ನಡು ರಸ್ತೆಯಲ್ಲಿ ಅಪಾಯಕಾರಿ ರೀಲ್ಸ್ ಮಾಡಿದ ಯುವಕ; ಮುಂದಾಗಿದ್ದೇನು?

ವಾಹನ ದಟ್ಟಣೆಯ ರಸ್ತೆಯ ಮಧ್ಯೆ ಅಪಾಯಕಾರಿಯಾಗಿ ರೀಲ್ಸ್ ಮಾಡುತ್ತಿದ್ದ ಯುವಕನಿಗೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಯಾವ ಕ್ರಮ ತೆಗೆದುಕೊಂಡಿದ್ದಾರೆ ಎನ್ನುವುದು ಕುತೂಹಲಕಾರಿ ಆಗಿದೆ.

Dangerous Reel Filming on Busy Road Sparks Outrage sat

ಇತ್ತೀಚಿನ ಯುವಜನರು ರೀಲ್ಸ್ ಮಾಡುವ ಹುಚ್ಚಿಗೆ ಬಿದ್ದು, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕ್ಯಾಮೆರಾದ ಮುಂದೆ ಕುಣಿದು, ಹುಚ್ಚಾಟ ಮಾಡುವುದು ಹೆಚ್ಚಾಗುತ್ತಿದೆ. ಇಲ್ಲೊಬ್ಬ ಯುವಕ ಅತ್ಯಂತ ವಾಹನ ದಟ್ಟಣೆಯ ರಸ್ತೆಯ ನಡುವೆ ನಿಂತುಕೊಂಡು ಅಪಾಯಕಾರಿಯಾಗಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾನೆ. ಆದರೆ, ವಾಹನಗಳಿಗೆ ಭಾರೀ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಜೀಪ್ ಬಂದಿದೆ. ಮುಂದೆ ಏನಾಯಿತು ಎಂದು ನೀವೇ ಈ ವಿಡಿಯೋದಲ್ಲಿ ನೋಡಿ..

ಕೆಲವೊಮ್ಮೆ ರೀಲ್ಸ್‌ ಮಾಡುವವರು ವಿಡಿಯೋ ಚಿತ್ರೀಕರಣ ಮಾಡುವಾಗ ಮಿತಿ ಮೀರುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಹಳ ಸಕ್ರಿಯವಾಗಿರುವ ಈ ಕಾಲದಲ್ಲಿ ವಿಡಿಯೋ ಮತ್ತು ರೀಲ್‌ಗಳನ್ನು ಚಿತ್ರೀಕರಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ, ಇತರರಿಗೆ ತೊಂದರೆಯುಂಟುಮಾಡುವ ರೀತಿಯಲ್ಲಿ ರೀಲ್‌ಗಳನ್ನು ಚಿತ್ರೀಕರಿಸುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ವಿಡಿಯೋ ಚಿತ್ರೀಕರಣವು ತಮಗಷ್ಟೇ ಅಲ್ಲ, ಇತರರಿಗೂ ಅಪಾಯವನ್ನು ಉಂಟುಮಾಡಬಹುದು ಎಂಬ ಸಾಮಾನ್ಯ ತಿಳುವಳಿಕೆಯೂ ಇಲ್ಲದೆ ರೀಲ್ಸ್ ಮಾಡುವುದನ್ನು ಸ್ವತಃ ಜನರೇ ವಿರೋಧಿಸುತ್ತಾರೆ.

ಇಂತಹ ಹಲವಾರು ವಿಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಅದೇ ರೀತಿಯ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೊಳಗಾಗಿದೆ. ವಾಹನ ಸಂಚಾರ ಇರುವ ರಸ್ತೆಯಲ್ಲಿ ಯುವಕನೊಬ್ಬ ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದು. ಇದಕ್ಕಾಗಿ ಟ್ರೈಪಾಡ್‌ನಲ್ಲಿ ಫೋನ್ ಇರಿಸಿದ ಯುವಕ ವಾಹನಗಳು ವೇಗವಾಗಿ ಓಡಾಡುವ ರಸ್ತೆ ಎಂಬುದರ ಅರಿವೂ ಇಲ್ಲದೇ ರಸ್ತೆಯಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾನೆ.

ಇದನ್ನೂ ಓದಿ: ಪಾಕಿಸ್ತಾನದ ಸೀಮಾ ಹೈದರ್ ಹಾಗೂ ಸಚಿನ್‌ ದಂಪತಿ ಹೆಸರಲ್ಲಿ ₹100 ಕೋಟಿ ವಂಚನೆ!

ತನ್ನ ಫೋನ್ ಅನ್ನು ಟ್ರೈಪ್ಯಾಡ್ ಸ್ಟ್ಯಾಂಡ್‌ನಲ್ಲಿಟ್ಟು ನಿಲ್ಲಿಸಿದ ನಂತರ ಯುವಕ ರಸ್ತೆಯ ಒಂದು ಬದಿಯಿಂದ ನಡೆದುಕೊಂಡು ಹೋಗಿ ಮತ್ತೊಂದು ರಸ್ತೆಯಲ್ಲಿ ನಿಂತು ನೃತ್ಯ ಮಾಡುವುದನ್ನು ನೋಡಬಹುದು. ಯುವಕನ ಸಮೀಪದಲ್ಲೇ ವಾಹನಗಳು ಹಾದು ಹೋಗುತ್ತಿವೆ. ಕೆಲವು ವಾಹನಗಳು ಈತನನ್ನು ಅವೈಡ್ ಮಾಡಿ ರಸ್ತೆಯ ಬದಿಗೆ ಚಲಿಸುತ್ತವೆ. ಇನ್ನು ಕೆಲವು ವಾಹನಗಳು ವೇಗವಾಗಿ ಈತನ ಪಕ್ಕದಲ್ಲಿಯೇ ಬುರ್ರೆಂದು ಹಫಗುತ್ತವೆ. ಈ ರೀತಿಯ ಅಪಾಯಕಾರಿ ರೀಲ್ಸ್ ಚಿತ್ರೀಕರಣವು ಇತರ ಪ್ರಯಾಣಿಕರಿಗೆ ಆತಂಕವನ್ನುಂಟುಮಾಡಿದೆ. ವಿಡಿಯೋದ ಕೊನೆಯಲ್ಲಿ, ಪೊಲೀಸ್ ವಾಹನವೊಂದು ಯುವಕನ ಬಳಿ ಬಂದು ನಿಲ್ಲುವುದನ್ನು ಮತ್ತು ಪೊಲೀಸರು ಯುವಕನನ್ನು ಏನೋ ಕೇಳುವುದನ್ನು ನೋಡಬಹುದು. ಆದರೆ, ಪೊಲೀಸರಿಗೆ ಯುವಕ ಏನು ಸ್ಪಷ್ಟೀಕರಣ ನೀಡಿದ್ದಾನೆ, ಅವರಿಂದ ತಪ್ಪಿಸಿಕೊಳ್ಳಲು ಹೇಗೆಲ್ಲಾ ಪರದಾಡಿದ್ದಾನೆ ಎಂಬ ವಿಡಿಯೋ ಇದರಲ್ಲಿ ಲಭ್ಯವಿಲ್ಲ.

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ತನ್ನ ಅಥವಾ ಇತರರ ಜೀವ ಮತ್ತು ಸುರಕ್ಷತೆಯನ್ನು ಲೆಕ್ಕಿಸದೆ ಯುವಕ ವರ್ತಿಸಿದ್ದಾನೆ ಎಂದು ಹಲವರು ಹೇಳುತ್ತಿದ್ದಾರೆ. ಇದು ಸಂಪೂರ್ಣ ಮೂರ್ಖತನದಿಂದ ಕೂಡಿದ ಕೃತ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ಸುಮ್ನೆ ನಿಂತಿದ್ದ ಪೊಲೀಸಪ್ಪನ ಪುಸಲಾಯಿಸಿದ ಸುಂದ್ರಿ: ಮುಂದಾದದ್ದು ಮಾತ್ರ ದುರಂತ! ವಿಡಿಯೋ ವೈರಲ್‌

Latest Videos
Follow Us:
Download App:
  • android
  • ios