ಬೆಂಗಳೂರು(ಜೂ.05): ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಆಡಳಿತ ಭಾಷೆ, ಪತ್ರವ್ಯವಹಾರ, ಪ್ರಮಾಣ ಪತ್ರಗಳಲ್ಲಿ ‘ದಲಿತ’ ಎನ್ನುವ ಪದವನ್ನು ಬಳಸದೇ ಪರಿಶಿಷ್ಟಜಾತಿ/ ಪರಿಶಿಷ್ಟಪಂಗಡ ಎಂದು ಬಳಸುವಂತೆ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಗುರುವಾರ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಈ ವಿಷಯ ತಿಳಿಸಿದ್ದಾರೆ. ‘ಹರಿಜನ’ ಮತ್ತು ‘ಗಿರಿಜನ’ ಎನ್ನುವ ಪದವನ್ನು ಬಳಕೆ ಮಾಡಬಾರದು. ಆಂಗ್ಲ ಭಾಷೆಯಲ್ಲಿ ಎಸ್‌ಸಿ/ಎಸ್‌ಟಿ ಎಂದು ನಮೂದಿಸಬಹುದಾಗಿದೆ.

1 ಕೊರೋನಾ ಇಂಜೆಕ್ಷನ್‌ಗೆ 7000 ರುಪಾಯಿ..!

ಇತರೇ ಭಾಷೆಗಳಲ್ಲಿ ಸೂಕ್ತ ಭಾಷಾಂತರಗೊಳಿಸಿದ ಪದವನ್ನು ಬಳಸಬೇಕು. ರಾಜ್ಯದಲ್ಲಿ ‘ಪರಿಶಿಷ್ಟಜಾತಿ/ಪರಿಶಿಷ್ಟಪಂಗಡ’ ಎಂದು ನಮೂದಿಸಬಹುದು ಎಂದು ತಿಳಿಸಿದ್ದಾರೆ. ಎಸ್‌ಟಿ, ಎಸ್‌ಸಿ ಜನರ ಮೇಲೆ ದೌರ್ಜನ್ಯ, ಜಾತಿ ನಿಂದನೆ ಘಟನೆಗಳೂ ನಡೆಯುತ್ತಲೇ ಇರುತ್ತವೆ.

'ದಲಿತ' ಎನ್ನುವ ಪದ ಬಳಕೆಯ ಮೂಲಕವೇ ಜನರನ್ನು ನಿಂದಿಸುವ ಘಟನೆಯೂ ವರದಿಯಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ 'ದಲಿತ' ಪದವನ್ನೇ ಬಳಸದಂತೆ ಸೂಚನೆ ಹೊರಡಿಸಿರುವುದು ಮಹತ್ವದ್ದಾಗಿದೆ.