ಕೋವಿಡ್‌ ಹೊಡೆತಕ್ಕೆ ಭಯಾನಕವಾಗಿ ತತ್ತರಿಸುವ ಮುಂಬೈನ ಆಸ್ಪತ್ರೆಗಳು| ಶವಾಗಾರಗಳಾಗಿ ಮಾರ್ಪಾಡಾಗುತ್ತಿವೆ ಮುಂಬೈ ಆಸ್ಪತ್ರೆಗಳು| ಬಿಜೆಪಿ ಶಾಸಕ ನಿತೀಶ್‌ ರಾಣೆ ಟ್ವೀಟ್ ವೈರಲ್

ಮುಂಬೈ(ಮೇ.27): ಕೋವಿಡ್‌ ಹೊಡೆತಕ್ಕೆ ಭಯಾನಕವಾಗಿ ತತ್ತರಿಸುವ ಮುಂಬೈನ ಆಸ್ಪತ್ರೆಗಳು ಶವಾಗಾರಗಳಾಗಿ ಕಾಣುತ್ತಿದ್ದು, ಇಲ್ಲಿನ ಕಿಂಗ್‌ ಎಡ್ವರ್ಡ್‌ ಸ್ಮರಣಾರ್ಥ ಆಸ್ಪತ್ರೆಯ ಕಾರಿಡಾರ್‌ನಲ್ಲಿ ನೂರಾರು ಸ್ಟ್ರೆಚರ್‌ಗಳಲ್ಲಿ ಶವಗಳನ್ನು ಇರಿಸಲಾಗಿದೆ.

ಮುಂಬೈನ ಶಾಕಿಂಗ್ ವಿಡಿಯೋ, ಕೊರೋನಾ ಸೋಂಕಿತರ ಪಕ್ಕದಲ್ಲೇ ಶವಗಳ ರಾಶಿ!

ಬಿಜೆಪಿ ಶಾಸಕ ನಿತೀಶ್‌ ರಾಣೆ ಈ ಬಗ್ಗೆ ಫೋಟೋ ಟ್ವೀಟ್‌ ಮಾಡಿದ್ದು, ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಆದರೆ ಇದು ಸಾರ್ವಜನಿಕ ಬಳಕೆಯ ಕಾರಿಡಾರ್‌ ಹೌದೋ ಅಲ್ಲವೋ ಎನ್ನುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Scroll to load tweet…

ಏತನ್ಮಧ್ಯೆ ಕೋವಿಡ್‌ ಚಿಕಿತ್ಸೆಯಲ್ಲಿ ತೊಡಗಿದ್ದ ಶುಶ್ರೂಷಕ ಮೃತ ಪಟ್ಟಿದ್ದು, ಸೋಂಕಿನ ಲಕ್ಷಣ ಕಾಣಿಸಿಕೊಂಡರೂ ಅವರಿಗೆ ರಜೆ ನೀಡಲಿಲ್ಲ. ಪರೀಕ್ಷೆಯೂ ನಡೆಸಲಿಲ್ಲ ಎಂದು ಆರೋಪಿಸಿ ಆಸ್ಪತ್ರೆಯ ಸಿಬ್ಬಂದಿ ಪ್ರತಿಭಟನೆಗೆ ಇಳಿದಿದ್ದಾರೆ.