ಜಮ್ಮು, ಪಂಜಾಬ್ ಡ್ರೋನ್ ಸಹಾಯದಿಂದ ಹದ್ದಿನ ಕಣ್ಣು ಇಡಲಾಗಿದೆ. ಸೆಕ್ಯುರಿಟಿ ಪ್ರೊಟೆಕ್ಷನ್ ನಿಂದ ‌ಸಾವು‌ ನೋವುಗಳು ಕಡಿಮೆ ಆಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಸೇನಾ ಸದಾ ಸಿದ್ಧವಿರುತ್ತದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಮನೋಜ್ ಸಿ. ಪಾಂಡೆ ತಿಳಿಸಿದ್ದಾರೆ.

ಬೆಂಗಳೂರು (ಜ.15): ಜಮ್ಮು, ಪಂಜಾಬ್ ಡ್ರೋನ್ ಸಹಾಯದಿಂದ ಹದ್ದಿನ ಕಣ್ಣು ಇಡಲಾಗಿದೆ. ಸೆಕ್ಯುರಿಟಿ ಪ್ರೊಟೆಕ್ಷನ್ ನಿಂದ ‌ಸಾವು‌ ನೋವುಗಳು ಕಡಿಮೆ ಆಗಿದೆ. ಗ್ಲೋಬಲ್ ಸೆಕ್ಯುರಿಟಿ ನಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಸೇನಾ ಸದಾ ಸಿದ್ಧವಿರುತ್ತದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಮನೋಜ್ ಸಿ. ಪಾಂಡೆ ತಿಳಿಸಿದ್ದಾರೆ.

ಸೇನಾದಿವಸ್‌ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇದೇ ಮೊದಲ ಬಾರಿಗೆ ಸೇನಾ ದಿವಸ್‌ ಕಾರ್ಯಕ್ರಮವನ್ನು ದೆಹಲಿಯಿಂದ ಹೊರ ಭಾಗದ ನಗರದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಅದರಲ್ಲಿಯೂ ದೇಶದ ಮೊದಲ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ತವರೂರು ಮಡಿಕೇರಿಯ ಸಮೀಪವಿರುವ ಬೆಂಗಳೂರಿನಲ್ಲಿ ಆಚರಣೆ ಮಾಡುತ್ತಿರುವುದು ಸಂತಸವಾಗಿದೆ. ದೇಶದ ಜನರ ಜತೆ ಸೇರಿಸುವ ಪ್ರಯತ್ನ ಇದಾಗಿದೆ ಎಂದು ನಾನು ನಂಬುತ್ತೇನೆ. ಸೇನಾ ದಿವಸ್ ದಿನವಾದ ಇಂದು ವೀರ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವೀರ ಸೈನಿಕರ ಬಲಿದಾನ, ಶೌರ್ಯ ರಿಂದ ಮುಂದಿನ ಜನಾಂಗ ಪ್ರೇರಣೆ ಆಗುತ್ತದೆ. ವೀರ ಸೇನಾ ಪ್ರಶಸ್ತಿ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿಂದು ಸೇನಾ ಪಡೆ ಶಕ್ತಿ, ಶಿಸ್ತು ಪ್ರದರ್ಶನ

ಮಾರ್ಚ್‌ನಿಂದ ಮಹಿಳಾ ಅಗ್ನಿವೀರ್‌ ತರಬೇತಿ ಆರಂಭ: ಪುರುಷರ ಅಗ್ನಿವೀರ್ ನಲ್ಲಿ ಮೊದಲ ಟ್ರೈನಿಂಗ್ ಶುರುವಾಗಿದೆ. ಮಹಿಳಾ ಅಗ್ನಿವೀರ್ ತರಬೇತಿ ಮುಂದಿನ ಮಾರ್ಚ್ ತಿಂಗಳಿಂದ ಶುರುವಾಗಲಿದೆ. ನಾರಿ ಶಕ್ತಿ ಅಡಿ ಮಹಿಳೆಯರನ್ನು ಶಸಕ್ತ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳಾ ಅಧಿಕಾರಿಗಳು, ಸೈನಿಕರು ಇಂದು ಪ್ರಮುಖ ಆಪರೇಷನ್ ಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಸೈನ್ಯದಲ್ಲಿರುವ ಸೈನಿಕರಿಗೆ ಉಪಕರಣ, ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸೇನೆಯಲ್ಲಿ ಅತ್ಯಾಧುನಿಕ ಉಪಕರಣಗಳು ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಅಭಿವೃದ್ಧಿ ಮಾಡುವ ಕಡೆ ಗಮನ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಭಾರತೀಯ ಸೇನೆಯ 75 ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಸೇನಾ ದಿನಾಚರಣೆಯನ್ನು ದೆಹಲಿಯಿಂದ ಹೊರಭಾಗ ಬೆಂಗಳೂರಿನಲ್ಲಿ ಆಚರಣೆ ಮಾಡಲಾಯಿತು. ಜೊತೆಗೆ ಭಾರತೀಯ ಸೇನೆಯ 8 ರೆಜಿಮೆಂಟ್‌ ಪಡೆದಗಳಿಂದ ಪರೇಡ್‌ ಮಾಡಲಾಯಿತು.

ಆರ್ಥಿಕ ಬಿಕ್ಕಟ್ಟು : ಲಂಕಾ ಸೇನೆಯಲ್ಲಿ ಯೋಧರ ಸಂಖ್ಯೆಯಲ್ಲಿ ಭಾರಿ ಕಡಿತ

ವೀರ ಯೋಧರಿಗೆ ಸೇನಾ ಮೆಡಲ್ ಪುರಸ್ಕಾರ (ಪುರಸ್ಕೃತರ ಪಟ್ಟಿ) 

  1. ಲೆಫ್ಟಿನೆಂಟ್ ಕರ್ನಲ್ ವಿಪಿನ್ ಕುಮಾರ್ ಕೌರ್
  2. ಮೇಜರ್ ಪ್ರಭ್ಜೋತ್ ಸಿಂಗ್ ಸೈನಿ
  3. ಮೇಜರ್ ಆದಿತ್ಯ ಭಿಷ್ಟ್ (ಪುಲ್ವಾಮಾ ಘಟನೆ)
  4. ಮೇಜರ್ ನಿಖಿಲ್ ಮನ್‌ಚಂದಾ (ಪುಲ್ವಾಮಾ‌ ಘಟನೆ - 2018)
  5. ಹವಾಲ್ದಾರ್ ದೇಶ್‌ಮುಖ್ ನಿಲೇಶ್ ಮಲ್ಹಾರ್ ರಾವ್
  6. ನಾಯಕ್ ಸತೀಶ್ ಕುಮಾರ್
  7. ಸವಾರ್ ಕುರ್ಲಾ ಸುರೇಂದರ್
  8. ನಾಯಕ್ ಹರ್‌ಪ್ರೀತ್ ಸಿಂಗ್
  9. ಸಿಪಾಯಿ ಜಗ್‌ಪ್ರೀತ್ ಸಿಂಗ್
  10. ಮೇಜರ್ ಸಂಕಲ್ಪ್ ಯಾದವ್ (ಮರಣೋತ್ತರ) ಪರವಾಗಿ ತಂದೆ ಸುರೇಂದ್ರ ಕುಮಾರ್ ಯಾದವ್ ಸ್ವೀಕಾರ
  11. ಸುಬೇದಾರ್ ರಾಮ್ ಸಿಂಗ್ (ಮರಣೋತ್ತರ) ಪರವಾಗಿ ಪತ್ನಿ ಅನಿತಾ ಭಂಡಾರಿ ಸ್ವೀಕಾರ
  12. ಹವಾಲ್ದಾರ್ ಮೊಹಮ್ಮದ್ ಸಲೀಂ ಅಖೂನ್ (ಮರಣೋತ್ತರ) ಪರವಾಗಿ ಪತ್ನಿ ಜುಬೇದಾ ಭಾನು ಸ್ವೀಕಾರ
  13. ನಾಯಕ್ ಭನ್ವಾರಿ ಲಾಲ್ ರಾಥೋಡ್ (ಮರಣೋತ್ತರ) ಪರವಾಗಿ ಪತ್ನಿ ಸುನೀತಾ ರಾಥೋಡ್ ಸ್ವೀಕಾರ
  14. ಸಿಪಾಯಿ ಶಶಾಂಕ್ ಶೇಖರ್ ಸಾಮಲ್ (ಆಪರೇಶನ್ ಸ್ನೋ ಲೇಪರ್ಡ್) (ಮರಣೋತ್ತರ) ಪರವಾಗಿ ಪತ್ನಿ ಸುಶ್ಮಿತಾ ಸಾಮಲ್ ಸ್ವೀಕಾರ