ಜರ್ಮನಿಯಿಂದ 23 ಆಕ್ಸಿಜಿನ್ ಉತ್ಪಾದಕ ಘಟಕ ಏರ್‌ಲಿಫ್ಟ್‌ಗೆ ಮುಂದಾದ ಭಾರತ!

ಭಾರತದಲ್ಲಿ ಎದುರಾಗಿರುವ ಆಮ್ಲಜನಕ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಜರ್ಮನಿಯಿಂದ 23 ಆಕ್ಸಿಜನ್ ಉತ್ಪಾದಕ ಘಟಕ ಏರ್‌ಲಿಫ್ಟ್ ಮಾಡಲು ಭಾರತೀಯ ರಕ್ಷಣಾ ಸಚಿವಾಲಯದ ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ

Defence ministry decided to airlift 23 mobile oxygen generation plants from Germany ckm

ನವದೆಹಲಿ(ಏ.23): ಕೊರೋನಾ ವೈರಸ್ ಹೆಚ್ಚಳದಿಂದ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಸೋಂಕಿತರ ಚಿಕಿತ್ಸೆ ಇದೀಗ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಆಕ್ಸಿಜನ್ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಇದೀಗ ಭಾರತದ ರಕ್ಷಣಾ ಸಚಿವಾಲಯ ಜರ್ಮನಿಯಿಂದ 23 ಆಕ್ಸಿಜನ್ ಉತ್ಪಾದಕ ಘಟಕ ಏರ್‌ಲಿಫ್ಟ್ ಮಾಡಲಿದೆ.

ಸೋಂಕಿತರ ಚಿಕಿತ್ಸೆಗೆ ನೆರವಾದ ರಿಲಯನ್ಸ್; ಪ್ರತಿ ದಿನ 700 ಟನ್ ಆಮ್ಲಜನಕ ಪೂರೈಕೆ!

ಜರ್ಮನಿಯಿಂದ ಏರ್‌ಲಿಫ್ಟ್ ಮಾಡಲಿರುವ ಆಮ್ಲಜನಕ ಉತ್ಪಾದಕ ಘಟಕ ಪ್ರತಿ ಗಂಟೆಗೆ 24,000 ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಬೃಹತ್ ಘಟಕವನ್ನು ಜರ್ಮನಿಯಿಂದ ಹೊತ್ತು ಭಾರತಕ್ಕೆ ಬರಲಿದೆ. ಬಳಿಕ ಇಲ್ಲಿ ನಿರ್ಮಾಣ ಘಟಕವನ್ನು ಸ್ಥಾಪಿಸಿ, ಕಾರ್ಯರಂಭಿಸಲಿದೆ.

ಈಗಾಗಲೇ  ಜರ್ಮನಿ ಜೊತೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಆಕ್ಸಿಜಿನ್ ಉತ್ಪಾದಕ ಘಟಕ ಭಾರತಕ್ಕೆ ಬರಲಿದೆ. ಇದು ತುರ್ತು ಪರಿಸ್ಥಿತಿಯಾಗಿದ್ದು, ಕ್ಷಿಪ್ರ ನಿರ್ಧಾರಗಳು ಅನಿವಾರ್ಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ವಾಯುಸೇನೆಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಆಕ್ಸಿಜನ್ ಸೇರಿದಂತೆ ಕೊರೋನಾ ವೈದ್ಯಕೀಯ ಸಲಕರಣೆ ಏರ್‌ಲಿಫ್ಟ್‌ಗೆ ಸನ್ನದ್ದವಾಗಿರುವಂತೆ ಸೂಚಿಸಲಾಗಿದೆ. ಈ ಕುರಿತು ವಾಯುಸೇನೆ ಸದಾ ಸಿದ್ದವಾಗಿದ್ದು, ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದೆ.

Latest Videos
Follow Us:
Download App:
  • android
  • ios