ಜೈಲಿಂದಲೇ ಕೇಜ್ರಿವಾಲ್‌ 6 ಚುನಾವಣಾ ಗ್ಯಾರಂಟಿ ಘೋಷಣೆ

ದೆಹಲಿ ಲಿಕ್ಕರ್‌ ಹಗರಣದಲ್ಲಿ ಜೈಲುಪಾಲಾದ ಬಳಿಕವೂ ಅಲ್ಲಿಂದಲೇ ಸರ್ಕಾರಿ ಆದೇಶ ಹೊರಡಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಇದೀಗ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ 6 ಗ್ಯಾರಂಟಿಗಳನ್ನೂ ಜೈಲಿಂದಲೇ ಘೋಷಿಸಿದ್ದಾರೆ.

Delhi CM Arvind Kejriwal announces 6 election guarantees from jail akb

ನವದೆಹಲಿ: ದೆಹಲಿ ಲಿಕ್ಕರ್‌ ಹಗರಣದಲ್ಲಿ ಜೈಲುಪಾಲಾದ ಬಳಿಕವೂ ಅಲ್ಲಿಂದಲೇ ಸರ್ಕಾರಿ ಆದೇಶ ಹೊರಡಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಇದೀಗ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ 6 ಗ್ಯಾರಂಟಿಗಳನ್ನೂ ಜೈಲಿಂದಲೇ ಘೋಷಿಸಿದ್ದಾರೆ.

ಕೇಜ್ರಿವಾಲ್‌ ಅವರು ಈ ಸಂಬಂಧ ನೀಡಿರುವ ಭರವಸೆಗಳನ್ನು ಅವರ ಪತ್ನಿ ಸುನಿತಾ, ಭಾನುವಾರ ಇಲ್ಲಿ ಆಯೋಜನೆಗೊಂಡಿದ್ದ ಇಂಡಿಯಾ ಕೂಟದ ಸಮಾವೇಶದಲ್ಲಿ ಘೋಷಿಸಿದರು. ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ. ದೇಶದ ಎಲ್ಲರಿಗೂ ಉಚಿತ ಆರೋಗ್ಯ ಸೇವೆ- ಇವು ಕೇಜ್ರಿವಾಲ್‌ ಅವರ ಕೆಲವು ಪ್ರಮುಖ ಉದ್ದೇಶಗಳಾಗಿವೆ ಎಂದು ಸುನಿತಾ ಹೇಳಿದರು ಹಾಗೂ ಕೇಜ್ರಿವಾಲ್‌ ಜೈಲಿಂದಲೇ ನೀಡಿದ ಸಂದೇಶ ಓದಿದರು.

ಕಾಂಗ್ರೆಸ್‌ಗೆ ಇನ್ನಷ್ಟು ಸಂಕಷ್ಟ, 3567 ಕೋಟಿಗೆ ಏರಿದ ಆದಾಯ ತೆರಿಗೆ ಡಿಮಾಂಡ್‌ ನೋಟಿಸ್‌!

‘ನನ್ನ ಪ್ರೀತಿಯ ಭಾರತೀಯರೇ, ನೀವೆಲ್ಲರೂ ದಯವಿಟ್ಟು ನಿಮ್ಮ ಈ ಮಗನ ಶುಭಾಶಯಗಳನ್ನು ಸ್ವೀಕರಿಸಿ, ನಾನು ಮತ ಕೇಳುತ್ತಿಲ್ಲ, ಚುನಾವಣೆಯಲ್ಲಿ ಗೆಲ್ಲಲು ಯಾರನ್ನೂ ಸೋಲಿಸುವ ಬಗ್ಗೆ ಮಾತನಾಡುವುದಿಲ್ಲ. ನಾನು ಭಾರತವನ್ನು ನವ ಭಾರತ ಮಾಡುವ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಜೈಲಿನಲ್ಲಿದ್ದೇನೆ, ಇಲ್ಲಿ ನನಗೆ ಯೋಚಿಸಲು ಸಾಕಷ್ಟು ಸಮಯ ಸಿಗುತ್ತದೆ. ಭಾರತಮಾತೆಯ ಬಗ್ಗೆ ಯೋಚಿಸುತ್ತೇನೆ, ಜನರಿಗೆ ಉತ್ತಮ ಶಿಕ್ಷಣ ಸಿಗದಿದ್ದಾಗ, ಸರಿಯಾದ ಚಿಕಿತ್ಸೆ ಇಲ್ಲದಿದ್ದಾಗ, ವಿದ್ಯುತ್ ಕಡಿತ ಆದಾಗ, ರಸ್ತೆಗಳು ಹಾಳಾದಾಗ ಭಾರತಮಾತೆ ನೋವಿನಲ್ಲಿರುತ್ತಾಳೆ’ ಎಂದು ಕೇಜ್ರಿವಾಲ್‌ ತಮ್ಮ ಸಂದೇಶದಲ್ಲಿ ಹೇಳಿ 6 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

ಪಂಜಾಬ್‌ನಲ್ಲಿ ಏಕಾಂಗಿಯಾಗಿರೋ ಬಿಜೆಪಿಗೆ ಕಾಂಗ್ರೆಸ್ ಮತ್ತು ಆಪ್ ಸಂಸದರು ಸೇರಿದ್ದೇಕೆ?


6 ಗ್ಯಾರಂಟಿಗಳು

1. ಇಡೀ ದೇಶದಾದ್ಯಂತ 24 ಗಂಟೆ ವಿದ್ಯುತ್

2. ದೇಶದಾದ್ಯಂತ ಬಡವರಿಗೆ ಉಚಿತ ವಿದ್ಯುತ್

3. ಪ್ರತಿ ಗ್ರಾಮ, ನೆರೆಹೊರೆಯಲ್ಲಿ ಅತ್ಯುತ್ತಮ ಸರ್ಕಾರಿ ಶಾಲೆ

4. ಪ್ರತಿ ಗ್ರಾಮ, ನೆರೆಹೊರೆಯಲ್ಲಿ ಮೊಹಲ್ಲಾ ಕ್ಲಿನಿಕ್‌ ಸ್ಥಾಪನೆ

5. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಳೆಗಳಿಗೆ ನ್ಯಾಯಯುತ ಬೆಲೆ

6. ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ.

Latest Videos
Follow Us:
Download App:
  • android
  • ios