Asianet Suvarna News Asianet Suvarna News

ಈವರೆಗೆ ದಲಿತರು ಮಿಸ್‌ ಇಂಡಿಯಾ ಆಗಿಲ್ಲ: ರಾಹುಲ್ ಗಾಂಧಿ

ಈವರೆಗೆ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರ ಪಟ್ಟಿ ನೋಡಿದೆ. ಆದರಲ್ಲಿ ದಲಿತ, ಆದಿವಾಸಿ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬರೂ ಇರಲಿಲ್ಲ. ಆದರೆ ಮಾಧ್ಯಮಗಳು ಹಾಡು, ಕುಣಿತ, ಕ್ರಿಕೆಟ್, ಬಾಲಿವುಡ್ ಬಗ್ಗೆ ಮಾತಾಡುತ್ತವೆಯೇ ಹೊರತು ರೈತರು ಮತ್ತು ಕಾರ್ಮಿಕರ ಬಗ್ಗೆ ಅಲ್ಲ ಎಂದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ

Dalits have not been Miss India so far says Leader of Opposition in Lok Sabha rahul gandhi grg
Author
First Published Aug 25, 2024, 7:34 AM IST | Last Updated Aug 25, 2024, 7:34 AM IST

ಪ್ರಯಾಗ್‌ರಾಜ್(ಆ.25):  ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದ ಕುರಿತ ತಮ್ಮ ಕಳಕಳಿಯನ್ನು ಮತ್ತೊಮ್ಮೆ ಪುನರುಚ್ಚರಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ದೇಶವ್ಯಾಪಿ ಜಾತಿಗಣತಿಗೆ ಮತ್ತೊಮ್ಮೆ ಆಗ್ರಹ ಮಾಡಿದ್ದಾರೆ. 

ಇಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, 'ನೀತಿಗಳ ರಚನೆಗೆ ಜಾತಿಗಣತಿ ಅಡಿಪಾಯವಿದ್ದಂತೆ ಎಂದು ಕಾಂಗ್ರೆಸ್ ನಂಬಿದೆ. ಸಂವಿಧಾನ ರಕ್ಷಣೆ ಬಡವರು, ಕಾರ್ಮಿಕರು, ಬುಡಕಟ್ಟು ಜನಾಂಗದವರಿಂದ ಆಗುತ್ತಿದೆಯೇ ಹೊರತು ಅದಾನಿ ಅಂಥವರಿಂದಲ್ಲ' ಎಂದಿದ್ದಾರೆ. 

ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್‌ ರಾಜಿ ಮಾಡಿಕೊಳ್ಳುತ್ತಿದೆಯೇ? ರಾಹುಲ್‌ ಗಾಂಧಿಗೆ 10 ಪ್ರಶ್ನೆ ಕೇಳಿದ ಅಮಿತ್‌ ಶಾ!

ದೇಶದ ಶೇ.90ರಷ್ಟು ಜನರು ವ್ಯವಸ್ಥೆಯಿಂದ ಹೊರಗಿದ್ದಾರೆ. ಅವರಿಗೆ ಪಾಲ್ಗೊಳ್ಳುವಿಕೆಯ ಹಕ್ಕು ಸಿಗದಿದ್ದರೆ ಸಂವಿಧಾನ ರಕ್ಷಣೆ ಆಗದು. ಹೀಗಾಗಿ ಜಾತಿಗಣತಿ ಅಗತ್ಯ ಎಂದಿದ್ದಾರೆ. 

ಮಿಸ್ ಇಂಡಿಯಾ ಆಗಿಲ್ಲ: 

ಈ ನಡುವೆ ಈವರೆಗೆ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರ ಪಟ್ಟಿ ನೋಡಿದೆ. ಆದರಲ್ಲಿ ದಲಿತ, ಆದಿವಾಸಿ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬರೂ ಇರಲಿಲ್ಲ. ಆದರೆ ಮಾಧ್ಯಮಗಳು ಹಾಡು, ಕುಣಿತ, ಕ್ರಿಕೆಟ್, ಬಾಲಿವುಡ್ ಬಗ್ಗೆ ಮಾತಾಡುತ್ತವೆಯೇ ಹೊರತು ರೈತರು ಮತ್ತು ಕಾರ್ಮಿಕರ ಬಗ್ಗೆ ಅಲ್ಲ' ಎಂದಿದ್ದಾರೆ.

Latest Videos
Follow Us:
Download App:
  • android
  • ios