ಅಲಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು.  ಕಳೆದ ಹತ್ತು ದಿನಗಳಿಂದ ವೈದ್ಯರು ನರಕಯಾತನೆ ಅನುಭವಿಸಿ ಈಗ ಕೊನೆಯಾಗಿದ್ದಾರೆ. ಪತ್ನಿ ಮತ್ತು 6 ಹಾಗೂ 12  ವರ್ಷದ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಡಾ. ಅಲಿ ದೆಹಲಿ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಶನ್ ನ ವೈದ್ಯರಾಗಿದ್ದರು, ಸದ್ಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ಸೋಮವಾರ ಕೊನೆ ಉಸಿರು ಎಳೆದಿದ್ದಾರೆ. 

ಪತಿ ರೋಗಿಗಳ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಮಾರ್ಚ್ ನಿಂದ ಒಂದು ರಜೆ ಪಡೆದಿರಲಿಲ್ಲ. ರಂಜಾನ್ ಹಬ್ಬದ ದಿನವೂ ಆಸ್ಪತ್ರೆಯಲ್ಲಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ 10 ದಿನ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಕೊನೆಯ ಬಾರಿ ನನಗೆ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರ ಮುಖ ನೋಡಲು ಸಹ ಅವಕಾಶ  ಸಹ ಸಿಗಲಿಲ್ಲ ಎಂದು ವೈದ್ಯರ ಪತ್ನಿ ಹೀನಾ ನೋವಿನಿಂದ ನುಡಿಯುತ್ತಾರೆ.

Follow Us:
Download App:
  • android
  • ios