ತನ್ನ ಮದರಸಾದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇಂಗ್ಲಿಷ್‌ ಮತ್ತು ಇತರ ಯಾವುದೇ ಭಾಷೆಗಳನ್ನು ಕಲಿಯುವುದನ್ನು ನಿಷೇಧಿಸಿ ಉತ್ತರ ಪ್ರದೇ​ಶದ ದಾರುಲ್‌ ಉಲೂಂ ದೇವ​ಬಂದ್‌ ಇಸ್ಲಾ​ಮಿಕ್‌ ಶಿಕ್ಷಣ ಸಂಸ್ಥೆ ಆದೇಶ ಹೊರಡಿಸಿದೆ.

ಆಗ್ರಾ: ತನ್ನ ಮದರಸಾದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇಂಗ್ಲಿಷ್‌ ಮತ್ತು ಇತರ ಯಾವುದೇ ಭಾಷೆಗಳನ್ನು ಕಲಿಯುವುದನ್ನು ನಿಷೇಧಿಸಿ ಉತ್ತರ ಪ್ರದೇ​ಶದ ದಾರುಲ್‌ ಉಲೂಂ ದೇವ​ಬಂದ್‌ ಇಸ್ಲಾ​ಮಿಕ್‌ ಶಿಕ್ಷಣ ಸಂಸ್ಥೆ ಆದೇಶ ಹೊರಡಿಸಿದೆ. ಅಲ್ಲದೇ ಆದೇಶ ಮೀರಿ ಯಾವುದೇ ವಿದ್ಯಾರ್ಥಿ ಇತರ ಭಾಷೆಗಳ ಕಲಿಕೆ ಮಾಡಿದರೆ ಸಂಸ್ಥೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆ ನೀಡಿದೆ. ಸಂಸ್ಥೆಯ ಉಸ್ತುವಾರಿ ಮೌಲಾನಾ ಹುಸ್ಸೇನ್‌ ಹರಿದ್ವಾರಿ ಹೊರಡಿಸಿರುವ ಈ ಆದೇಶವನ್ನು ವಿರೋಧಿಸಿರುವ ವಿದ್ಯಾರ್ಥಿಗಳು ದಾರುಲ್‌ ಉಲೂಂ ಸಂಸ್ಥೆ ಇಸ್ಲಾಮಿಕ್‌ ಅಧ್ಯಯನಕ್ಕೆ ಸೀಮಿತವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಇಂಗ್ಲಿಷ್‌ ಮತ್ತು ಇತರ ಭಾಷೆ ಕಲಿಕೆ ಮೇಲಿನ ನಿಷೇಧ ಸಮಂಜಸವಲ್ಲ. ಈ ಬಗ್ಗೆ ಆಡಳಿತ ಮಂಡಳಿ ಮರುಪರಿಶೀಲನೆ ನಡೆಸಬೇಕು ಎಂದಿದ್ದಾರೆ.

ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳು: ತನಿಖೆಗೆ ಆದೇಶ

ಸರ್ಕಾರಿ ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿರುವುದರ ಕುರಿತಾಗಿ ತನಿಖೆ ನಡೆಸುವಂತೆ ಎಲ್ಲಾ ರಾಜ್ಯಗಳಿಗೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್‌)ಸೂಚನೆ ನೀಡಿದೆ.

ಈ ಕುರಿತಾಗಿ ರಾಜ್ಯ ಸರ್ಕಾರಗಳ ಮುಖ್ಯ ಕಾರ‍್ಯದರ್ಶಿಗಳಿಗೆ ಪತ್ರ ಬರೆದಿರುವ ಎನ್‌ಸಿಪಿಸಿಆರ್‌ ಮುಖ್ಯಸ್ಥ ಪ್ರಿಯಾಂಕ್‌ ಕಾನ್ನೂಗೋ, ‘ಸರ್ಕಾರದಿಂದ ಮಾನ್ಯತೆ ಹಾಗೂ ಅನುದಾನ ಪಡೆದುಕೊಳ್ಳುತ್ತಿರುವ ಕೆಲವು ಮದರಸಾಗಳು ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿವೆ. ಅಲ್ಲದೇ ಕೆಲವು ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂಬುದು ಆಯೋಗದ ಗಮನಕ್ಕೆ ಬಂದಿದೆ. ಇದು ಸಂವಿಧಾನ 28(3)ನೇ ವಿಧಿಯ ಸ್ಪಷ್ಟಉಲ್ಲಂಘನೆಯಾಗಿದೆ. ಈ ವಿಧಿಯ ಅನ್ವಯ ಪೋಷಕರ ಅನುಮತಿ ಇಲ್ಲದೇ ಮಕ್ಕಳನ್ನು ಧಾರ್ಮಿಕ ಭೋಧನೆಯಲ್ಲಿ ಬಳಸಿಕೊಳ್ಳುವುದು ಅಪರಾಧವಾಗಿದೆ’ ಎಂದು ತಿಳಿಸಲಾಗಿದೆ.

ಮದರಸಾ ಶಿಕ್ಷಣ ಸಂಪೂರ್ಣ ಮುಚ್ಚುವ ಸೂಚನೆ ನೀಡಿದ ಸಿಎಂ ಹಿಮಂತ ಬಿಸ್ವಾ ಶರ್ಮಾ!

ಮದರಸಾಗಳು ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡಲು ಪ್ರಾಥಮಿಕವಾಗಿ ಜವಾಬ್ದಾರವಾಗಿರುತ್ತವೆ. ಸರ್ಕಾರದಿಂದ ಅನುದಾನ ಅಥವಾ ಮಾನ್ಯತೆ ಪಡೆದಿರುವುದರಿಂದ ಇವುಗಳು ಸ್ವಲ್ಪಮಟ್ಟಿಗೆ ಔಪಚಾರಿಕ ಶಿಕ್ಷಣವನ್ನೂ ನೀಡುತ್ತವೆ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮದರಸಾಗಳಗೆ ಭೌತಿಕವಾಗಿ ಭೇಟಿ ನೀಡಿ ತನಿಖೆ ನಡೆಸಬೇಕು ಎಂದು ಸೂಚಿಸಲಾಗಿದೆ.

Uttar Pradesh: ಮದರಸಾ ವಿದ್ಯಾರ್ಥಿಗಳಿಗಿಲ್ಲ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ