Asianet Suvarna News

ಬೆಂಗಳೂರು-ದಿಲ್ಲಿ ವಿಮಾನ ದರ ದುಪ್ಪಟ್ಟು?

ಬೆಂಗಳೂರು-ದಿಲ್ಲಿ ವಿಮಾನ ದರ ದುಪ್ಪಟ್ಟು?| 5700 ರು. ಇರುವ ದರ 11,200 ರು.ಗೆ ಹೆಚ್ಚಳ ಸಾಧ್ಯತೆ| ಲಾಕ್‌ಡೌನ್‌ ಅಂತ್ಯದ ಬಳಿಕ ಏರಿಕೆ|  ಅಂತರ ಕಾಯುವ ಕಾರಣ ಇಡೀ ವಿಮಾನ ಭರ್ತಿ ಇಲ್ಲ| ಹೀಗಾಗಿ ಖಾಲಿ ಉಳಿವ ಸೀಟಿನ ದರದ ಹೊರೆ ಪ್ರಯಾಣಿಕರಿಗೆ| ಅಧ್ಯಯನ ವರದಿಯಲ್ಲಿ ವಿಶ್ಲೇಷಣೆ

Delhi Bengaluru Flight Charge May Become Double Says Study
Author
Bangalore, First Published May 5, 2020, 7:55 AM IST
  • Facebook
  • Twitter
  • Whatsapp

ನವದೆಹಲಿ(ಮೇ.05): ಒಮ್ಮೆ ಲಾಕ್‌ಡೌನ್‌ ಮುಕ್ತಾಯವಾಗಿ ವಿಮಾನ ಹಾರಾಟ ಆರಂಭವಾಯಿತೆಂದರೆ ವಿಮಾನ ಟಿಕೆಟ್‌ ದರ ದುಪ್ಪಟ್ಟು ಆಗುವ ಸಾಧ್ಯತೆ ಇದೆ. ಬೆಂಗಳೂರು-ದಿಲ್ಲಿ ವಿಮಾನ ಟಿಕೆಟ್‌ ದರ 5,700 ರು.ನಿಂದ 11,200 ರು.ಗೆ ಏರುವ ಸಂಭವವಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಇದಕ್ಕೆ ಅನೇಕ ಕಾರಣಗಳಿವೆ. ಕೊರೋನಾ ಬರದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪದ್ಧತಿ ವಿಮಾನಗಳಲ್ಲೂ ಜಾರಿಗೆ ಬರಲಿದೆ. ಅಂದರೆ 3 ಸೀಟುಗಳಿರುವ ಒಂದು ಆಸನದಲ್ಲಿ ಮಧ್ಯದ ಸೀಟನ್ನು ಖಾಲಿ ಬಿಡಬೇಕಾಗುತ್ತದೆ. ಅಲ್ಲದೆ, ವಿಮಾನ ಸಾಗುವಾಗ ಪ್ರಯಾಣಿಕರಿಗೆ ಹೆಚ್ಚೂ ಕಡಿಮೆ ಆದರೆ ಕ್ವಾರಂಟೈನ್‌ಗೆಂದು ಕೊನೆಯ 3 ಸಾಲು ಖಾಲಿ ಬಿಡಬೇಕು ಎಂದು ವಿಮಾನಯಾನ ಸಚಿವಾಲಯ ಪ್ರಸ್ತಾಪ ಇರಿಸಿದೆ. ಆಗ 180 ಸೀಟಿನ ವಿಮಾನದಲ್ಲಿ 108 ಮಂದಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಲಭಿಸಲಿದೆ. ಅಲ್ಲದೆ, ವಿಮಾನವನ್ನು ಸೋಂಕು ರಹಿತಗೊಳಿಸಲು ಸಾಕಷ್ಟುಶುದ್ಧೀಕರಣ ಕ್ರಮ ಜರುಗಿಸಬೇಕಾಗುತ್ತದೆ.

ರಾಜ್ಯದ ಪ್ರತಿ ವ್ಯಕ್ತಿಯ ಹೆಲ್ತ್‌ ರಿಜಿಸ್ಟರ್‌: ದೇಶದಲ್ಲೇ ಪ್ರಥಮ!

ಹೀಗಾದರೆ ವಿಮಾನಯಾನ ಕಂಪನಿಗಳು ಭಾರೀ ಖರ್ಚು ಮಾಡಬೇಕಾಗುತ್ತದೆ. ಈ ವೆಚ್ಚ ಹಾಗೂ ಖಾಲಿ ಸೀಟಿನ ವೆಚ್ಚವನ್ನು ಸರಿದೂಗಿಸಲು ವಿಮಾನ ಪ್ರಯಾಣ ದರವನ್ನು ದುಪ್ಪಟ್ಟು ಮಾಡಬೇಕಾಗುತ್ತದೆ. ಸುಮಾರು 5700 ರು. ಇರುವ ದಿಲ್ಲಿ-ಬೆಂಗಳೂರು ವಿಮಾನ ಟಿಕೆಟ್‌ ದರ 11,200 ರು.ಗೆ ಏರುವ ಸಾಧ್ಯತೆ ಇದೆ. 5000 ರು. ಇರುವ ಮುಂಬೈ-ದಿಲ್ಲಿ ವಿಮಾನ ಪ್ರಯಾಣ ದರ 9,700 ರು.ಗೆ ಏರುವ ಸಾಧ್ಯತೆ ಇದೆ ಎಂದು ಏಷ್ಯಾ ಪೆಸಿಫಿಕ್‌ ಏವಿಯೇಶನ್‌ ಇಂಡಿಯಾ ಸೆಂಟರ್‌ (ಸಿಎಪಿಎ) ಅಧ್ಯಯನ ವರದಿ ಅಂದಾಜು ಮಾಡಿದೆ.

Follow Us:
Download App:
  • android
  • ios