Asianet Suvarna News Asianet Suvarna News

ಟ್ವೀಟ್ ಡಿಲೀಟ್ ಬದಲು ಲಿಖಿತವಾಗಿ ಕ್ಷಮೆ ಕೇಳಿ, RSS ಮುಖ್ಯಸ್ಥರ ನಿಂದಿಸಿದ ದಿಗ್ವಿಜಯ್‌ಗೆ ಕೋರ್ಟ್ ತರಾಟೆ!

ಕ್ರಿಮಿನಲ್ ಡಿಫಮೇಶನ್ ಕೇಸ್ ಕುಣಿಕೆ ಬಿಗಿಯಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಳೇ ಟ್ವೀಟ್ ಡಿಲೀಟ್ ಮಾಡಿ ಪ್ರಕರಣದಿಂದ  ಹೊರಬರುವ ಜಾಣತನ ಪ್ರದರ್ಶಿಸಿದ್ದರು. ಟ್ವೀಟ್ ಡಿಲೀಟ್ ಮಾಡಿದರೆ ಸಾಲದು, ಲಿಖಿತವಾಗಿ ಕ್ಷಮೆ ಕೇಳಲು ಕೋರ್ಟ್ ಸೂಚಿಸಿರುವುದು ದಿಗ್ವಿಜಯ್ ಮಾತ್ರವಲ್ಲ, ಕಾಂಗ್ರೆಸ್‌ಗೂ ಇರಿಸು ಮುರಿಸು ತಂದಿದೆ.

Defamatory Tweet against RSS chief Golwalkar case Court ask Congress leader Digvijay Singh for Written Apology ckm
Author
First Published Jan 4, 2024, 4:53 PM IST

ಮುಂಬೈ(ಜ.04) ಆರ್‌ಎಸ್‌ಎಸ್, ಹಿಂದುತ್ವದ ವಿರುದ್ದ ಕಾಂಗ್ರೆಸ್ ನಾಯಕರು ಹರಿಹಾಯುವುದು ಹೊಸದೇನಲ್ಲ. ಹೀಗೆ ಆರ್‌ಎಸ್‌ಎಸ್ ಮಾಜಿ ಮುಖ್ಯಸ್ಥ ಗೋಲ್ವಾಲ್ಕರ್ ಗುರೂಜಿ ವಿರುದ್ಧ ಟ್ವೀಟ್ ಮಾಡಿದ್ದ ದಿಗ್ವಿಜಯ್ ಸಿಂಗ್‌ಗ ಸಂಕಷ್ಟ ಹೆಚ್ಚಾಗಿದೆ. ವಿವಾದ ಹಾಗೂ ನಿಂದನಾತ್ಮಕ ಟ್ವೀಟ್ ಮಾಡಿ ಇದೀಗ ಟ್ವೀಟ್ ಡಿಲೀಟ್ ಮಾಡಿದ ತಕ್ಷಣ ಕೇಸ್‌ನಿಂದ ಮುಕ್ತವಾಗಲು ಸಾಧ್ಯವಿಲ್ಲ. ಟ್ವೀಟ್ ಡಿಲೀಟ್ ಮಾಡಿದರೆ ಸಾಲದು, ಲಿಖಿತವಾಗಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್‌ಗೆ ಥಾಣೆ ಮ್ಯಾಜಿಸ್ಟ್ರೇಟ್ ಕೋರ್ಟ್ ಖಡಕ್ ಸೂಚನೆ ನೀಡಿದೆ.  

 ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ 2023ರ ಜುಲೈ ತಿಂಗಳಲ್ಲಿ ಮಾಡಿದ್ದ ಟ್ವೀಟ್ ಭಾರಿ ವಿವಾದಕ್ಕೆ ಸಿಲುಕಿತ್ತು. ಆರ್‌ಎಸ್‌ಎಸ್ ಮುಖ್ಯಸ್ಥ ಗೋಲ್ವಾಲ್ಕರ್ ಗುರೂಜಿ ನಿಂದಿಸುವ ಟ್ವೀಟ್ ಮಾಡಿದ್ದರು. ಇದರ ವಿರುದ್ದ ಆರ್‌ಎಸ್‌ಎಸ್ ಸ್ವಯಂ ಸೇವಕ ವಿವೇಕ್ ಚಂಪಾನೇರ್ಕರ್ ದೂರು ದಾಖಲಿಸಿದ್ದರು. ದಿಗ್ವಿಜಯ್ ಸಿಂಗ್ ವಿರುದ್ಧ ಕ್ರಿಮಿಲ್ ಡಿಫಮೇಶನ್ ಕೇಸ್ ದಾಖಲಿಸಿದ್ದ ವಿವೇಕ್ ಚಂಪಾನೇರ್ಕರ್, ಕಾನೂನು ಹೋರಾಟ ಮುಂದುವರಿಸಿದ್ದರು.

ಆಯೋಧ್ಯೆ ರಾಮ ಮಂದಿರ ಆಹ್ವಾನ ಕುರಿತು ಅಚ್ಚರಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ!

ಡಿಫಮೇಶನ್ ಕೇಸ್ ಪ್ರಕರಣದಲ್ಲಿ ಸಂಕಷ್ಟ ಹೆಚ್ಚಾಗುತ್ತಿದ್ದಂತೆ ದಿಗ್ವಿಜಯ್ ಸಿಂಗ್ ಟ್ವೀಟ್ ಡಿಲೀಟ್ ಮಾಡಿದ್ದಾರೆ. ದಿಗ್ವಿಜಯ್ ಸಿಂಗ್ ಪರ ವಾದ ಮಂಡಿಸಿದ ವಕೀಲರು, ಇದೇ ವಾದವನ್ನು ಕೋರ್ಟ್ ಮುಂದೆ ಇಟ್ಟಿದ್ದಾರೆ. ದಿಗ್ವಿಜಯ್ ಸಿಂಗ್ ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಮತ್ತಷ್ಟು ಮುಂದುವರಿಸುವುದು ಸೂಕ್ತವಲ್ಲ ಎಂದು ವಕೀಲು ಹೇಳಿದ್ದಾರೆ.

ಆದರೆ ವಿವೇಕ್ ಚಂಪಾನೇರ್ಕರ್ ಈ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿ ವಿವಾದ ಸೃಷ್ಟಿ ಡಿಲೀಟ್ ಮಾಡಿದ ತಕ್ಷಣವ ಎಲ್ಲವೂ ಮುಗಿದು ಹೋಗುವುದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ಎಚ್ಚರಿಕೆಯಿಂದ ಟ್ವೀಟ್ ಮಾಡಬೇಕು. ಇದು ನಾಯಕರ ಬೆಂಬಲಿಗರು, ಅನುಯಾಯಿಗಳು ಹಾಗೂ ಜನಸಾಮಾನ್ಯರ ಮೇಲೆ ಬೀರುವ ಪ್ರಭಾವದ ಕುರಿತು ಯೋಚನೆ ಮಾಡದ ವಾದಗಳಾಗಿದೆ. ಹೀಗಾಗಿ ಲಿಖಿತ ಕ್ಷಮೇ ಕೇಳಬೇಕು ಎಂದು ವಾದ ಮಂಡಿಸಿದ್ದಾರೆ.

ಗೋಲ್ವಾಲ್ಕರ್‌ ವಿರುದ್ಧ ಪೋಸ್ಟ್‌: ದಿಗ್ವಿಜಯ್‌ ಸಿಂಗ್‌ ವಿರುದ್ಧ ಪ್ರಕರಣ

ಎರಡೂ ಕಡೆ ವಾದ ಆಲಿಸಿದ ಕೋರ್ಟ್, ದಿಗ್ವಿಜಯ್ ಸಿಂಗ್‌ಗೆ ಲಿಖಿತವಾಗಿ ಕ್ಷಮೆ ಕೇಳಲು ಸೂಚಿಸಿದೆ. ಇದೇ ವೇಳೆ ಟ್ವೀಟ್‌ನಿಂದ ಆರ್‌ಎಸ್ಎಸ್ ಕಾರ್ಯಕರ್ತರು ಸೇರಿದಂತೆ ಇತರರಿಗೆ ಆಗಿರುವ ನೋವಿಗೆ ಪರಿಹಾರವಾಗಿ 1 ರೂಪಾಯಿಯನ್ನು ದಿಗ್ವಿಜಯ್ ಸಿಂಗ್ ಅವರಿಂದ ಸಂಗ್ರಹ ಮಾಡುವಂತೆ ಕೋರ್ಟ್ ಸೂಚಿಸಿದೆ. ಥಾಣೆ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ ಸೂಚನೆಯಿಂದ ದಿಗ್ವಿಜಯ್ ಸಿಂಗ್ ಹಾಗೂ ಕಾಂಗ್ರೆಸ್‌ಗೆ ಮುಜುಗರವಾಗಿದೆ.
 

Follow Us:
Download App:
  • android
  • ios