Asianet Suvarna News Asianet Suvarna News

Liquor Kick in Parliament: : ಸಂಸತ್‌ನಲ್ಲಿ ಗುಂಡಿನ ಗಮ್ಮತ್ತು... ಮದ್ಯದ ಬಾಟಲ್‌ ಅಲ್ಲಾಡಿಸಿದ ಬಿಜೆಪಿ ಎಂಪಿ

  • ಸಂಸತ್‌ಗೆ ಬ್ರಾಂಡಿ ಪ್ಯಾಕೇಟ್‌ನೊಂದಿಗೆ ಬಂದ ಬಿಜೆಪಿ ಸಂಸದ
  • ದೆಹಲಿಯಲ್ಲಿ ಎಎಪಿ ಸರ್ಕಾರದ ಮದ್ಯ ಉತ್ತೇಜನಕ್ಕೆ ಆಕ್ರೋಶ
  • ಸಂಸತ್‌ ಚಳಿಗಾಲದ ಅಧಿವೇಶನಕ್ಕೆ ಕಿಕ್ಕೇರಿಸಿದ ಮದ್ಯ
Delhi BJP MP brandishes liquor pack in Parliament akb
Author
Bangalore, First Published Dec 7, 2021, 11:33 AM IST

ನವದೆಹಲಿ(ಡಿ.7):ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಸಂಸತ್‌ ಅಧಿವೇಶನಕ್ಕೆ ಬಿಜೆಪಿ ಸಂಸದರೊಬ್ಬರು ಮದ್ಯದ ಬಾಟಲ್‌ ಹಿಡಿದು ಬಂದು ಅದನ್ನು ಸಂಸತ್‌ನಲ್ಲಿ ಅಲ್ಲಾಡಿಸಿದ ಘಟನೆ ನಡೆದಿದೆ. ಸೋಮವಾರ ನಡೆದ ಅಧಿವೇಶನದಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಸಂಸದ ಪರ್ವೇಶ್‌ ವರ್ಮಾ(Parvesh Verma) ಅವರೇ ಮದ್ಯದ ಬಾಟಲ್‌  ತೆಗೆದುಕೊಂಡು ಬಂದ ಸಂಸದ. ಇವರು ದೆಹಲಿ ಸರ್ಕಾರ(Government of Delhi)ದ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸುವ ಸಲುವಾಗಿ ಹೀಗೆ ಮಾಡಿದ್ದಾರೆ. ದೆಹಲಿಯಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌(Arvind Kejriwal)ಸರ್ಕಾರ  ಮದ್ಯವನ್ನು ಉತ್ತೇಜಿಸುತ್ತಿದ್ದಾರೆ. ಜನರಿಗೆ ಶುದ್ಧವಾದ ತಾಜಾ ನೀರು ಕೊಡುವ ಭರವಸೆ ನೀಡಿದ್ದ ಸಿಎಂ  ಕೇಜ್ರಿವಾಲ್‌, ಅದರ ಬದಲು  ಸಾರಾಯಿ ನೀಡುತ್ತಿದ್ದಾರೆ ಎಂದು ಪರ್ವೇಶ್‌ ವರ್ಮಾ ಆರೋಪಿಸಿದ್ದಾರೆ. 

ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿದ ಪರ್ವೇಶ್ ಶರ್ಮಾ, ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಹೆಚ್ಚುತ್ತಿರುವ ಈ ಸಮಯದಲ್ಲಿ ಜನ ಆಮ್ಲಜನಕ ಸಿಲಿಂಡರ್‌ಗಳನ್ನು ಪಡೆಯಲು ಪರದಾಡುತ್ತಿರುವಾಗ ದೆಹಲಿ ಸರ್ಕಾರವು ಮದ್ಯಕ್ಕೆ ಸಂಬಂಧಿಸಿದ ಹೊಸ ಅಬಕಾರಿ ನೀತಿಯನ್ನು ರಚಿಸುವಲ್ಲಿ ನಿರತವಾಗಿದೆ ಎಂದು ಆರೋಪಿಸಿದರು. 

MLC election: ಡಿ.8 ರಿಂದ ರಾಜ್ಯದಲ್ಲಿ ಬಾರ್ ಬಂದ್, ಮದ್ಯ ಮಾರಾಟಗಾರರ ಖಂಡನೆ

ಕೋವಿಡ್‌ 19ನಿಂದಾಗಿ ಸುಮಾರು 25,000 ಜನ ಸಾವಿಗೀಡಾಗಿದ್ದಾರೆ. ಆದರೆ ದೆಹಲಿ ಸರ್ಕಾರ ಹೊಸ ಅಬಕಾರಿ ನೀತಿ(Excise policy) ಜಾರಿಗೆ ತರುವಲ್ಲಿ ಬ್ಯುಸಿಯಾಗಿದೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ಮದ್ಯ ಸೇವನೆಯನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಸಂಸತ್‌ನಲ್ಲಿ ಮದ್ಯದ ಪ್ಯಾಕ್‌ನ್ನು ಅಲುಗಿಸುತ್ತಾ ಮಾತನಾಡಿದ ಪರ್ವೇಶ್‌, ದೆಹಲಿಯ ಎಎಪಿ ಸರ್ಕಾರದ ಈ ಹೊಸ ಅಬಕಾರಿ ನೀತಿಯಿಂದಾಗಿ ಮದ್ಯ ಸೇವನೆಗೆ ವಯಸ್ಸಿನ ಮಿತಿಯನ್ನು ಮತ್ತಷ್ಟು ಕಡಿಮೆ ಮಾಡಲಾಗಿದೆ. ವೈನ್‌ ಶಾಪ್‌ಗಳು ಬೆಳಗ್ಗಿನ ಜಾವ 3ಗಂಟೆಯವರೆಗೆ ತೆರೆದಿರಲಿದೆ. ಅಲ್ಲದೇ ರಾತ್ರಿ 12 ಗಂಟೆಯಿಂದ ನಸುಕಿನ ಜಾವ 3ಗಂಟೆಯ ಅವಧಿಯಲ್ಲಿ ಕುಡಿಯುವ ಮಹಿಳೆಯರಿಗೆ ಬಾರ್‌ಗಳಲ್ಲಿ ಡಿಸ್ಕೌಂಟ್‌ ನೀಡಲಾಗುತ್ತದೆ. ಅಲ್ಲದೇ ಮದ್ಯಪಾನ ಮಾಡಲು ವಯಸ್ಸಿನ ಮಿತಿಯನ್ನು 25ರಿಂದ 21ಕ್ಕೆ ಇಳಿಸಲಾಗಿದೆ ಎಂದು ಪರ್ವೇಶ್‌ ಆರೋಪಿಸಿದರು. 

ಮುಂದಿನ ವರ್ಷ ಪಂಜಾಬ್, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾವಣೆ ಇದ್ದು, ಈ ಚುನಾವಣೆಗೆ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಹಣದ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಮದ್ಯಪಾನಕ್ಕೆ ಉತ್ತೇಜನ ನೀಡುವ ಮೂಲಕ ಎಷ್ಟು ಸಾಧ್ಯವೋ ಅಷ್ಟು ಅಬಕಾರಿ ತೆರಿಗೆಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಪರ್ವೇಶ್‌ ದೂರಿದ್ದಾರೆ. ಇತ್ತೀಚೆಗೆ ಪಂಜಾಬ್‌ನಲ್ಲಿ ಎಎಪಿ ಪರ ಪ್ರಚಾರಕ್ಕೆ ತೆರಳಿದ್ದ ಅರವಿಂದ್ ಕೇಜ್ರಿವಾಲ್‌, ಅಲ್ಲಿ ಮದ್ಯಪಾನದ ಸಂಪ್ರದಾಯವನ್ನು ಕೊನೆಗೊಳಿಸುವುದಾಗಿ ಹೇಳಿದ್ದರು. ಆದರೆ ಇಲ್ಲಿ(ದೆಹಲಿಯಲ್ಲಿ) ಮದ್ಯಪಾನವನ್ನು ಉತ್ತೇಜಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಆರೋಪಿಸಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿದ್ದ ಶೇಕಡಾ 40 ರಷ್ಟು ಖಾಸಗಿ ಮದ್ಯದಂಗಡಿಗಳನ್ನು  ಆಕ್ಟೋಬರ್‌ 1ರಿಂದ 46 ದಿನಗಳವರೆಗೆ ಮುಚ್ಚಲಾಗಿತ್ತು. 

Covid 19 Vaccine: ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ : ಲಸಿಕೆ ಪಡೆದವರಿಗೆ 10% ಡಿಸ್ಕೌಂಟ್!‌

ಇತ್ತ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಡಿಸೆಂಬರ್ 8ರ ಸಂಜೆ 4 ಗಂಟೆಯಿಂದ  ಡಿಸೆಂಬರ್ 10 ರ ಮಧ್ಯರಾತ್ರಿವರೆಗೆ  3 ದಿನಗಳ ಕಾಲ ವೈನ್ ಸ್ಟೋರ್ (wine shop)ಮತ್ತು ಬಾರ್‌ (Liquor shops) ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಗಳು (Chief Electoral Officer)ಈ ಆದೇಶ  ಹೊರಡಿಸಿದ್ದಾರೆ. ಆದರೆ  ಮೂರು ದಿನಗಳ ಕಾಲ ಮದ್ಯ ಮಾರಾಟ ಮಾಡಲು ನಿಷೇಧ ಹೇರಿರುವುದನ್ನು ರಾಜ್ಯಾದ್ಯಂತ ಮದ್ಯ ಮಾರಾಟಗಾರರು (Wine merchants)ಖಂಡಿಸಿದ್ದು, ಇದರಿಂದ  ಭಾರೀ ನಷ್ಟವಾಗಲಿದೆ ಎಂದಿದ್ದಾರೆ. 

 

ಸಾರ್ವತ್ರಿಕ ಚುನಾವಣೆಗಿಂತ ಭಿನ್ನವಾಗಿ ಮತದಾರರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಬೇಡಿ ಎಂದು ಕೋರಿ ಕರ್ನಾಟಕ ವೈನ್ ಮಾರಾಟಗಾರರ ಒಕ್ಕೂಟವು (Federation of Wine Merchants and Association) ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದೆ.
"ಈ ಚುನಾವಣೆಯಲ್ಲಿ  ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 99,062 ಮಾತ್ರ. ಮತ್ತು ಎಲ್ಲಾ ಮತದಾರರು ವಿವಿಧ ಸ್ತರದ ಜನರನ್ನು ಪ್ರತಿನಿಧಿಸುವ ವಿದ್ಯಾವಂತ ಮತದಾರರಾಗಿದ್ದಾರೆ" ಎಂದು ಫೆಡರೇಶನ್ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಅಂದ ಹಾಗೆ  ಡಿಸೆಂಬರ್ 10 ರಂದು ರಾಜ್ಯದಲ್ಲಿ ವಿಧಾನ ಪರಿಷತ್‌ನ  (Legislative Council )25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 

Follow Us:
Download App:
  • android
  • ios