ನವದೆಹಲಿ (ನ. 09): ‘ನಿರ್ಭಯಾ ಗ್ಯಾಂಗ್‌ರೇಪ್’ ಪ್ರಕರಣದ ನಾಲ್ವರೂ ದೋಷಿಗಳು ಶೀಘ್ರದಲ್ಲೇ ನೇಣುಗಂಬಕ್ಕೇರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ದೋಷಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ಎಂಬಾತ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ಕಾರಣ, ಪ್ರಕರಣದ ಇತರೆ ೩ದೋಷಿಗಳನ್ನು ಕೂಡ ನೇಣಿಗೇರಿಸಲು ಈಗ ಸಾಧ್ಯವಿಲ್ಲ ಎಂದಿದ್ದಾರೆ ತಿಹಾರ್ ಜೈಲಿನ ಅಧಿಕಾರಿಗಳು.

ಅಯೋಧ್ಯೆ ಐತಿಹಾಸಿಕ ಮಹಾತೀರ್ಪು: ಎಲ್ಲೆಡೆ ಕಟ್ಟೆಚ್ಚರ

2012 ರ ಡಿ.16 ರ ಈ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅ. 29 ರಂದು ತಿಹಾರ್ ಜೈಲು ಅಧಿಕಾರಿಗಳು 7 ದಿವಸಗಳ ಕಾಲಾವಕಾಶ ನೀಡಿದ್ದರು. ನ.4 ರಂದು ಕಾಲಾವಕಾಶದ ಅವಧಿ ಮುಗಿದಿತ್ತು. ಅಷ್ಟರೊಳಗೆ ದೋಷಿಗಳು ಅರ್ಜಿ ಸಲ್ಲಿಸದಿದ್ದರೆ, ನೇಣುಗಂಬಕ್ಕೇರಿಸುವ ಸಿದ್ಧತೆಗಳು ಆರಂಭವಾಗುತ್ತಿದ್ದವು.

ಅಯೋಧ್ಯೆ ಐತಿಹಾಸಿಕ ಮಹಾತೀರ್ಪು: ರಾಜ್ಯದ ಶಾಲಾ ಕಾಲೇಜುಗಳಿಗೆ ರಜೆ

‘ನಾಲ್ವರು ದೋಷಿಗಳ ಪೈಕಿ ವಿನಯ್ ಶರ್ಮಾ (25) ಮಾತ್ರ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಇತ್ಯರ್ಥವಾಗುವವರೆಗೆ ಉಳಿದವರಿಗೆ ಮರಣದಂಡನೆ ವಿಧಿಸುವಂತಿಲ್ಲ. ಹೀಗಾಗಿ ಶರ್ಮಾನ ಅರ್ಜಿ ಇತ್ಯರ್ಥವಾಗುವವರಗೆ ಮರಣದಂಡನೆ ಶಿಕ್ಷೆ ಜಾರಿಯಾಗದು’ ಎಂದು ಡಿಜಿಪಿ ಸಂದೀಪ್ ಗೋಯೆಲ್ ಹೇಳಿದರು.