ಶವಪೆಟ್ಟಿಗೆಯಲ್ಲಿ ಮಹಿಳೆಯೊಬ್ಬರು ಕಣ್ಣು ತೆರೆದ ವಿಡಿಯೋ ವೈರಲ್ ಆಗಿದೆ. ಜನರ ಪ್ರತಿಕ್ರಿಯೆ ಸೆರೆಹಿಡಿಯಲು ನಡೆಸಿದ ನಾಟಕವೆಂದು ಬಹಿರಂಗವಾಗಿದೆ. ಮಹಿಳೆ ಜೀವಂತವಾಗಿದ್ದು, ಉದ್ದೇಶಪೂರ್ವಕವಾಗಿ ನಾಟಕವಾಡಿದ್ದಾರೆ. ಎರಡನೇ ವಿಡಿಯೋದಲ್ಲಿ ಸತ್ಯ ಬಯಲಾಗಿದೆ.

ನಾವು ಕೆಲವು ವಿಶೇಷ ಘಟನೆಗಳಲ್ಲಿ ವೈದ್ಯರು ನಿಮ್ಮವರು ಸಾವನ್ನಪ್ಪಿದ್ದಾರೆ ಹೇಳಿದ ನಂತರ ಮಸಣಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡುವ ಮುನ್ನ ಎದ್ದು ಕೂತಿರುವ ಘಟನೆಗಳನ್ನು ಕೇಳಿರುತ್ತೇವೆ. ಅದೇ ರೀತಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮೃತ ಮಹಿಳೆಯ ಶವವನ್ನು ಶವ ಪೆಟ್ಟಿಗೆಯಲ್ಲಿ ಇಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದಾಗ ಮಹಿಳೆಯ ಕಣ್ಣುಗಳು ತೆರೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. 

ಹೌದು, ಸಾಮಾಜಿಕ ಮಾಧ್ಯಮದಲ್ಲಿ ನಡೆಯುವ ವಿಚಿತ್ರ ವಿಡಿಯೋಗಲ್ಲಿ ಇದೀಗ ಶವಗಳು ಜೀವಂತವಾಗಿರುವ ಸುದ್ದಿಗಳನ್ನು ಹಾಗೂ ವಿಡಿಯೋಗಳನ್ನು ಕೂಡ ನೀವು ನೋಡಿರುತತೀರಿ. ಆದರೂ, ಅಂತಹ ವೀಡಿಯೊಗಳು ವಿರಳ. ಆದರೆ, ಈ ಬಾರಿ ವೈರಲ್ ಆಗುತ್ತಿರುವ ಕ್ಲಿಪ್‌ನಲ್ಲಿ, ಶವವು ಕ್ಯಾಮೆರಾದಲ್ಲಿ ಕಣ್ಣು ತೆರೆಯುತ್ತದೆ. ಸುತ್ತಲೂ ನಿಂತಿದ್ದ ಜನರು ಥಟ್ಟನೆ ಭಯಭೀತರಾಗುತ್ತಾರೆ. ಕೆಲವರು ಅಲ್ಲಿಂದ ಓಡಿಹೋಗುತ್ತಾರೆ. ಈ ವೀಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಕುತೂಹಲಕ್ಕೆ ಅಲ್ಲಿ ಏನಾಗಿದೆ ಎಂದು ಜನರು ವಿಡಿಯೋ ಹಂಚಿಕೊಂಡವರಿಗೆ ಕೇಳಿದ್ದಾರೆ.

Scroll to load tweet…

ಶವ ಥಟ್ಟನೆ ಕಣ್ಣು ತೆರೆಯಿತು: 
@DramaAlert ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಒಬ್ಬ ಮಹಿಳೆ ಶವಪೆಟ್ಟಿಗೆಯೊಳಗೆ ಮಲಗಿದ್ದಾಳೆ. ಅದರ, ಗಾಜಿನ ಮೇಲೆ ಮೇಣದಬತ್ತಿ, ಮೃತ ಮಹಿಳೆ ಫೋಟೋ ಮತ್ತು ಇತರ ವಸ್ತುಗಳನ್ನು ಇರಿಸಲಾಗಿದೆ. ಮಕ್ಕಳು 'ಅಮ್ಮ' ಎಂದು ಅಳುತ್ತಿದ್ದಾರೆ. ಎಲ್ಲರೂ ದುಃಖಿತರಾಗಿ ಕಾಣುತ್ತಿದ್ದಾರೆ. ಆಗ ಥಟ್ಟನೆ ಈ ಶವದಲ್ಲಿ ಚಲನೆ ಕಂಡುಬರುತ್ತದೆ. ಎಲ್ಲರೂ ಶವ ಪೆಟ್ಟಿಗೆ ಕಡೆಗೆ ನೋಡ ನೋಡುತ್ತಿದ್ದಂತೆ ಅದರ ಒಳಗಡೆ ಇಡಲಾಗಿದ್ದ ಮಹಿಳೆಯ ಶವ ಕಣ್ಣು ತೆರೆಯುತ್ತದೆ. ಇದರ ನಂತರ ಸುತ್ತಮುತ್ತಲಿನ ಜನರು ದಿಗ್ಭ್ರಮೆಗೊಳ್ಳುತ್ತಾರೆ.

ಇದರ ನಂತರ, ವಿಡಿಯೋ ಹಂಚಿಕೊಂಡವರಿಗೆ ಈ ಘಟನೆಯ ಮುಂದುವರಿದ ಭಾಗ ಏನಾಗಿದೆ ಎಂದು ಪ್ರಶ್ನೆ ಮಾಡಿ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಜನರ ಕುತೂಹಲವನ್ನು ತಣಿಸಿರುವ ವಿಡಿಯೋ ಹಂಚಿಕೊಂಡ ವ್ಯಕ್ತಿ ಇದಕ್ಕೆ ಸರಣಿ ಎಂಬಂತೆ ಮತ್ತೊಂದು ವೀಡಿಯೊ ಬಿಡುಗಡೆ ಮಾಡಿದ್ದಾನೆ. ಇದರಲ್ಲಿ ಮಹಿಳೆ ಏಕೆ ಕಣ್ಣು ತೆರೆದಳು, ಮುಂದೆ ಅಲ್ಲಿ ಏನೆಲ್ಲಾ ಘಟನೆ ನಡೆದಿದೆ ಎಂಬ ಸಂಪೂರ್ಣ ಸತ್ಯ ಬಹಿರಂಗವಾಯಿತು.

Scroll to load tweet…

ಶವಪೆಟ್ಟಿಗೆಯಲ್ಲಿದ್ದ ಮಹಿಳೆ ಕಣ್ಣು ತೆರೆದ ವೀಡಿಯೊ ವೈರಲ್ ಆಗಿದೆ. ಆದರೆ, ನಂತರದ ವೀಡಿಯೊದಲ್ಲಿ ಇದು ನಾಟಕ ಎಂದು ಬಹಿರಂಗವಾಯಿತು. ಮಹಿಳೆಯ ಶ್ವಾಸಕೋಶ ಸಹಜವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಇಲ್ಲಿ ಜನರು ಮೃತ ವ್ಯಕ್ತಿ ಬದುಕಿ ವಾಪಸ್ ಬಂದರೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಸೆರೆ ಹಿಡಿಯುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ, ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಂಡಿರುವುದನ್ನು ಎರಡನೇ ವಿಡಿಯೋದಲ್ಲಿ ನಾವು ಸ್ಪಷ್ಟವಾಗಿ ನೋಡಬಹುದು. ಇನ್ನು ಮಹಿಳೆ ಶವವಾಗಿ ಮಲಗಿ ನಾಟಕ ಮಾಡುವ ದೃಶ್ಯಗಳೂ ಕಂಡುಬರುತ್ತವೆ.