ದೆಹಲಿ ವಿಮಾನ ನಿಲ್ದಾಣದಲ್ಲಿ ದೇಶದ ಮೊದಲ ಏರ್ ಟ್ರೇನ್
ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಏರ್ ಟ್ರೈನ್ ಆರಂಭವಾಗಲಿದೆ. ಏನಿದು ಏರ್ ಟ್ರೈನ್ ಎಂಬುದರ ಮಾಹಿತಿ ಇಲ್ಲಿದೆ.
ನವದೆಹಲಿ: ದೇಶದ ಮೊದಲ ಏರ್ ಟ್ರೇನ್ (ಆಟೋಮೇಟೆಡ್ ಪೀಪಲ್ ಮೂವರ್- ಎಪಿಎಂ) ಸೇವೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ. ಏರ್‌ಟ್ರೇನ್ ಎಂಬುದು ಮೆಟ್ರೋ ಮಾದರಿಯ ಚಾಲಕ ರಹಿತ ರೈಲಾಗಿದೆ.
ಹಾಲಿ ವಿಮಾನ ನಿಲ್ದಾಣದಲ್ಲಿನ ಮೂರು ಟರ್ಮಿಗಳ ನಡುವೆ ಸಂಚಾರಕ್ಕೆ, ವಿಮಾನ ಇಳಿದ ಬಳಿಕ ಬೇರೆ ಪ್ರದೇಶಗಳಿಗೆ ತೆರಳುವ ಬಸ್ ಏರಲು ಅಥವಾ ಕ್ಯಾಬ್ ಆಗಮಿಸುವ ಸ್ಥಳಕ್ಕೆ ತೆರಳಲು ಪ್ರಯಾಣಿಕರು ಬಸ್ ಸೇವೆ ಬಳಸಬೇಕಿತ್ತು. ಇದು ಸಾಕಷ್ಟು ಸಮಯ ತಿನ್ನುವ ಕೆಲಸ.
ಹೀಗಾಗಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅವಕಾಶ ನೀಡಲು 2000 ಕೋಟಿ ರು.ವೆಚ್ಚದಲ್ಲಿ 7.7 ಕಿ.ಮೀ ಉದ್ದದ ಏರ್‌ಟ್ರೇನ್ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ. 2027ರಲ್ಲಿ ಈ ವ್ಯವಸ್ಥೆ ಆರಂಭದ ಬಳಿ ಹಾಲಿ ಬಳಕೆಯಲ್ಲಿರುವ ಬಸ್ ಸೇವೆ ಸ್ಥಗಿತಗೊಳಿಸಲಾಗುತ್ತದೆ.
ಆತ್ಮಹತ್ಯೆ ಯಂತ್ರದಲ್ಲಿ ಕುಳಿತು ಮೊದಲ ಸಾವು; ಫೋಟೋ ತೆಗೆಯಲು ಹೋದವರ ಬಂಧನ
ಏನಿದು ಏರ್ ಟ್ರೇನ್?:
ಇದು ಕೂಡಾ ಇತರೆ ಮೆಟ್ರೋ ರೈಲಿನಂತೆಯೇ ಇರುತ್ತದೆ. ಸೀಮಿತ ಪ್ರಮಾಣದ ಬೋಗಿ ಹೊಂದಿರುತ್ತದೆ. ಹಳಿಗಳ ಮೇಲೆ ಚಲಿಸುತ್ತದೆ. ಪೂರ್ವ ನಿರ್ಧರಿತ ಟ್ರ್ಯಾಕ್‌ಗಳ ಮೇಲೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಈ ಚಾಲಕ ರಹಿತ ರೈಲು ಸಂಚರಿಸುತ್ತದೆ. ಭೂಗತ ಅಥವಾ ಮೇಲುಸೇತುವೆ ಮೇಲೆ ಚಲಿಸುವ ಕಾರಣ ಸಂಚಾರಕ್ಕೆ ಯಾವುದೇ ಅಡ್ಡಿ ಇರದು. ತ್ವರಿತ ಸಂಚಾರ ಸಾಧ್ಯ. ಇವುಗಳನ್ನು ಬಳಸಿ ಬೇರೆ ಟರ್ಮಿನಲ್, ಪಾರ್ಕಿಂಗ್ ಸ್ಥಳ, ಕ್ಯಾಬ್ ಆಗಮಿಸುವ ಸ್ಥಳ, ಹೋಟೆಲ್‌ಗಳಿಗೆ ತೆರಳಬಹುದು.