* ಕೊಡಗು, ಉ.ಕ., ದ.ಕ. ಚಾ.ನಗರ, ಉಡುಪಿಯಲ್ಲಿ ಏರಿಕೆ* ಕರ್ನಾಟಕದ 5 ಸೇರಿ 37 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ: ಕೇಂದ್ರ* 5 ರಾಜ್ಯಗಳಲ್ಲಿ ಸೋಂಕು ‘ಆರ್‌’ ದರ ಹೆಚ್ಚಳ* ಕೇರಳದಲ್ಲೇ ಶೇ.51ರಷ್ಟು ಹೊಸ ಪ್ರಕರಣ

ನವದೆಹಲಿ(ಆ.11): ಕಳೆದ 2 ವಾರದಲ್ಲಿ ಕರ್ನಾಟಕದ 5 ಜಿಲ್ಲೆಗಳು ಸೇರಿ 37 ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಳವಾಗುತ್ತಿದೆ. ಇದು ಕಳವಳಕಾರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಕಳವಳ ವ್ಯಕ್ತಪಡಿಸಿದೆ. ಕರ್ನಾಟಕದ ಆ 5 ಜಿಲ್ಲೆಗಲೆಂದರೆ ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಾಮರಾಜನಗರ ಹಾಗೂ ಉಡುಪಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ, ಹಿಮಾಚಲ ಪ್ರದೇಶ, ಪಂಜಾಬ್‌, ಗುಜರಾತ್‌, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸೋಂಕು ಮರುಉತ್ಪತ್ತಿ (ಒಬ್ಬರಿಂದ ಇನ್ನೊಬ್ಬರಿಗೆ ಹರಡುವಿಕೆ- ‘ಆರ್‌’ ದರ) ಪ್ರಮಾಣ 1ಕ್ಕಿಂತ ಹೆಚ್ಚಿದೆ. ಇದೂ ಕೂಡ ಅಪಾಯಕಾರಿ ಎಂದಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ಅಧಿಕಾರಿಗಳು, ಕಳೆದ 7 ದಿನಗಳಿಂದ ಭಾರತದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಕೋವಿಡ್‌ ಪ್ರಕರಣಗಳ ಪೈಕಿ ಶೇ.51.51ರಷ್ಟುಕೇಸುಗಳು ಕೇರಳವೊಂದರಲ್ಲಿಯೇ ಪತ್ತೆಯಾಗುತ್ತಿವೆ ಎಂದಿದೆ.

ಕೇರಳದ 11 ಜಿಲ್ಲೆ, ತಮಿಳುನಾಡಿನ 7, ಕರ್ನಾಟಕದ 5 ಜಿಲ್ಲೆಗಳೂ ಸೇರಿ ದೇಶದ 9 ರಾಜ್ಯಗಳ 37 ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕು ಪ್ರಮಾಣ ಏರುಗತಿಯಲ್ಲಿದೆ. 11 ರಾಜ್ಯಗಳ 44 ಜಿಲ್ಲೆಗಳಲ್ಲಿ ವಾರದ ಸೋಂಕು ಪ್ರಮಾಣ ಶೇ.10ಕ್ಕಿಂತ ಅಧಿಕವಿದೆ,

ಈ ನಡುವೆ ಮಹಾರಾಷ್ಟ್ರದಲ್ಲಿ 34 ಸೋಂಕಿತರೂ ಸೇರಿ ದೇಶದಲ್ಲಿ ಒಟ್ಟು 86 ಅಪಾಯಕಾರಿ ಡೆಲ್ಟಾಪ್ಲಸ್‌ ವೈರಸ್‌ ಮಾದರಿ ಪತ್ತೆಯಾಗಿವೆ ಎಂದು ಎಚ್ಚರಿಸಿದ್ದಾರೆ.