Asianet Suvarna News Asianet Suvarna News

ಚೀನಾಗೆ ಠಕ್ಕರ್‌: ತವಾಂಗ್ ಗಡಿಯಲ್ಲಿ ಸೈನಿಕರ ಜತೆ ದಸರಾ ಆಚರಿಸಿದ ರಾಜನಾಥ್‌ ಸಿಂಗ್

ಪ್ರಸ್ತುತ ಜಾಗತಿಕ ಸನ್ನಿವೇಶ ನೋಡಿದರೆ, ದೇಶದ ಭದ್ರತೆಯನ್ನು ಬಲಪಡಿಸುವುದು ಬಿಟ್ಟು ಬೇರೆ ದಾರಿಯಿಲ್ಲ. ರಾಷ್ಟ್ರದ ಮಿಲಿಟರಿಯನ್ನು ಬಲಪಡಿಸುವ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಕಷ್ಟದ ಸಮಯದಲ್ಲಿ ದೇಶದ ಗಡಿ ಕಾಯುತ್ತಿರುವ ನಿಮ್ಮ ಬಗ್ಗೆ ದೇಶದ ಜನರು ಹೆಮ್ಮೆ ಪಡುತ್ತಾರೆ’ ಎಂದು ರಾಜನಾಥ್‌ ಸಿಂಗ್ ಹೇಳಿದ್ದಾರೆ. 

defence minister rajnath singh celebrates dussehra at tawang war memorial near indo china border ash
Author
First Published Oct 25, 2023, 10:06 AM IST

ತವಾಂಗ್‌ (ಅಕ್ಟೋಬರ್ 25, 2023): ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಂಗಳವಾರ ಭಾರತ- ಚೀನಾ ಗಡಿ ಗ್ರಾಮವಾಗಿರುವ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಸೈನಿಕರ ಜೊತೆಗೂಡಿ ‘ಶಸ್ತ್ರ ಪೂಜೆ’ಯನ್ನು (ಆಯುಧ ಪೂಜೆ) ನೆರವೇರಿಸಿ ದಸರಾ ಹಬ್ಬವನ್ನು ಆಚರಿಸಿದ್ದಾರೆ.

ಪ್ರತಿ ಬಾರಿ ದಸರಾ ಹಬ್ಬವನ್ನು ಸೈನಿಕರ ಜೊತೆಗೂಡಿ ಹಬ್ಬ ಆಚರಿಸುತ್ತಿರುವ ರಾಜನಾಥ್‌ ಸಿಂಗ್‌, ಭಾರತ-ಚೀನಾದ ನಡುವೆ ಅರುಣಾಚಲ ಪ್ರದೇಶದ ಗಡಿ ವಿಚಾರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಪೂಜೆ ನೆರವೇರಿಸಿದರು. ಬಳಿಕ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೊಂದಿಗೆ ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತದ ಮಿಲಿಟರಿ ಸನ್ನದ್ಧತೆಯ ಸಮಗ್ರ ಪರಿಶೀಲನೆ ನಡೆಸಿದರು.

ಇದನ್ನು ಓದಿ: ಯುದ್ಧಕ್ಕೆ ರೆಡಿ ಇರಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಹೀಗೆ ಹೇಳಿದ್ಯಾಕೆ?

ಬಳಿಕ ಬಮ್‌- ಲಾ ಸೇರಿದಂತೆ ಇತರ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸೈನಿಕರೊಂದಿಗೆ ಸಂವಾದ ನಡೆಸಿದ ಸಿಂಗ್‌, ‘ಪ್ರಸ್ತುತ ಜಾಗತಿಕ ಸನ್ನಿವೇಶ ನೋಡಿದರೆ, ದೇಶದ ಭದ್ರತೆಯನ್ನು ಬಲಪಡಿಸುವುದು ಬಿಟ್ಟು ಬೇರೆ ದಾರಿಯಿಲ್ಲ. ರಾಷ್ಟ್ರದ ಮಿಲಿಟರಿಯನ್ನು ಬಲಪಡಿಸುವ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಕಷ್ಟದ ಸಮಯದಲ್ಲಿ ದೇಶದ ಗಡಿ ಕಾಯುತ್ತಿರುವ ನಿಮ್ಮ ಬಗ್ಗೆ ದೇಶದ ಜನರು ಹೆಮ್ಮೆ ಪಡುತ್ತಾರೆ’ ಎಂದರು.

ಮಣಿಪುರ ಹಿಂಸೆ ಹಿಂದೆ ವಿದೇಶಿ ಕೈವಾಡ: ಭಾಗವತ್‌ ಶಂಕೆ
ನಾಗಪುರ: ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಹಿಂಸಾಚಾರವನ್ನು ವೈಭವೀಕರಣ ಮಾಡಲಾಗುತ್ತಿದ್ದು, ಇದರಲ್ಲಿ ವಿದೇಶಿ ಕೈವಾಡ ಇರಬಹುದಾದ ಎಲ್ಲ ಸಾಧ್ಯತೆಯಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಶಂಕಿಸಿದ್ದಾರೆ.

ಇದನ್ನೂ ಓದಿ: ದೇಶದ ನಾಗರಿಕರು ಸೈನಿಕರ ಜತೆ ಯುದ್ಧಕ್ಕೆ ಕೈಜೋಡಿಸಿದ್ರೆ ಪಿಒಕೆಗೆ ಭಾರತ ಲಗ್ಗೆ: ರಾಜನಾಥ್‌ ಸಿಂಗ್‌

ಮಂಗಳವಾರ ಆರೆಸ್ಸೆಸ್‌ ಮುಖ್ಯ ಕಚೇರಿಯಲ್ಲಿ ವಿಜಯದಶಮಿ ಭಾಷಣ ಮಾತನಾಡಿದ ಅವರು, ‘ಮಣಿಪುರದಲ್ಲಿ ಬಹಳ ಕಾಲದಿಂದ ಅನ್ಯೋನ್ಯವಾಗಿದ್ದ ಎರಡು ಸಮುದಾಯಗಳ ನಡುವೆ ಗಲಭೆ ಎಬ್ಬಿಸಿದರೆ ಇಲ್ಲಿನವರಿಗಿಂತ ವಿದೇಶಿಗರಿಗೆ ಹೆಚ್ಚು ಲಾಭಕರ. ಕೇಂದ್ರ ಗೃಹ ಮಂತ್ರಿ ಕೂಡ ಅಲ್ಲಿಗೆ 3 ದಿನಗಳ ಭೇಟಿ ನೀಡಿದ್ದಾಗ ಹಿಂಸಾಚಾರವನ್ನು ಮಾಡಿಸಲಾಗುತ್ತಿದೆ ಎಂದಿದ್ದರು. ಆಗ್ನೇಯ ಏಷ್ಯಾ ರಾಜಕೀಯ ಶಕ್ತಿಗಳು ಈ ಕೃತ್ಯದಲ್ಲಿ ಪಾಲ್ಗೊಂಡಿರಬಹುದೇ’ ಎಂಬ ಶಂಕೆ ವ್ಯಕ್ತಪಡಿಸಿದರು.

ಇದೇ ವೇಳೆ, ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಶ್ರಮಿಸಿದ ಸಂಘ ಪರಿವಾರದ ಕಾರ್ಯಕರ್ತರನ್ನು ಶ್ಲಾಘಿಸಿದರು.

ಇದನ್ನೂ ಓದಿ: ಅಪ್ಪ ನನಗೇನೂ ಬೇಡಾ, ನೀನು ಎದ್ದು ಬಾ: ಹುತಾತ್ಮ ಯೋಧನ ಪುತ್ರಿಯ ಕಣ್ಣೀರು

ಮತದಾನಕ್ಕೆ ಕರೆ:
‘ನಮ್ಮ ದೇಶದಲ್ಲಿ ಮಾರ್ಕ್ಸಿಸ್ಟ್‌ ಶಕ್ತಿಗಳು ದೇಶದ ಅಧಿಕಾರ ಹಿಡಿಯುವ ಯತ್ನದಲ್ಲಿದ್ದು, ಅದನ್ನು ತಪ್ಪಿಸಬೇಕೆಂದರೆ ಎಲ್ಲ ಭೇದಗಳನ್ನು ಮರೆತು ಒಗ್ಗಟ್ಟಾಗಿ ದೇಶದ ಏಕತೆ ಹಾಗೂ ಸಮಗ್ರತೆಯ ದೃಷ್ಟಿಯಿಂದ ಮತ ಚಲಾಯಿಸಬೇಕು’ ಎಂದೂ ಭಾಗವತ್‌ ಕರೆ ನೀಡಿದರು.

ಜನವರಿ 22ಕ್ಕೆ ಎಲ್ಲ ಮಂದಿರಗಳಲ್ಲಿ ಸಂಭ್ರಮ:
ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದೆ. ಹೀಗಾಗಿ ಅಂದು ದೇಶಾದ್ಯಂತ ಎಲ್ಲ ದೇಗುಲಗಳಲ್ಲಿ ಇದರ ಸಂಭ್ರಮಾಚರಣೆ ನಡೆಸಬೇಕು ಎಂದು ಕರೆ ನೀಡಿದರು.

Follow Us:
Download App:
  • android
  • ios