ಹೈದರಾಬಾದ್(ಜೂ.25): ದೇಶದ ಬಹುತೇಕ ಎಲ್ಲಾ ನದಿಗಳು, ಸರೋವರ, ಪ್ರವಾಸಿ ತಾಣಗಳು, ಸಮುದ್ರ  ತ್ಯಾಜ್ಯಗಳಿಂದ ಮಲಿನಗೊಂಡಿದೆ. ಪ್ಲಾಸ್ಟಿಕ್ ಸೇರಿದಂತೆ ಹಲವು ತ್ಯಾಜ್ಯಗಳು ಜಲಚರ ಜೀವರಾಶಿಗಳನ್ನೇ ನುಂಗುತ್ತಿದೆ. ಹೀಗೆ ತ್ಯಾಜ್ಯಗಳಿಂದ ತುಂಬಿದ ಜಮ್ಮ ಮತ್ತು ಕಾಶ್ಮೀರದ ದಾಲ್ ಸರೋವರಕ್ಕೆ ಹೊಸ ರೂಪ ನೀಡಲು 7 ವರ್ಷದ ಬಾಲಕಿ ಜನ್ನತ್ ನಿರ್ಧರಿಸಿದ್ದರು. ಕಳದೆರಡು ವರ್ಷದಿಂದ ಸತತವಾಗಿ ದಾಲ್ ಸರೋವರವನ್ನು ಶುಚಿ ಮಾಡುವ ಕಾಯದಲ್ಲಿ ತೊಡಗಿದ್ದಾಳೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಗೂ ಅವಕಾಶ, ಕೇಂದ್ರ ಸಂಪುಟದಿಂದ ಐತಿಹಾಸಿಕ ನಿರ್ಧಾರ!.

3ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿ ಜನ್ನತ್, ತನ್ನ ಕೈಲಾದಷ್ಟು ಸರೋವರ ಶುಚಿ ಮಾಡಿದ್ದಾಳೆ. ಜಮ್ಮ ಕಾಶ್ಮೀರದ ಸ್ಥಳೀಯ ಮಾಧ್ಯಮಗಳಲ್ಲಿ ಜನ್ನತ್ ಕುರಿತು ಸುದ್ದಿ ಪ್ರಸಾರವಾಗಿತ್ತು. ಇದೀಗ ಜನ್ನತ್ ಪರಿಸರ ಕಾಳಜಿಯನ್ನು ಹೈದರಾಬಾದ್ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ. 

 

ಜನ್ನತ್ ತಂದೆಯೆ ಗೆಳೆಯರೊಬ್ಬರು ಹೈದರಾಬಾದ್‌ನಿಂದ ಕರೆ ಮಾಡಿ ಈ ವಿಚಾರ ಹೇಳಿದ್ದರು. ಪುತ್ರಿಯ ಸಾಧನೆ ಇದೀಗ ಹೈದರಾಬಾದ್ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ ಎಂದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜನ್ನತ್, ತಂದೆಯಿಂದ ಸ್ಪೂರ್ತಿ ಪಡೆದು ಶುಚಿತ್ವ ಕಾರ್ಯದಲ್ಲಿ ತೊಡಗಿದ್ದೇನೆ. ಇದೀಗ ವಿದ್ಯಾರ್ಥಿನಿಯಾಗಿರುವಾಗಲೇ ನನ್ನು ಕತೆ ಪಠ್ಯ ಪುಸ್ತಕದಲ್ಲಿ ಬಂದಿರುವುದು ಸಂತಸ ತಂದಿದೆ ಎಂದಿದ್ದಾಳೆ.