ಕೇಂದ್ರ ಕುತಂತ್ರಕ್ಕೆ ಆಕ್ಸಿಜನ್ ಕೊರತೆ ಎಂದ ದೆಹಲಿ ; ಕೇಜ್ರಿವಾಲ್ ರಾಜಕೀಯಕ್ಕೆ ಜನರ ಆಕ್ರೋಶ!
ಕೊರೋನಾ ವೈರಸ್ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಬಳಿಕ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಕ್ಸಿಜನ್ ಕೊರತೆಗೆ ಕೇಂದ್ರ ಕಾರಣ ಎಂದು ಆರೋಪಿಸಿದ್ದಾರೆ. ದೆಹಲಿಗೆ ಆಕ್ಸಿಜನ್ ಪೂರೈಸಿ ಎಂದು ಟ್ವೀಟ್ ಮಾಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ
ನವದೆಹಲಿ(ಏ.18): ದೇಶದಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ದೆಹಲಿಯಲ್ಲಿ ಇಂದು 25,000 ಕೊರೋನಾ ಕೇಸ್ ಪತ್ತೆಯಾಗಿದೆ. ಕೊರೋನಾ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಕೊರೋನಾ ಆಕ್ಸಿಜನ್ ಅಭಾವ ಕಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಯವಿಟ್ಟು CBSE ಪರೀಕ್ಷೆ ರದ್ದು ಮಾಡಿ, ಕೇಂದ್ರಕ್ಕೆ ಕೇಜ್ರಿ ಮನವಿ.
ದೆಹಲಿ ತೀವ್ರ ಆಮ್ಲಜನಕ ಕೊರತೆಯನ್ನು ಎದುರಿಸುತ್ತಿದೆ. ದೆಹಲಿಯಲ್ಲಿ ಕೊರೋನಾ ಪ್ರಕರಣ ತ್ವರಿತಗತಿಯಲ್ಲಿ ಏರುತ್ತಿರುವುದರಿಂದ, ಸಾಮಾನ್ಯ ಪೂರೈಕೆಗಿಂತ ಹೆಚ್ಚಿನ ಆಕ್ಸಿಜನ್ ಪೂರೈಸಬೇಕು. ದೆಹಲಿಗೆ ಬರಬೇಕಿದ್ದ ಆಮ್ಮಜನಕ ಪೂರೈಕೆಯನ್ನು ಕಡಿಮೆ ಮಾಡಲಾಗಿದೆ. ಇಷ್ಟೇ ದೆಹಲಿ ಬರಬೇಕಿದ್ದ ಆಕ್ಸಿಜನ್ ಸಿಲಿಂಡರ್‌ನ್ನು ಇತರ ರಾಜ್ಯಕ್ಕೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೇಜ್ರಿವಾಲ್ ಆರೋಪಕ್ಕೆ ಜನಸಾಮಾನ್ಯರು ತಿರುಗೇಟು ನೀಡಿದ್ದಾರೆ. ಕೊರೋನಾ ಹೆಚ್ಚಳ ನಿಯಂತ್ರಣ ಮಾಡಲು ಸಾಧ್ಯವಾಗದೆ ಇದೀಗ ಕೇಂದ್ರವನ್ನು ದೂರುತ್ತಿರುವುದು ಎಷ್ಟು ಸರಿ ಎಂದಿದ್ದಾರೆ. ಕೇಂದ್ರದ ಹಣ, ಬೆಡ್, ಯೋಜನೆ ಬಳಸಿಕೊಳ್ಳುತ್ತೀರಿ. ದೊಡ್ಡ ಜಾಹೀರಾತು ನೀಡಿ ಕ್ರೆಡಿಟ್ ತೆಗೆದುಕೊಳ್ಳುತ್ತೀರಿ. ಇದು ಎಂತಾ ರಾಜಕೀಯ, ಉಚಿತ ವಿದ್ಯುತ್ ಹಾಗೂ ನೀರಿಗಾಗಿ ಎಂತಾ ಕೀಳು ನಾಯಕನನ್ನು ಆರಿಸಿದ್ದೇವೆ ಎಂದು ಟ್ವಿಟರ್‌ನಲ್ಲಿ ದೆಹಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.