ಸುಪ್ರೀಂ ಕೋರ್ಟ್ ನೆರವಿನಿಂದ ದಲಿತ ಯುವಕನಿಗೆ ಸಿಕ್ತು ಐಐಟಿ ಸೀಟ್

ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಡಿ.ವೈ. ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠ ಯುವಕನಿಗೆ ನೆರವು ನೀಡುವುದಾಗಿ ಭರವಸೆ ನೀಡಿತ್ತು.

Dalit Student Atul Kumar admission to IIT Dhanbad Electrical Engineering course mrq

ನವದೆಹಲಿ: ನಿಗದಿತ ಅವಧಿಯೊಳಗೆ ಪ್ರವೇಶ ಶುಲ್ಕ ಪಾವತಿಸಲು ಆಗದ ಕಾರಣ ಐಐಟಿ ಧನಬಾದ್‌ನಲ್ಲಿ ಕಳೆದುಕೊಂಡಿದ್ದ ದಲಿತ ಯುವಕನಿಗೆ ಮರಳಿ ಸೀಟು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಂವಿಧಾನದ 142 ವಿಧಿ ಅಡಿ ಸುಪ್ರೀಂಕೋರ್ಟಿಗಿರುವ ವಿಶೇಷ ಶಕ್ತಿ ಬಳಸಿ ಈ ಆದೇಶ ಹೊರಡಿಸಿದೆ. ಅತುಲ್ ಕುಮಾರ್‌ಎಂಬ ವಿದ್ಯಾರ್ಥಿ ಜಾರ್ಖಂಡ್‌ನಲ್ಲಿನ ಐಐಟಿ ಧನ್‌ಬಾದ್‌ನಲ್ಲಿ ಪ್ರವೇಶ ಪಡೆಯಲು ಎಲ್ಲಾ ಪರೀಕ್ಷೆ ಎದುರಿಸಿದ್ದ. ಆದರೆ ಕೊನೆಯ ದಿನದ ಒಳಗೆ ಶುಲ್ಕ ಪಾವತಿ ಮಾಡಲು ಆಗಿರಲಿಲ್ಲ. ಹೀಗಾಗಿ ಇವರ ಪ್ರವೇಶವನ್ನು ಐಐಟಿ ನಿರಾಕರಿಸಿತ್ತು. 

ಇದನ್ನು ವಿರೋಧಿಸಿ ಅತುಲ್ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಪೀಠ, ಶುಲ್ಕ ಕಾರಣ ಇಂಥ ಪ್ರತಿಭಾವಂತ ವಿದ್ಯಾರ್ಥಿ ಹೊರ ಹೋಗಲು ನಾವು ಬಿಡಬಾರದು. ಅವಕಾಶದಿಂದ ವಂಚಿತನಾಗಲು ಅನುವು ಮಾಡಿಕೊಡಬಾರದು. ಹೀಗಾಗಿ ಸಂವಿಧಾನದ 142ರ ವಿಶೇಷ ಅಧಿಕಾರದ ಅಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಐಐಟಿ ಧನಬಾದ್‌ಗೆ ಆದೇಶ ಹೊರಡಿಸಲಾಗುವುದು ಎಂದು ಹೇಳಿತು.

ಉತ್ತರ ಪ್ರದೇಶದ ಮುಜಫ್ಫರ್‌ನಗರದ ಕೂಲಿ ಕಾರ್ಮಿಕನ ಮಗ 18 ವರ್ಷದ ಅತುಲ್ ಕುಮಾರ್‌ ಎನ್ನುವ ದಲಿತ ಯುವಕ ಧನಬಾದ್‌ ಐಐಟಿಯಲ್ಲಿ ಸೀಟ್‌ ಪಡೆದುಕೊಂಡಿದ್ದ. ಆದರೆ ಕಾಲೇಜಿಗೆ 17,500 ರು. ಹಣವನ್ನು ಠೇವಣಿ ರೂಪದಲ್ಲಿ ಕಟ್ಟಬೇಕಿತ್ತು. ಬಡ ಕುಟುಂಬದ ಈ ಯುವಕನಿಗೆನಿಗದಿತ ಸಮಯದೊಳಗೆ ಹಣವನ್ನು ಕಟ್ಟುವುದಕ್ಕೆ ಸಾಧ್ಯವಾಗದೇ ಐಐಟಿ ಪ್ರವೇಶದ ಅವಕಾಶ ಕೈ ತಪ್ಪಿ ಹೋಗಿತ್ತು. 

ಕೆಲಸ ಬಿಟ್ಟು ಹೋಗಿದ್ದ ಉದ್ಯೋಗಿಯನ್ನು ಕರೆತರಲು ₹22000 ಕೋಟಿ ಖರ್ಚು ಮಾಡಿದ್ಯಾಕೆ ಗೂಗಲ್?

Latest Videos
Follow Us:
Download App:
  • android
  • ios